ಪಾಲ್ಗರ್​: ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಏಪ್ರಿಲ್​ನಲ್ಲಿ ಇಬ್ಬರು ಸಾಧುಗಳು ಹಾಗೂ ಅವರ ಕಾರಿನ ಚಾಲಕನನ್ನು ಅಲ್ಲಿನ ಜನರು ಗುಂಪಾಗಿ ಹೊಡೆದು ಹತ್ಯೆ ಮಾಡಿದ್ದರು.
ಏಪ್ರಿಲ್​ 16ರಂದು ರಾತ್ರಿ ಕಲ್ಪವೃಕ್ಷಗಿರಿ ಮಹಾರಾಜ್​ (70), ಸುಶೀಲ್​ಗಿರಿ ಮಹಾರಾಜ್​ (30) ಎಂಬ ಸಾಧುಗಳು ಕಾರಿನಲ್ಲಿ ಮುಂಬೈನಿಂದ ಸೂರತ್​ಗೆ ತೆರಳುತ್ತಿದ್ದರು. ನಿಲೇಶ್​ ತೆಲ್ಗಡೆ ಕಾರಿನ ಚಾಲಕರಾಗಿದ್ದರು. ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದ ಅವರನ್ನು ಮಕ್ಕಳ ಕಳ್ಳರೆಂದು ಆರೋಪಿಸಿ ಮಹಾರಾಷ್ಟ್ರದ ಪಾಲ್ಗರ್​ ಬಳಿ ಅಲ್ಲಿನ ಸುಮಾರು 500 ಮಂದಿ ಸೇರಿ ಹೊಡೆದು, ಕೊಂದಿದ್ದರು. ಘಟನೆಗೆ ಸಂಬಂಧಪಟ್ಟಂತೆ 200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಕೋರ್ಟ್​​ನಲ್ಲಿ ವಿಚಾರಣೆಯೂ ನಡೆಯುತ್ತಿದೆ.ಇದೀಗ ಈ ಸಾಧುಗಳ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೃತ ಸುಶೀಲ್​ಗಿರಿ ಮಹಾರಾಜ್​ ಅವರ ತಾಯಿ ಆಗ್ರಹಿಸಿದ್ದಾರೆ.ಇದನ್ನೂ ಓದಿ:ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹ
ಸುಮಾರು ಐದು ತಿಂಗಳು ಕಳೆದರೂ ಪ್ರಕರಣದ ತನಿಖೆ ಚುರುಕುಗೊಂಡಿಲ್ಲ. ನಟ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣವನ್ನು ಸಿಬಿಐಗೆ ವಹಿಸಿದ ಹಾಗೇ, ಸಾಧುಗಳ ಹತ್ಯೆಯ ಕೇಸ್​ನ್ನು ಕೂಡ ವಹಿಸಿ. ನಮಗೆ ಮಹಾರಾಷ್ಟ್ರ ಪೊಲೀಸರ ಮೇಲೆ ನಂಬಿಕೆಯೇ ಉಳಿದಿಲ್ಲ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪಾಲ್ಗಾರ್​ನ 18 ಪೊಲೀಸ್​ ಸಿಬ್ಬಂದಿಯನ್ನು ದಂಡನೆಗೆ ಗುರಿ ಮಾಡಿದೆ. ಓರ್ವ ಅಧಿಕಾರಿಯನ್ನು ವಜಾ ಮಾಡಿದೆ. (ಏಜೆನ್ಸೀಸ್​)
ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಮಾಸ್ಕ್​ ಕಡ್ಡಾಯನಾ?- ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 12 =
Remember me
