ನವದೆಹಲಿ:ಕಳೆದ 36 ಗಂಟೆಗಳಲ್ಲಿ 45ಕ್ಕೂ ಹೆಚ್ಚು ಜನರು ದೇಶದಲ್ಲಿ ಗರಿಷ್ಠ ತಾಪಮಾನ ಏರಿಕೆ ತಾಳಲಾರದೆ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 87ಕ್ಕೆ ತಲುಪಿದೆ. ಈ ಸಂಗತಿ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಜೂನ್ ಪೂರ ಬಿಸಿ ಗಾಳಿ ಅಧಿಕವಾಗಿಯೇ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೂಡ ಮಾಹಿತಿ ನೀಡಿದೆ.
ಇದನ್ನೂ ಓದಿ:ಹಿಪ್ಪುನೇರಳೆ ನಾಟಿ ನರ್ಸರಿಗೆ ಸಹಾಯಧನ: ರೈತರು ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿ
ಮರೆಯಲಾರದ ಬೇಸಿಗೆ ಕಾಲ ಎನ್ನುವಂತೆ ಇದಾಗಿದ್ದು, ಬಿಸಿಲ ತಾಪಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರು ಮನೆಯೊಳಗೂ ಇರಲಾರದೆ, ಹೊರಗೂ ಬರಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತ್ಯೇಕವಾಗಿ ಉತ್ತರ ಭಾರತದಲ್ಲಿ ಬಿಸಿ ಗಾಳಿ ಹೆಚ್ಚಾಗಿದ್ದು, ಕೆಲವೆಡೆ 50 ಡಿಗ್ರಿ ಸೆಲ್ಸಿಯಸ್​ ತಾಪಮಾನವನ್ನು ಸಹ ಮೀರಿ ಹೋಗಿದೆ. ಪಶ್ಚಿಮ ಒಡಿಶಾದಲ್ಲಿ ಶಾಖಾಘಾತದಿಂದ 19 ಜನರು ಸಾವನ್ನಪ್ಪಿದ್ದಾರೆ.
ಇನ್ನು ಉತ್ತರಪ್ರದೇಶದಲ್ಲಿ ಒಂದೇ ದಿನ 16 ಮಂದಿ ಬಿಸಿಲ ತಾಪಮಾನದಲ್ಲಿ ಕಂಡುಬಂದ ಹೆಚ್ಚಳದಿಂದ ಮೃತಪಟ್ಟಿದ್ದಾರೆ. ಬಿಹಾರದಲ್ಲಿ ಐದು ಮಂದಿ, ರಾಜಸ್ಥಾನದಲ್ಲಿ ನಾಲ್ವರು ಮತ್ತು ಪಂಜಾಬ್‌ನಲ್ಲಿ ಒಬ್ಬರು ತೀವ್ರ ಶಾಖಕ್ಕೆ ಬಲಿಯಾಗಿದ್ದಾರೆ. ಸರ್ಕಾರವು ಶಾಖದ ಅಲೆಯನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಬೇಕೇ? ಎಂಬುದೇ ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು, ಸಾವಿನ ಸಂಖ್ಯೆಯಲ್ಲಿ ಹಠಾತ್ ಏರಿಕೆಗೆ ಅತ್ಯಂತ ಹೆಚ್ಚಿನ ತಾಪಮಾನವೇ ಕಾರಣವೆಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:ಜೂ.12ರಂದು ನಗರದಲ್ಲಿ ಜಾಗೃತಿ ಜಾಥಾ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ
ಜಾರ್ಸುಗುಡಾದಲ್ಲಿ ಸಾವನ್ನಪ್ಪಿದ 9 ಜನರ ಪೈಕಿ ಏಳು ಮಂದಿ ಕೈಗಾರಿಕಾ ಟೌನ್​ ಹಾದುಹೋಗುವ ಟ್ರಕ್ ಚಾಲಕರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).
ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
