ಪೆರಿಂಥಲಮನ್ನ:ಅಪಘಾತದಲ್ಲಿ ಕೇರಳದ ಮಲ್ಲಪುರಂ ಜಿಲ್ಲೆಯ ಪೆರಿಂಥಲಮನ್ನದ ಎಂಇಎಸ್​ ಅಕಾಡೆಮಿ ಆಫ್​ ಮೆಡಿಕಲ್​ ಸೈನ್ಸ್​ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿನಿ ಮೃತಪಟ್ಟ ಪ್ರರಕಣಕ್ಕೆ ಸಂಬಂಧಿಸಿದಂತೆ ಆಕೆಯ ಸಹಪಾಠಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಅಶ್ವಿನ್​ ಎಂದು ಗುರುತಿಸಲಾಗಿದೆ. ಈತ ತ್ರಿಸ್ಸೂರ್​ ಮೂಲದ ನಿವಾಸಿ. ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ಚಾಲನೆ ಆರೋಪದ ಮೇಲೆ ಬಂಧಿಸಲಾಗಿದೆ. ಬೈಕ್​ನಲ್ಲಿ ಹುಡುಗಿಯರನ್ನು ಕೂರಿಸಿಕೊಂಡು ಬೇಕಾಬಿಟ್ಟಿ ಬೈಕ್​ ಚಾಲಯಿಸುವವರಿಗೆ ಈ ಪ್ರಕರಣ ಒಂದು ಪಾಠವಾಗಿದೆ. ಅಪಘಾತದಲ್ಲಿ ಮೃತಪಟ್ಟ ಎಂಬಿಬಿಎಸ್​ ವಿದ್ಯಾರ್ಥಿನಿಯನ್ನು ಅಲ್ಫೋನ್ಸಾ (22) ಎಂದು ಗುರುತಿಸಲಾಗಿದೆ. ಈಕೆ ಆಲಪ್ಪುಳದ ನಿವಾಸಿ.
ಇದನ್ನೂ ಓದಿ:ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿಗೆ ಬಿಗ್​ ಶಾಕ್​: ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ
ಅಲ್ಫೋನ್ಸಾ ಮತ್ತು ಅಶ್ವಿನ್​ ಸೋಮವಾರ ಬೆಳಗ್ಗೆ 6.50ರ ಸುಮಾರಿಗೆ ಥಿರುಕಾಡ್​ನಲ್ಲಿರುವ ಕೋಯಿಕ್ಕೋಡ್​-ಪಲಕ್ಕಾಡ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ಸಂಭವಿಸಿದ ಬೈಕ್​ ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಅಲ್ಫೋನ್ಸಾ ಮೃತಪಟ್ಟಿದ್ದಳು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನ್​ನನ್ನು ಸ್ಥಳೀಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಐಪಿಸಿ ಸೆಕ್ಷನ್​ 279ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬೆನ್ನಲ್ಲೇ ಅಶ್ವಿನ್​ನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
ಜನರ ಸೇವೆಗೆ ಅಣಿಯಾಗುತ್ತಿದ್ದ ಅಂತಿಮ ವರ್ಷದ MBBS​ ವಿದ್ಯಾರ್ಥಿನಿ ದುರಂತ ಸಾವು

VIDEO|ಮದುವೆ ಶಾಸ್ತ್ರ ನಡೀತಿದ್ದಾಗ ಎಂಟ್ರಿ ಕೊಟ್ಟ ಮಂಗಗಳು; ಕಪಿಷೇಷ್ಟೆಗೆ ವಧು-ವರ ಶಾಕ್​​!

ಕಂಪನಿಗಳನ್ನ ಪ್ರಶ್ನಿಸಿ, ಬಡ ಚಾಲಕರ ಮೇಲೇಕೆ ದೌರ್ಜನ್ಯ?;ಆಟೋ ಚಾಲಕರ ವಿರುದ್ಧ ಜನರ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 11 =
Remember me
