ಮುಂಬೈ:ದೇಶದಲ್ಲಿ ಕರೊನಾ ಪ್ರಮಾಣ ತಗ್ಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಸೋಂಕು ಮತ್ತೊಮ್ಮೆ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಲಾಕ್​ಡೌನ್​ ನಡೆಸಲು ಆಯಾ ರಾಜ್ಯಗಳು ಚಿಂತನೆ ನಡೆಸುತ್ತಿವೆ.
ಇದನ್ನೂ ಓದಿ:ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?
ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಕಳೆದ ವಾರಗಳಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗಿತ್ತು. ಆದರೆ ಇದೀಗ ಮತ್ತೊಮ್ಮೆ ಏರಿಕೆಯಾಗುತ್ತಿದೆ. ಅದೇ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಮಾಡಬಹುದು ಎನ್ನುವ ಸುದ್ದಿಗಳು ಹರಿದಾಡಿದೆ. ಈ ವಿಚಾರವಾಗಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಅಲ್ಲಿನ ಸರ್ಕಾರ ಕೂಡ ತಿಳಿಸಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಅತಿ ಹೆಚ್ಚು ಜನ ಗುಂಪು ಸೇರಿದ್ದಾರೆ. ಗಣೇಶ ಚತುರ್ಥಿಯ ಸಮಯದಲ್ಲಿಯೂ ಇದೇ ರೀತಿಯಲ್ಲಿ ಆಗಿತ್ತು. ರಾಜ್ಯದಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗುವ ಸೂಚನೆಯಿದೆ. ಮುಂದಿನ ಎಂಟರಿಂದ ಹತ್ತು ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ನಂತರ ಲಾಕ್​ಡೌನ್​ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ತಿಳಿಸಿದ್ದಾರೆ.
ಇದನ್ನೂ ಓದಿ:ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ
ಎರಡನೇ ಹಂತದ ಲಾಕ್​ಡೌನ್​ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 17.5 ಲಕ್ಷಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ. (ಏಜೆನ್ಸೀಸ್​)
ಪಾಕಿಸ್ತಾನದಲ್ಲಿ ತಳ್ಳದೆ ಬಸ್​ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್​ ಆಗುತ್ತಿದೆ ಈ ವಿಚಾರ

ಅಮ್ಮ ಸತ್ತರೂ ಅವಳ ಅಸ್ಥಿಪಂಜರದೊಂದಿಗೇ ಬದುಕು; ಕಣ್ಣೀರು ತರಿಸುತ್ತೆ ಈ ಮಗಳ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
