ಮುಂಬೈ:ಕಡಿಮೆ ಹಣದುಬ್ಬರ ಅಂಕಿ-ಅಂಶಗಳ ಕಾರಣದಿಂದಾಗಿ ಆರ್‌ಬಿಐ ಬಡ್ಡಿ ದರ ಕಡಿತದ ಭರವಸೆಯನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಹೊಸ ದಾಖಲೆ ಮಟ್ಟವನ್ನು ಮುಟ್ಟಿದವು.
ಇದಲ್ಲದೆ, ಬಂಡವಾಳ ಸರಕುಗಳು, ಕನ್ಸೂಮರ್​ ಡ್ಯೂರೆಬಲ್​ ಮತ್ತು ಕೈಗಾರಿಕಾ ಷೇರುಗಳಲ್ಲಿನ ಭಾರೀ ಖರೀದಿಯು ಸೂಚ್ಯಂಕ ಹೆಚ್ಚಳಕ್ಕೆ ಸಹಾಯ ಮಾಡಿತು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಆಹಾರದ ಸಾಮಗ್ರಿಗಳ ಬೆಲೆಗಳ ಅಲ್ಪ ಇಳಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ ಶೇ. 4.75 ತಲುಪಿತು. ಈ ಹಣದುಬ್ಬರ ದರವು ಭಾರತೀಯ ರಿಸರ್ವ್ ಬ್ಯಾಂಕ್​ ನಿಗದಿಪಡಿಸಿರುವ ಶೇ. 6ರ ಮಿತಿಯೊಳಗೆ ಇದೆ ಎಂದು ಎಂದು ಸರ್ಕಾರ ಬುಧವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ.
ಗುರುವಾರ ಸತತ ಎರಡನೇ ದಿನವೂ ಏರಿಕೆ ಕಂಡಿರುವ 30-ಷೇರುಗಳ ಬಿಎಸ್‌ಇ ಸೂಚ್ಯಂಕವು ದಿನದ ವಹಿವಾಟಿನಲ್ಲಿ 538.89 ಅಂಕಗಳು ಅಥವಾ 0.70 ಜಿಗಿದು ತನ್ನ ಜೀವಿತಾವಧಿಯ ಗರಿಷ್ಠ ಮಟ್ಟವಾದ 77,145.46 ಅನ್ನು ತಲುಪಿತ್ತು. ಅಂತಿಮವಾಗಿ ಇದು 204.33 ಅಂಕಗಳು ಅಥವಾ ಶೇಕಡಾ 0.27 ರಷ್ಟು ಏರಿಕೆಯಾಗಿ 76,810.90ಕ್ಕೆ ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು.
ಬಿಎಸ್‌ಇಯಲ್ಲಿ ಒಟ್ಟು 2,345 ಷೇರುಗಳ ಬೆಲೆ ಏರಿಕೆ ಕಂಡರೆ, 1,539 ಸ್ಟಾಕ್​ಗಳ ದರ ಕುಸಿತ ಕಂಡವು. 100 ಷೇರುಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 75.95 ಅಂಕಗಳು ಅಥವಾ ಶೇ 0.33ರಷ್ಟು ಏರಿಕೆ ಕಂಡು 23,398.90 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 158.1 ಅಂಕಗಳು ಅಥವಾ ಶೇ. 0.67 ಏರಿಕೆಯಅಗಿ ತನ್ನ ದಾಖಲೆಯ ಗರಿಷ್ಠ ಮಟ್ಟವಾದ 23,481.05 ಮುಟ್ಟಿತ್ತು.
ಪ್ರಮುಖ ಷೇರುಗಳ ಪೈಕಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೈಟಾನ್, ಲಾರ್ಸೆನ್ ಅಂಡ್ ಟೂಬ್ರೊ, ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಬಜಾಜ್ ಫೈನಾನ್ಸ್ ಮತ್ತು ನೆಸ್ಲೆ ಅತಿ ಹೆಚ್ಚು ಲಾಭ ಗಳಿಸಿದವು. ಹಿಂದುಸ್ತಾನ್ ಯೂನಿಲಿವರ್, ಪವರ್ ಗ್ರಿಡ್, ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಷೇರುಗಳ ಬೆಲೆಗಳು ಕುಸಿತ ದಾಖಲಿಸಿದವು.
ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ. 0.89 ರಷ್ಟು ಏರಿದರೆ, ಮಿಡ್‌ಕ್ಯಾಪ್ ಸೂಚ್ಯಂಕ ಶೇ. 0.79 ರಷ್ಟು ಹೆಚ್ಚಳ ಕಂಡಿತು. ವಲಯವಾರು ಸೂಚ್ಯಂಕಗಳ ಪೈಕಿ ರಿಯಾಲ್ಟಿ ಶೇ. 2.15, ಬಂಡವಾಳ ಸರಕುಗಳು (ಶೇ. 2.05), ಕೈಗಾರಿಕೆಗಳು (ಶೇ.1.67), ಐಟಿ (ಶೇ.1.08) ಮತ್ತು ಗ್ರಾಹಕ ವಿವೇಚನೆ (ಶೇ.0.88) ಜಿಗಿದಿವೆ. ಇದಕ್ಕೆ ವ್ಯತಿರಿಕ್ತವಾಗಿ, ದೂರಸಂಪರ್ಕ, ಬ್ಯಾಂಕೆಕ್ಸ್ ಮತ್ತು ಲೋಹ ವಲಯದ ಷೇರುಗಳು ಹಿನ್ನಡೆ ಕಂಡವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಹಾಂಗ್​ಕಾಂಗ್ ಲಾಭದಲ್ಲಿ ಮುಂದುವರಿದರೆ, ಟೋಕಿಯೊ ಮತ್ತು ಶಾಂಘೈ ಕುಸಿತ ಕಂಡವು. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳು ಬುಧವಾರ ರಾತ್ರಿಯ ವಹಿವಾಟಿನಲ್ಲಿ ಹೆಚ್ಚಿನ ಲಾಭದೊಂದಿಗೆ ಕೊನೆಗೊಂಡವು.
“ಅಮೆರಿಕ ಮತ್ತು ಭಾರತದಲ್ಲಿ ಹಣದುಬ್ಬರದ ಕುರಿತು ಒಳ್ಳೆಯ ಸುದ್ದಿ ಇದೆ. ಹಣದುಬ್ಬರವಿಳಿತ ಪ್ರಕ್ರಿಯೆಯು ಉತ್ತಮ ಹಾದಿಯಲ್ಲಿದೆ. ಮಾರುಕಟ್ಟೆಯ ದೃಷ್ಟಿಕೋನದಿಂದ, ಇದು ವಿಶೇಷವಾಗಿ ಬ್ಯಾಂಕಿಂಗ್ ಷೇರುಗಳಿಗೆ ಸಕಾರಾತ್ಮಕ ಸುದ್ದಿಯಾಗಿದೆ” ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 426.63 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಬುಧವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 149.98 ಅಂಕಗಳು ಅಥವಾ ಶೇಕಡಾ 0.20 ರಷ್ಟು ಏರಿಕೆಯಾಗಿ 76,606.57 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 58.10 ಅಂಕಗಳು ಅಥವಾ ಶೇಕಡಾ 0.25 ರಷ್ಟು ಏರಿಕೆಯಾಗಿ 23,322.95 ಕ್ಕೆ ಮುಟ್ಟಿತ್ತು.
2 ಎಲೆಕ್ಟ್ರಿಕ್​ ವಾಹನಗಳಿಗೆ ಭಾರತ್ ಎನ್‌ಸಿಎಪಿ 5 ಸ್ಟಾರ್ ರೇಟಿಂಗ್: ಪಂಚ್​.ಇವಿ; ನೆಕ್ಸಾನ್​.ಇವಿಗೆ ಸಚಿವರ ಅಭಿನಂದನೆ

ತಾಳೆ ಎಣ್ಣೆ ಆಮದು 74% ಹೆಚ್ಚಳ: ದೇಶೀಯ ಬೇಡಿಕೆ ಪೂರೈಸಲು ಸರಕು ಸಂಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
