ನವದೆಹಲಿ:ಭಾರತಕ್ಕೆ ಏಕೀಕೃತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ (ಐಎಡಿಡಬ್ಲ್ಯುಎಸ್) ನೀಡಲು ಅಮೆರಿಕ ಸಮ್ಮತಿ ಸೂಚಿಸಿದ್ದು, ಇದರಿಂದ ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬರಲಿದೆ. ಸುಮಾರು  13 ಸಾವಿರ ಕೋಟಿ ರೂ. ಮೊತ್ತದ ಐಎಡಿಡಬ್ಲ್ಯುಎಸ್ ವ್ಯವಸ್ಥೆ ಜತೆಗೆ ರೆಡಾರ್, ಸೆನ್ಸರ್ ಸಿಸ್ಟಮ್ ಶಸ್ತ್ರಾಸ್ತ್ರಗಳು ಸೇರಿ ಇನ್ನೂ ಅನೇಕ ವ್ಯವಸ್ಥೆಗಳು ಭಾರತಕ್ಕೆ ಲಭಿಸಲಿವೆ. ಭಾರತ ಈಗಾಗಲೇ ರಷ್ಯಾದಿಂದ -ಠಿ; 35 ಸಾವಿರ ಕೋಟಿ ಮೊತ್ತದಲ್ಲಿ ಅತ್ಯಂತ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯಾದ ಎಸ್-400 ಖರೀದಿಸಲು ಸಹಿ ಹಾಕಿದ್ದು, 2025ರ ವೇಳೆಗೆ ಇವುಗಳು ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆ ಇದೆ. ಭಾರತಕ್ಕೀಗ ಮತ್ತೊಂದು ವಾಯು ರಕ್ಷಣಾ ವ್ಯವಸ್ಥೆ ಲಭಿಸುತ್ತಿರುವುದು ಸೇನಾ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಐಎಡಿಡಬ್ಲ್ಯುಎಸ್ ಜತೆಗೆ ನೌಕಾಪಡೆಗಾಗಿ ಅಮೆರಿಕದ 24ಎಂಎಚ್-60ಆರ್ ಸೆಹ್ವಾಕ್ ಹೆಲಿಕಾಪ್ಟರ್​ಗಳನ್ನು ಖರೀದಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಷ್ಯಾದ ಎಸ್-400 ಮತ್ತು ಅಮೆರಿಕದ ಐಎಡಿಡಬ್ಲ್ಯುಎಸ್ ಜತೆಗೆ ದೇಶೀಯ ಮಿಸೈಲ್ ವ್ಯವಸ್ಥೆಗಳನ್ನು ರಾಷ್ಟ್ರ ರಾಜಧಾನಿ ಸುತ್ತ ನಿಯೋಜಿಸಲಾಗುತ್ತದೆ. ಇವುಗಳಿಂದ ದೆಹಲಿಯನ್ನು ಡ್ರೋನ್, ಮಿಸೈಲ್ ಸೇರಿ ಶತ್ರುಗಳು ನಡೆಸುವ ಯಾವುದೇ ರೀತಿಯ ವಾಯು ದಾಳಿಗಳಿಂದ ರಕ್ಷಿಸಬಹುದಾಗಿದೆ. ಅಮೆರಿಕ ತನ್ನ ಟರ್ವಿುನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಟಿಎಚ್​ಎಎಡಿ) ಮತ್ತು ಪೋಟ್ರಿಯಟ್ ಅಡ್ವಾನ್ಸಡ್ ಕೆಪೆಬಲಿಟಿ ಮಿಸೈಲ್ ವ್ಯವಸ್ಥೆಯನ್ನೂ (ಪಿಎಸಿ-3) ಖರೀದಿಸುವಂತೆ ಭಾರತಕ್ಕೆ ಆಫರ್ ನೀಡಿದೆ.
ಏಕಿಕೃತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ ಅಮೆರಿಕದ ಮಧ್ಯಮ ಶ್ರೇಣಿಯ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯಾಗಿದ್ದು, ವಾಯು ಮಾರ್ಗದಲ್ಲಿ ಶತ್ರು ಪಡೆಗಳಿಂದ ಎದುರಾಗಬಹುದಾದ ಯಾವುದೇ ರೀತಿಯ ಅಪಾಯಗಳನ್ನು ಸಮರ್ಥವಾಗಿ ಎದುರಿಸಬಲ್ಲದು. ಇತ್ತೀಚೆಗೆ ಉನ್ನತೀಕರಿಸಿರುವ ಐಎಡಿಡಬ್ಲ್ಯುಎಸ್​ನಲ್ಲಿ ತ್ರಿಡಿ ರೆಡಾರ್ ವ್ಯವಸ್ಥೆಯನ್ನೂ ನೀಡಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ 11 ರಾಷ್ಟ್ರಗಳು ಈ ವ್ಯವಸ್ಥೆಯನ್ನು ಹೊಂದಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seventeen =
Remember me
