ನವದೆಹಲಿ:ಯೆಸ್​​ ಬ್ಯಾಂಕ್​ ದಿವಾಳಿ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದ್ದ ಹಣವನ್ನು ಹಿಂಪಡೆಯಲು ಪರದಾಡುತ್ತಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್​​​ ಬ್ಯಾಂಕ್​(ಆರ್​ಬಿಐ) ಬಿಗ್​ ರಿಲೀಫ್​ ನೀಡಿದೆ.
ಶನಿವಾರ ರಾತ್ರಿ ಯೆಸ್​ ಬ್ಯಾಂಕ್​ ಖಾತೆಯಿಂದ ಟ್ವೀಟ್​ ಮಾಡಲಾಗಿದ್ದು, ಡೆಬಿಟ್​ ಕಾರ್ಡ್​ ಮೂಲಕ ನೀವೀಗ ಯೆಸ್​ ಬ್ಯಾಂಕ್​ ಅಥವಾ ಇನ್ನಿತರ ಬ್ಯಾಂಕ್​ಗಳಲ್ಲಿ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದಾಗಿದೆ. ನಿಮ್ಮ ತಾಳ್ಮೆಗೆ ನಮ್ಮ ಧನ್ಯವಾದಗಳು ಎಂದು ಹೇಳಿ ಆರ್​ಬಿಐ ಮತ್ತು ಹಣಕಾಸು ಸಚಿವಾಲಯವನ್ನು ಟ್ಯಾಗ್​ ಮಾಡಲಾಗಿದೆ.
ಇದಕ್ಕೂ ಮುನ್ನ ಗ್ರಾಹಕರು ಬಹುತೇಕ ಎಟಿಎಂಗಳಲ್ಲಿ ಹಣಕ್ಕಾಗಿ ಗಂಗಟೆಗಳ ಕಾಲ ಕ್ಯೂ ನಿಂತರೂ ಹಣ ಸಿಗದೆ ಪರದಾಟ ನಡೆಸಿದ್ದರು. ಇದರಿಂದ ಭಯಭೀತರೂ ಆಗಿದ್ದರು. ಇತ್ತ ಆನ್​ಲೈನ್​ ಬ್ಯಾಂಕಿಂಗ್​ ಸೇವೆಯೂ ಕೂಡ ಕಾರ್ಯ ನಿರ್ವಹಿಸಿದಿರುವುದು ಗ್ರಾಹಕರನ್ನು ಮತ್ತಷ್ಟು ಚಿಂತೆಗೆ ದೂಡಿತು.
ಆದರೆ, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಹೇಳಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯೆಸ್ ಬ್ಯಾಂಕ್​ನ ಪುನಶ್ಚೇತನಕ್ಕೆ ಆರ್​ಬಿಐ ಮುಂದಿಟ್ಟಿರುವ ಯೋಜನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಒಪ್ಪಿಕೊಂಡಿದ್ದು, ಯೆಸ್ ಬ್ಯಾಂಕ್​ನ ಶೇ. 49 ಷೇರುಗಳನ್ನು ಖರೀದಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಸುಮಾರು 2450 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುಸ್ಥಿ ಸಾಲಗಳಿಂದ ದಿವಾಳಿ ಆಗಿರುವ ಯೆಸ್​ ಬ್ಯಾಂಕ್​ ಅನ್ನು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಆಗಿ ಮಾಡಿದೆ. ನಗದು ವಿತ್​ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಿದೆ. ಇದರಿಂದ ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಪರಿಸ್ಥಿತಿ ಸದ್ಯ ಸುಧಾರಿಸುವತ್ತ ಬಂದಿದೆ.(ಏಜೆನ್ಸೀಸ್​)
You can now make withdrawals using your YES BANK Debit Card both at YES BANK and other bank ATMs. Thanks for your patience.@RBI@FinMinIndia
— YES BANK (@YESBANK)March 7, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − four =
Remember me
