ಬೆಂಗಳೂರು:ಮೇಕೆದಾಟು, ಮಹದಾಯಿ ಸೇರಿ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿ ಬಹುಕಾಲದಿಂದ ರಾಜ್ಯಕ್ಕೆ ತೊಡಕಾಗಿರುವ ಅಡೆತಡೆ ನಿವಾರಿಸುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆ ಒಮ್ಮತಾಭಿಪ್ರಾಯಕ್ಕೆ ಬಂದಿದೆ.
ಬಹುಕಾಲದಿಂದ ಬಾಕಿಯಾಗಿರುವ ಯೋಜನೆಗಳಿಗೆ ವೇಗ ಕೊಡಬೇಕು. ಕಾನೂನು, ಆಡಳಿತಾತ್ಮಕ ಹಾಗೂ ತಾಂತ್ರಿಕ ಅಡಚಣೆಗೆ ಪರಿಹಾರ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದ್ದು, ಆ ಪ್ರಕಾರ ಸರ್ಕಾರ ಮುಂದುವರಿಯುತ್ತದೆ, ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳುತ್ತೇವೆ ಎಂದು ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ದೇವೇಗೌಡರ ನೇತೃತ್ವ:ಮುಂದಿನ ವಾರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರಿಗೆ ಈ ಸಭೆಯ ನಿರ್ಣಯವನ್ನು ನಿವೇದಿಸಲಿದ್ದಾರೆ. ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಖುದ್ದು ಸಿಎಂ ದೆಹಲಿಗೆ ತೆರಳಿ ರಾಜ್ಯದ ಕೋರಿಕೆ ಪ್ರಸ್ತಾಪಿಸಲಿದ್ದಾರೆ. ಅಷ್ಟಾಗಿಯೂ ರಾಜ್ಯದ ಪರ ನಿಲುವು ಹೊರಬೀಳದಿದ್ದರೆ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನದಲ್ಲಿ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳಲು ತೀರ್ವನಿಸಲಾಗಿದೆ.
ಸಿದ್ದರಾಮಯ್ಯ ಆಗ್ರಹ:2011ರಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಬಗೆಗೆ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ, ಅದು ಮುಗಿಯುವ ವರೆಗೆ ನ್ಯಾಯಮಂಡಳಿ ನೀಡಿರುವ ತೀರ್ಪು ಕುರಿತು ನೋಟಿಫಿಕೇಷನ್ ಹೊರಡಿಸಬಾರದು ಎಂದು ಹೇಳಿತ್ತು. ಇದಾಗಿ ಹನ್ನೊಂದು ವರ್ಷ ಕಳೆದಿದೆ, ಒಂದೆರೆಡು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದದ್ದು ಬಿಟ್ಟರೆ, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಒತ್ತಡ ಹಾಕಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೊಷಣೆ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಸಭೆ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಸರ್ಕಾರದ ಬಳಿಗೆ ನಿಯೋಗವನ್ನು ಕೊಂಡೊಯ್ಯುವ ಮೂಲಕ ಪ್ರಧಾನ ಮಂತ್ರಿ ಹಾಗೂ ಜಲ ಸಂಪ ನ್ಮೂಲ ಸಚಿವರನ್ನು ಭೇಟಿ ಮಾಡಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಹೇಳಿದ್ದೇವೆ. ಸರ್ಕಾರ ನಮ್ಮ ನಿಲುವನ್ನು ಒಪ್ಪಿದೆ ಎಂದರು.
ಕೇಸ್ ವಾಪಸ್​ಗೆ ಒತ್ತಾಯ:ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ವಿನಾಕಾರಣ ಮೊಕದ್ದಮೆ ದಾಖಲಿಸಿದ್ದೀರಿ, ನಾವು ಜನರ ಪರವಾಗಿ ಹೋರಾಟ ಮಾಡಿದ್ದರೂ ಕೇಸ್ ಹಾಕಿದ್ದು ಯಾಕೆ ಎಂದು ಪ್ರತಿಪಕ್ಷದ ನಾಯಕರು ಸರ್ಕಾರವನ್ನು ಪ್ರಶ್ನಿಸಿದರು.
ಮೇಕೆದಾಟು ಯೋಜನೆಗೆ ಪರಿಸರ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಮಹದಾಯಿ ವಿಚಾರದಲ್ಲಿ ಶೀಘ್ರವೇ ಅನುಮತಿ ಪಡೆದು ಕೆಲಸ ಆರಂಭಿಸಲಾಗುತ್ತದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಸಂಬಂಧ 2-3 ವಿಚಾರಣೆಯಲ್ಲೇ ಅಧಿಸೂಚನೆ ಹೊರಡಿಸಲು ಅವಕಾಶ ಸಿಗಬಹುದು. ನದಿ ಜೋಡಣೆ ವಿಚಾರದಲ್ಲಿ ಗೋದಾವರಿ ನೀರು ಕಾವೇರಿಗೆಷ್ಟು, ಕೃಷ್ಣಾಗೆಷ್ಟು ಪೆನ್ನಾರ್​ಗೆಷ್ಟು ಎಂದು ಹಂಚಿಕಯಾಗಲಿ. ಆನಂತರ ಒಪು್ಪತ್ತೇವೆ.
|ಬಸವರಾಜ ಬೊಮ್ಮಾಯಿಸಿಎಂ
ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಹಾಗಾಗಿ ತಕ್ಷಣ ಪರಿಸರ ಅನು ಮತಿ ಪತ್ರ ಪಡೆಯಿರಿ ಎಂದು ಹೇಳಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಇದೆ, ಪಡೆಯಲಿ.
|ಸಿದ್ದರಾಮಯ್ಯವಿಧಾನಸಭೆ ವಿರೋಧ ಪಕ್ಷದ ನಾಯಕ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಕೇಂದ್ರದ ಮೇಲೆ ಒತ್ತಡ ತರಲಿ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಮಾಜಿಗಳ ನೆರವು:ಸಭೆಗೆ ಮೂವರು ಮಾಜಿ ಜಲಸಂಪ ನ್ಮೂಲ ಸಚಿವರನ್ನು ಆಹ್ವಾನಿ ಸಲಾಗಿತ್ತು. ಎಚ್.ಕೆ. ಪಾಟೀಲ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ತಮ್ಮ ಅನುಭವ ಹಂಚಿಕೊಂಡು ಮುಂದೆ ಆಗಬೇಕಾದ ಪ್ರಯತ್ನದ ಬಗ್ಗೆ ಸಲಹೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seventeen =
Remember me
