ಡೆಬಿಟ್​ ಮತ್ತುಕ್ರೆಡಿಟ್​ ಕಾರ್ಡ್​ಗಳ ಮೂಲಕದ ಪಾವತಿಗೆ ಅ.1ರಿಂದ ಟೋಕನೈಸೇಷನ್​ ಕಡ್ಡಾಯವಾಗಿದ್ದು, ಆನ್​ಲೈನ್​ ಪಾವತಿಗೆ ಸಿವಿವಿ ಅಥವಾ ಒನ್​ ಟೈಮ್​ ಪಾಸ್​ವರ್ಡ್​ (ಒಟಿಪಿ) ಬದಲು ಟೋಕನ್​ ನಂಬರ್​ ನೀಡುವಂತೆ ಆರ್​ಬಿಐ ಸೂಚಿಸಿದೆ. ಇದರ ಉದ್ದೇಶ ಡೆಬಿಟ್​ ಅಥವಾ ಕ್ರೆಡಿಟ್​ ಕಾರ್ಡ್​ಗಳ ವಿವರದ ಸಂರಕ್ಷಣೆ ಆಗಲಿದೆ.
* ಅ. 1ರ ನಂತರ ಆನ್​ಲೈನ್​ ಪಾವತಿಯ ಗೇಟ್​ ವೇಗಳು ಗ್ರಾಹಕರ ಡಿಬಿಟ್​ ಅಥವಾ ಕ್ರೆಡಿಟ್​ ಕಾರ್ಡ್​ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.* ಕಾರ್ಡ್​ನ 16 ಅಂಕಿಗಳು ಮತ್ತು ಕಾರ್ಡ್​ ಕಾರ್ಯಾವಧಿಯ ಅಂತಿಮ ದಿನಾಂಕವನ್ನು ನಮೂದು ಮಾಡುವ ಪ್ರಕ್ರಿಯೆ ಸೆ. 30ಕ್ಕೆ ಮುಗಿಯಲಿದೆ.* ಕಾರ್ಡ್​ ವಿವರದ ಬದಲಿಗೆ ಟೋಕನ್​ ನಂಬರ್​ ನಮೂದು ಮಾಡಬೇಕು.* ಹೊಸ ಪ್ರಕ್ರಿಯೆಯಿಂದ ಕಾರ್ಡ್​ 16 ಅಂಕಿ, ಕಾರ್ಡ್​ ಕಾರ್ಯಾವಧಿಯ ಅಂತಿಮ ದಿನಾಂಕ ಸಂಗ್ರಹಿತ ವಾಗಿರುವುದಿಲ್ಲ. ಟೋಕನ್​ ನಂಬರ್​ ಚಾಲ್ತಿ ಆಗುತ್ತದೆ.
ಟೋಕನೈಸೇಷನ್​ ಪ್ರಕ್ರಿಯೆ*ಆನ್​ಲೈನ್​ ಮೂಲಕ ಟೋಕನೈಸೇಷನ್​ ಮಾಡಿಸಲು ಗ್ರಾಹಕರು “ಕಾರ್ಡ್​ ಸುರಕ್ಷತೆ ಗೊಳಿಸಿ’ ಆಯ್ಕೆಯನ್ನು ಕ್ಲಿಕ್​ ಮಾಡಬೇಕು.* ಆಯ್ಕೆಯ ನಂತರ ನೋಂದಾಯಿತ ಮೊಬೈಲ್​ಗೆ ಒಟಿಪಿ ರವಾನೆ. ಇದನ್ನು ವೆಬ್​ಪುಟದಲ್ಲಿ ನಮೂದಿಸುತ್ತಿದಂತೆ ಟೋಕನೈಸೇಷನ್​ ಪ್ರಕ್ರಿಯೆ ಶುರು.* ಟೋಕನ್​ ಸಂಖ್ಯೆಯನ್ನು ಪಾವತಿ ಮಾಡಬೇಕಾದವರೊಂದಿಗೆ ಅಂದರೆ, ಆನ್​ಲೈನ್​ ಪಾವತಿಗಳು, ಪಾಯಿಂಟ್​ ಆಫ್​ ಸೇಲ್​ ಹಂಚಿಕೊಳ್ಳಲು ಅಡ್ಡಿಯಿಲ್ಲ.* ಪದೇ ಪದೇ ಇಂಥ ಪಾವತಿಗಳು ಬಂದಾಗ ನಿಮ್ಮ ಟೋಕನ್​ ಸಂಖ್ಯೆ ಸ್ವಯಂಚಾಲಿತವಾಗಿಯೇ ಪರದೆ ಮೇಲೆ ಕಾಣುತ್ತದೆ. ಅದನ್ನು ಖಾತ್ರಿ ಮಾಡಿಕೊಂಡು ಕ್ಲಿಕ್​ ಮಾಡಿದರೆ ಪಾವತಿ ಸಲೀಸು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
