ನವದೆಹಲಿ: 1987ರಲ್ಲಿ ಕಿರುತೆರೆಯಲ್ಲಿ ಪ್ರಸಿದ್ಧಿ ಹೊಂದಿದ್ದ ರಮಾನಂದ ಸಾಗರ ಅವರ ‘ರಾಮಾಯಣ’ ಧಾರವಾಹಿಯಲ್ಲಿ ಸುಗ್ರೀವನ ಪಾತ್ರ ನಿರ್ವಹಿಸಿದ್ದ ಶ್ಯಾಮ್‌ಸುಂದರ್‌ ಕಲಾನಿ ನಿಧನ ಹೊಂದಿದ್ದಾರೆ.
ಹಲವು ತಿಂಗಳುಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹರಿಯಾಣದ ಕಲ್ಕಾ ನಿವಾಸಿ ಶ್ಯಾಮ್‌ಸುಂದರ್‌ ಏ. 7ರಂದು ನಿಧನರಾಗಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ರಾಮಾಯಣದಲ್ಲಿ ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಅವರು ಇಂದು ಟ್ವಿಟರ್‌ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸುದ್ದಿ ಬಹಿರಂಗಗೊಂಡಿದೆ.
‘ ಶ್ಯಾಮ್‌ಸುಂದರ ಅವರ ನಿಧನದ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ಅವರದ್ದು ತುಂಬಾ ಒಳ್ಳೆಯ ವ್ಯಕ್ತಿತ್ವವಾಗಿತ್ತು, ಜತೆಗೆ ಅವರು ಉತ್ತಮ ಕಲಾವಿದ ಕೂಡ, ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅರುಣ್‌ ಗೋಯಲ್‌ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಮೃತರ ಆತ್ಮಕ್ಕೆ ಟ್ವಿಟರ್‌ ಮೂಲಕ ಶಾಂತಿ ಕೋರಿದ್ದಾರೆ.
ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ಮನೆಯಲ್ಲಿಯೇ ಕುಳಿತವರು ಪುನಃ ಈ ರಾಮಾಯಣದ ಸವಿಯನ್ನು ಸವಿಯುವ ಸಲುವಾಗಿ ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿದೆ. (ಏಜನ್ಸೀಸ್‌)
ಶಾಲೆಗಳ ಪುನಾರಂಭದ ನಂತರವೇ ಎಸ್​ಎಸ್​ಎಲ್​ಸಿ ಪರೀಕ್ಷೆ: ಜೂನ್​ನಲ್ಲಿ ಆಯೋಜಿಸುವ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
