ನವದೆಹಲಿ:ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (ನೀಟ್​) ಹಾಗೂ ವೃತ್ತಿಪರ ಕೋರ್ಸ್​ಗಳ ಜಾಯಿಂಟ್​ ಎಂಟ್ರೆನ್ಸ್ ಟೆಸ್ಟ್​ ( ಜೆಇಇ-ಮೇನ್​) ಭವಿಷ್ಯ ಶುಕ್ರವಾರ (ಜು.3) ನಿರ್ಧಾರವಾಗಲಿದೆ.
ಜೆಇಇ ಮೇನ್​ ಪರೀಕ್ಷೆ ಜುಲೈ 18-23ರವರೆಗೆ ಹಾಗೂ ನೀಟ್​ ಜುಲೈ 26 ರಂದು ನಿಗದಿಯಾಗಿದೆ. ಕೋವಿಡ್ ಪ್ರಕರನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳು ನಡೆಯುತ್ತವೆಯೋ ಇಲ್ಲವೋ ಎಂಬ ಬಗ್ಗೆ ಹೆಚ್ಚು ಪ್ರಶ್ನೆ, ಸಂಶಯಗಳು ಉದ್ಭವವಾಗಿವೆ.
ಇದನ್ನೂ ಓದಿ;ಚೀನಾದ ನಿದ್ದೆಗೆಡಿಸಿದೆ ನೇಪಾಳದ ಬೆಳವಣಿಗೆ; ಕೋವಿಡ್ ನೆರವಿನ ಹೆಸರಲ್ಲಿ ಬೇಹುಗಾರರ ನಿಯೋಜನೆ​
ಈ ಪರೀಕ್ಷೆಗಳನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕಾರಿಗಳು ಸೇರಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ಶುಕ್ರವಾರದೊಳಗೆ ವರದಿ ನೀಡಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಹೇಳಿದ್ದಾರೆ.
ಜುಲೈನಲ್ಲಿ ಎರಡೂ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವೇ ಎಂಬ ಪ್ರಶ್ನೆಯೂ ಎದುರಾಗಿದೆ. ಈ ನಡುವೆ, ಬಾಕಿ ಉಳಿದಿದ್ದ ಸಿಬಿಎಸ್​ಸಿ ಹಾಗೂ ಐಸಿಎಸ್​ಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ;ಫೇರ್​ ಆ್ಯಂಡ್​ ಲವ್ಲೀ ಹೆಸರು ಬದಲಾಯಿಸಿದ ಹಿಂದುಸ್ತಾನ್​ ಯುನಿಲೀವರ್​
ಪಾಲಕರು, ವಿದ್ಯಾರ್ಥಿಗಳ ಮನವಿ ಹಾಗೂ ಕೋವಿಡ್​ ಪರಿಸ್ಥಿತಿಯನ್ನು ಅವಲೋಕಿಸಿ ಶುಕ್ರವಾರದೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ. ವರದಿ ಮೇಲೆಯೇ ಇವೆರಡು ಪರೀಕ್ಷೆಗಳ ಭವಿಷ್ಯ ನಿರ್ಧಾರವಾಗುವುದಂತೂ ಖಚಿತ.
ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
