ದೆಹಲಿ:ಭಾರತದಲ್ಲಿ ವಾಯುಮಾಲಿನ್ಯದಿಂದ ಉಂಟಾಗುವ ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಪ್ರಮಾಣ ಕಳೆದ ಎರಡು ದಶಕಗಳಲ್ಲೇ ಎರಡೂವರೆ ಪಟ್ಟು ಹೆಚ್ಚಳವಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್​ಇ) ಹೊಸ ಅಧ್ಯಯನ ವರದಿ ತಿಳಿಸಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಸಿಎಸ್​ಇ ಅಧ್ಯಯನ ನಡೆಸಿದ 2019ರ ಪರಿಸರ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದರು.
ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮಾಲಿನ್ಯದ ಮಾಪನ ಪಿಎಂ 2.5 ಇದ್ದು, ಇದು ಎರಡು ದಶಕದಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಸಂಭವಿಸುತ್ತಿರುವ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ವಾಯುಮಾಲಿನ್ಯದಿಂದ ಆಗುತ್ತಿದೆ ಎಂದು ವರದಿ ಬೊಟ್ಟುಮಾಡಿದೆ. ವಾಯುಮಾಲಿನ್ಯದಿಂದ ಜಾಗತಿಕವಾಗಿ 66.70 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ ಭಾರತವೊಂದರಲ್ಲೇ 16.70 ಲಕ್ಷ ಜನರು ಮೃತಪಟ್ಟಿದ್ದಾರೆ. ಚೀನಾದಲ್ಲಿ ಈ ಸಂಖ್ಯೆ 18.50 ಲಕ್ಷ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ. ಈ ಎರಡೂ ರಾಜ್ಯಗಳಲ್ಲಿ ವ್ಯಕ್ತಿಯ ಸರಾಸರಿ ಆಯಸ್ಸು 2 ವರ್ಷ 5 ತಿಂಗಳಿಂದ ಎರಡುವ ವರ್ಷ ಒಂಬತ್ತು ತಿಂಗಳಷ್ಟು ಕಡಿಮೆಯಾಗಲು ವಾಯುಮಾಲಿನ್ಯವೇ ಕಾರಣವಾಗಿದೆ. 2021ರಲ್ಲಿ ತೀವ್ರ ವಾಯುಮಾಲಿನ್ಯದ ಕಾರಣ ರಾಜಧಾನಿ ದೆಹಲಿಯೊಂದರಲ್ಲೇ 54 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಷಿಕಾಗೋ ವಿವಿ ಎಚ್ಚರಿಸಿತ್ತು:ಭಾರತದಲ್ಲಿ ವಾಯುಮಾಲಿನ್ಯದ ಪ್ರಮಾಣ ಭೌಗೋಳಿಕವಾಗಿ ವಿಸ್ತರಣೆಯಾಗಿದೆ ಮತ್ತು ಉತ್ತರ ಭಾರತದಲ್ಲಿ ಇದೇ ಪ್ರಮಾಣ ಮುಂದುವರಿದರೆ ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ ಒಂಬತ್ತಕ್ಕೂ ಹೆಚ್ಚಿನ ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕಕಾರಿ ವಿಚಾರವನ್ನು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್​ಟಿಟ್ಯೂಟ್​ನ ಅಧ್ಯಯನ ವರದಿ ಕಳೆದ ವರ್ಷವೇ ಎಚ್ಚರಿಸಿತ್ತು. ವಾಯುಮಾಲಿನ್ಯ ನಿಯಂತ್ರಣದಲ್ಲಿದ್ದರೆ ದೆಹಲಿಯಲ್ಲಿ 18 ಸಾವಿರ, ಬೆಂಗಳೂರಿನಲ್ಲಿ 12 ಸಾವಿರ ಜೀವಗಳನ್ನು ಉಳಿಸಬಹುದಿತ್ತು ಎಂದೂ ಹೇಳಿತ್ತು.

ಶಿಶುಗಳ ಸಾವಿನ ಸಂಖ್ಯೆ ಏರಿಕೆ:ವಾಯುಮಾಲಿನ್ಯದ ಪರಿಣಾಮ 2019ರಲ್ಲಿ ಜಾಗತಿಕ ವಾಗಿ 4.76 ಲಕ್ಷ ಶಿಶುಗಳು ಜನಿಸಿದ 1 ತಿಂಗಳಲ್ಲೇ ಸಾವನ್ನ ಪ್ಪಿವೆ. ಈ ಪೈಕಿ 1.16 ಲಕ್ಷ ಸಾವು ಭಾರತದಲ್ಲಿ ಸಂಭವಿಸಿವೆ.
ಅಪಾಯದ ಮಟ್ಟದಲ್ಲಿ ಎಕ್ಯುಐ:ವಾಯು ಗುಣಮಟ್ಟ ಸೂಚ್ಯಂಕ ( ಎಕ್ಯುಐ) ಅಪಾಯದ ಮಟ್ಟ ಮೀರುತ್ತಿದೆ. ಭಾರತದ ಸುಮಾರು 14 ಕೋಟಿ ಜನರು ಎಕ್ಯುಐನ ಅಪಾಯಕಾರಿ ಮಟ್ಟಕ್ಕಿಂತ 10ರಿಂದ 15 ಪಟ್ಟು ಹೆಚ್ಚು ಮಾಲಿನ್ಯ ಹೊಂದಿರುವ ಗಾಳಿ ಸೇವಿಸುತ್ತಿದ್ದಾರೆ. ದೆಹಲಿ, ಮುಂಬೈ, ಕೋಲ್ಕತ, ಪುಣೆ ಸೇರಿದಂತೆ ದೇಶದ ರಾಜಧಾನಿ ಬಹುತೇಕ ನಗರಗಳು ಅಪಾಯದ ಮಟ್ಟಕ್ಕಿಂತ ತುಂಬ ಹೆಚ್ಚು ವಾಯುಮಾಲಿನ್ಯ ಹೊಂದಿವೆ.
ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮಹಿಳೆ; ಅಪಾಯವನ್ನು ಅಂದಾಜಿಸಿ ಧಾವಿಸಿ ರಕ್ಷಿಸಿದ ಪೊಲೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + six =
Remember me
