ನವದೆಹಲಿ:ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಪಕ್ಷದ ಅಮೋಘ ಗೆಲುವಿಗೆ ಜೆ.ಪಿ. ನಡ್ಡಾ ಸಮರ್ಥವಾಗಿ ನಿಭಾಯಿಸಿರುವುದು ಕಾರಣ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ:ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಸಿಎಂ ಹೇಳಿಕೆಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಡ್ಡಾ ಅವರ ಸಂಘಟನಾ ಕೌಶಲ್ಯ ಮತ್ತು ತೆರೆಮರೆಯಲ್ಲಿ ಅವರು ಮಾಡಿದ ದಣಿವರಿಯದ ಕೆಲಸ ಪಕ್ಷದ ಅದ್ಭುತ ಗೆಲುವಿಗೆ ಕಾರಣವಾಗಿದೆ ಎಂದು ಶ್ಲಾಘಿಸಿದರು,
ವೈಯಕ್ತಿಕ ದುಃಖದ ನಡುವೆಯೂ ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥರು ಚುನಾವಣಾ ಪ್ರಚಾರಕ್ಕೆ ಹೇಗೆ ಧುಮುಕಿದರು ಎಂಬುದರ ಕುರಿತು ಪ್ರಧಾನಿ ಮೋದಿ ವಿಶೇಷ ಉಲ್ಲೇಖವನ್ನು ಮಾಡಿದರು.
ಅವರು ಈ ಹಿಂದೆ ಶಾಸಕರಾಗಿ, ಸಚಿವರಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅದೇ ರೀತಿ ಪಕ್ಷದಲ್ಲಿನ ತಪ್ಪುಗಳನ್ನು ಸಮರ್ಥವಾಗಿ ನಿಭಾಯಿಸಿ ಚಾಣಾಕ್ಷತೆ ಮತ್ತು ಕಾರ್ಯತಂತ್ರಗಳಿಂದ ಮುನ್ನಡೆಸಿದ್ದಾರೆ. ಈ ವಿಜಯಗಳು ನಡ್ಡಾಜಿ ಅವರ ದಣಿವರಿಯದ ದುಡಿಮೆಗೆ ಸಲ್ಲಬೇಕು. ಅವರು ಜಾರಿಗೆ ತಂದ ಕಾರ್ಯತಂತ್ರಗಳು ನಮ್ಮನ್ನು ಇಂದಿಗೂ ಮುನ್ನಡೆಸಿವೆ. ಚುನಾವಣೆಗೆ ಮುನ್ನ ಅವರ ಕುಟುಂಬದಲ್ಲಿ ದುಃಖವಿತ್ತು. ಆದರೆ ಅವರು ಅದನ್ನು ತೋರ್ಪಡಿಸದೆ ಶ್ರಮಿಸುತ್ತಲೇ ಇದ್ದರು. ಪಕ್ಷವನ್ನು ಸಂಪೂರ್ಣ ಬದ್ಧತೆ ಮತ್ತು ಶ್ರದ್ಧೆಯಿಂದ ಮುನ್ನಡೆಸಿದರು ಎಂದು ಪ್ರಧಾನಿ ಮೋದಿ ಹೇಳಿದರು.
ಫಲಿತಾಂಶದ ಬಳಿಕ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ವಿಜಯೋತ್ಸವದಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.
ಮಿಜೋರಾಂನಲ್ಲಿ ಜಡ್​ಪಿಎಂಗೆ ಪ್ರಚಂಡ ಗೆಲುವು – ಅಧಿಕಾರ ಕಳೆದುಕೊಂಡ ಸಿಎಂ ಝೋರಂತಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 12 =
Remember me
