ಜೈಪುರ:ಇಲ್ಲಿನ ದೌಸಾ ಜೈಲಿನಿಂದಲೇ ಜೈಪುರ ಪೊಲೀಸ್ ಕಂಟ್ರೋಲ್ ರೂಮ್​ಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿದ್ದು, ರಾಜಸ್ಥಾನ ಸಿಎಂ ಭಜಾನ್ ಲಾಲ್ ಶರ್ಮಾರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡಾರ್ಜಿಲಿಂಗ್​​ನ ನಿವಾಸಿ ನೆಮೊ ಎಂಬಾತ ಕರೆ ಮಾಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೂ ಕಂಟ್ರೋಲ್​ ರೂಮ್​ಗೆ ಬಂದ ಕರೆಯನ್ನು ಪತ್ತೆಹಚ್ಚಿದಾಗ ಜೈಲಿನ ಒಳಗಿನಿಂದ ದೂರವಾಣಿ ಕರೆ ಬಂದಿರುವುದು ಗೊತ್ತಾಗಿದೆ. ಸದ್ಯ ಈ ವಿಷಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ:ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ದಿನೇಶ್ ಮೊಗ್ರ ಆಯ್ಕೆ
ಈ ಕುರಿತು ದೌಸಾ ಎಸ್.​ಪಿ. ರಂಜಿತಾ ಶರ್ಮಾ ಭಾನುವಾರ (ಜು.28) ಜೈಲಿನ ಆವರಣದಲ್ಲಿ ಶೋಧ ನಡೆಸಿ, 10 ಮೊಬೈಲ್​ ಫೋನ್​ಗ​ಳನ್ನು ವಶಪಡಿಸಿಕೊಂಡಿದ್ದಾರೆ. ಈ ಫೋನ್‌ಗಳಲ್ಲಿ ಒಂದನ್ನು ನೆಮೊ ಮತ್ತು ಮತ್ತೊಂದು ಮತ್ತೋರ್ವ ಕೈದಿಯಿಂದ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಹೂತಿಟ್ಟಿದ್ದ ಎಂಟು ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಕಾರಾಗೃಹದ ಡಿ.ಐ.ಜಿ. ಮೋನಿಕಾ ಅಗರ್ವಾಲ್ ಮೂವರು ಜೈಲಾಧಿಕಾರಿಗಳಾದ ಹಂಗಾಮಿ ಸೂಪರಿಂಟೆಂಡೆಂಟ್ ಕೈಲಾಶ್ ಶರ್ಮಾ, ಜೈಲರ್ ಬಿಹಾರಿ ಲಾಲ್ ಮತ್ತು ಹೆಡ್ ವಾರ್ಡರ್ ಅವಧೇಶ್ ಕುಮಾರ್ ಅವರನ್ನು ಅಮಾನತುಗೊಳಿದ್ದಾರೆ. ನೆಮೊ ಎಂಬ ಕೈದಿಯನ್ನು 2017ರಿಂದ ಜೈಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಆತನನ್ನು ದೌಸಾ ಜೈಲಿಗೆ ವರ್ಗಾಯಿಸಲಾಯಿತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಇದು ಸಂಭವಿಸಿದ್ರೆ ಖಂಡಿತ 2025ರ ಐಪಿಎಲ್​ನಲ್ಲಿ ಧೋನಿ! ‘ಕ್ಯಾಪ್ಟನ್​ ಕೂಲ್’​ ಎಂಟ್ರಿಗೆ ಫ್ಯಾನ್ಸ್​ ಒತ್ತಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
