ನವದೆಹಲಿ:ಆದಾಯ ತೆರಿಗೆ ಪಾವತಿ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮೂರನೇ ಬಾರಿಗೆ ವಿಸ್ತರಣೆ ಮಾಡಿದ್ದು, 2019-20ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ಪಾವತಿ ಗಡುವನ್ನು ಜನವರಿ 10ರವರೆಗೂ ವಿಸ್ತರಿಸಿದೆ.
ಖಾತೆಗಳ ಆಡಿಟ್ ಪಡೆಯಬೇಕಾದ ವೈಯಕ್ತಿಕ ಮತ್ತು ಕಂಪನಿಗಳಿಗೆ ಐಟಿ ರಿಟರ್ನ್ಸ್​ ಸಲ್ಲಿಸುವ ಗಡುವನ್ನು ಫೆಬ್ರವರಿ 15ರವರೆಗೆ 15 ದಿನಗಳು ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಲಾಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ವಿಷ್ಣು ಪುತ್ಥಳಿ ಧ್ವಂಸ ಅವಮಾನವಲ್ಲ, ಆಶೀರ್ವಾದ ಎಂದ ಭಾರತಿ ವಿಷ್ಣುವರ್ಧನ್​
ವೈಯಕ್ತಿಕ ಮತ್ತು ಕಂಪೆನಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಅಂತಿಮ ದಿನಾಂಕ ಕ್ರಮವಾಗಿ ಡಿಸೆಂಬರ್ 31, 2020 ಮತ್ತು ಜನವರಿ 31, 2021 ಆಗಿದೆ. ಡಿಸೆಂಬರ್​ 28ರವರೆಗೂ 4.54 ಕೋಟಿಗೂ ಅಧಿಕ ಐಟಿ ರಿಟರ್ನ್ಸ್​ ಸಲ್ಲಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 4.77 ಕೋಟಿ ಸಲ್ಲಿಕೆಯಾಗಿತ್ತು.
ಕರೊನಾ ವೈರಸ್​ ಸ್ಪೋಟಗೊಂಡ ಬಳಿಕ ಶಾಸನಬದ್ಧ ಅನುಸರಣೆಗಳನ್ನು ಪೂರೈಸುವಲ್ಲಿ ತೆರಿಗೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಗಡುವನ್ನು ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!
ಡಿ.​ 31ರ ಒಳಗೆ ಆದಾಯ ತೆರಿಗೆ ಫೈಲ್​ ಮಾಡಿಲ್ಲ ಅಂದರೆ ಬೀಳಬಹುದು 10 ಸಾವಿರ ದಂಡ!

ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

ಬಿಹಾರದಲ್ಲಿ ಮುರಿದು ಬೀಳುತ್ತಾ ನಿತೀಶ್​ ಸರ್ಕಾರ? ಜೆಡಿಯುನ 17 ಶಾಸಕರು ಆರ್​ಜೆಡಿಗೆ ಬರಲು ಸಿದ್ಧರಿದ್ದಾರೆ ಎಂದ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
