ಭೂಪಾಲ್:ಮಹಿಳೆಯೊಬ್ಬರು ಮೃತಪಟ್ಟ 10 ವರ್ಷಗಳಿಕ 7 ಕೋಟಿ ರೂ. ತೆರಿಗೆ ನೋಟಿಸ್​​ನ್ನು ಆಕೆಯ ಕುಟುಂಬಸ್ಥರು ಸ್ವೀಕರಿಸಿರುವ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ.ಉಷಾ ಸೋನಿ ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ದು, 7 ಕೋಟಿ ರೂ. ತೆರಿಗೆ ಪಾವತಿಗೆ ಆದೇಶ ನೀಡಿದೆ. ಈ ಮೊತ್ತಕ್ಕಿಂತ ಹೆಚ್ಚಾಗಿ ಆಕೆಯ ಕುಟುಂಬವನ್ನು ದಿಗ್ಭ್ರಮೆಗೊಳಿಸಿರುವ ಸಂಗತಿಯೆಂದರೆ, ಶಿಕ್ಷಕಿ 2013 ರಲ್ಲಿ ಮೃತಪಟ್ಟಿದ್ದು, ಈ ನೋಟೀಸ್ 2017-18 ರ ಆದಾಯದ ಮೌಲ್ಯಮಾಪನಕ್ಕೆ ಸಂಬಂಧಿಸಿದೆ.ಇದನ್ನೂ ಓದಿ: ಜೀವಕ್ಕೆ ಮಾರಕವಾಯ್ತಾ ಅತಿಯಾದ ಡಯಟ್​? ಹಸಿ ತರಕಾರಿ, ಹಣ್ಣು ಸೇವಿಸುತ್ತಿದ್ದ ಮಹಿಳೆ ನಿಗೂಢ ಸಾವುಆಕೆಯ ಮಗ ಪವನ್ ಸೋನಿ ಈ ಕುರಿತು ದಾಖಲಿಸಿದ್ದು, ತನ್ನ ತಾಯಿ 2013 ರ ನವೆಂಬರ್ 16 ರಂದು ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾಗಿದ್ದು, ಆದಾಯ ತೆರಿಗೆಯ ನೋಟಿಸ್ 2017-18ರ ವರ್ಷಕ್ಕೆ ಸಂಬಂಧಿಸಿದೆ. ತನ್ನ ತಾಯಿಯ ಪ್ಯಾನ್ ಕಾರ್ಡ್​ (ಶಾಶ್ವತ ಖಾತೆ ಸಂಖ್ಯೆ) ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನೋಟಿಸ್​​ನಲ್ಲಿ ‘ನ್ಯಾಚುರಲ್ ಕಾಸ್ಟಿಂಗ್’ ಎಂಬ ಕಂಪನಿಯನ್ನು ಉಲ್ಲೇಖಿಸಲಾಗಿದ್ದು, ಸ್ಕ್ರ್ಯಾಪ್ ವಸ್ತುಗಳನ್ನುನ ಖರೀದಿಸಿ ಮಾರಾಟ ಮಾಡುವುದಾಗಿದೆ ಎಂದು ತಿಳಿಸಿದ್ದಾರೆ.ಕೇವಲ ಈ ಕುಟುಂಬ ಮಾತ್ರ ಅಲ್ಲ. ಆದಿವಾಸಿಗಳ ಪ್ರಾಬಲ್ಯವಿರುವ ಬೇತುಲ್ ಜಿಲ್ಲೆಯಲ್ಲಿ ಸುಮಾರು 44 ಜನರು 1 ಕೋಟಿ ರೂ. ಯಿಂದ 10 ಕೋಟಿ ರೂ. ಮೊತ್ತದ ತೆರಿಗೆ ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದ್ದು, ಪ್ಯಾನ್​ ದುರುಪಯೋಗದ ಬಗ್ಗೆ ಇಲ್ಲಿಯವರೆಗೆ ಎರಡು ದೂರುಗಳು ಬಂದಿವೆ. ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆತುಲ್ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 16 =
Remember me
