ಇರಾಕ್​ನಲ್ಲಿ ಈ ವಾರ ಕಾರು ಅಥವಾ ಮನೆ ಖರೀದಿಸಬಯಸುವವರಿಗೆ ಆಘಾತ ಕಾದಿತ್ತು. ಕಳೆದ ಭಾನುವಾರ ಇರಾಕ್ ಸರ್ಕಾರವು ಅಮೆರಿಕ ಡಾಲರ್​ಗಳಲ್ಲಿ ವ್ಯಾಪಾರ ವ್ಯವಹಾರ ಮಾಡುವುದನ್ನು ನಿಷೇಧಿಸುವುದಾಗಿ ಘೊಷಿಸಿತು. ಇರಾಕಿಗಳು ಸಾಮಾನ್ಯವಾಗಿ ಡಾಲರ್​ಗಳನ್ನು ಬಳಸಿ ದೊಡ್ಡ ಮೊತ್ತದ ಖರೀದಿಗಳನ್ನು ಮಾಡುತ್ತಾರೆ. ಇರಾನ್​ನ ಕರೆನ್ಸಿ ದಿನಾರ್ ಅಪಮೌಲ್ಯ ಕಂಡಿದೆ. ಹೀಗಾಗಿ, ಕಾರು ಅಥವಾ ಮನೆ ಖರೀದಿಸಲು ಇರಾಕಿಗಳು ದಿನಾರ್ ನೋಟುಗಳಿಂದ ತುಂಬಿದ ಚೀಲಗಳನ್ನೇ ಹೊತ್ತು ತರಬೇಕಾಗುತ್ತದೆ. ಇದರ ಬದಲಾಗಿ ಅವರು ಡಾಲರ್ ತುಂಬಿದ ಪಾಕೆಟ್ ಬಳಸುತ್ತಾರೆ.
ದಿರ್ಹಾಮ್ ದಿನಾರ್, ರಿಯಾಲ್ ಅಥವಾ ಪೌಂಡ್​ಗಳು ಇಲ್ಲದಿದ್ದರೂ ಮಧ್ಯಪ್ರಾಚ್ಯದಲ್ಲಿ ವ್ಯಾಪಾರ ವಹಿವಾಟು ಕೈಗೊಳ್ಳಲು ಅನೇಕ ದಶಕಗಳಿಂದ ಅಮೆರಿಕ ಡಾಲರ್ ಉತ್ತಮ ಕರೆನ್ಸಿಯಾಗಿದೆ. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಹಲವಾರು ಹಿರಿಯ ರಾಜಕಾರಣಿಗಳು ಈ ಪ್ರದೇಶದಲ್ಲಿ ಡಾಲರ್ ಪ್ರಾಬಲ್ಯ ಮಸುಕಾಗಬಹುದು ಎಂದು ಸೂಚಿಸುವ ಹೇಳಿಕೆಗಳನ್ನು ನೀಡಿದ್ದಾರೆ.
ಡಾಲರ್​ಗಳ ಕೊರತೆಯು ಇರಾಕಿನ ದಿನಾರ್ ಮೌಲ್ಯದಲ್ಲಿ ಏರಿಳಿತಕ್ಕೆ ಕಾರಣವಾಗಿದ್ದು, ಇದರಿಂದಾಗಿ ಕಳೆದ ವಾರಾಂತ್ಯದಲ್ಲಿ ಡಾಲರ್​ಗೆ ನಿಷೇಧ ಹೇರಲಾಗಿದೆ. ಅಲ್ಲದೆ, ಡಾಲರ್ ಬದಲಿಗೆ ಯುವಾನ್ ಬಳಸಿ ಚೀನಾದೊಂದಿಗೆ ವ್ಯಾಪಾರ ಮಾಡುವುದಾಗಿ ಇರಾನ್ ಹೇಳಿದೆ.
ಪಾವತಿಗೆ ಪರ್ಯಾಯ ಹಾದಿ:ಯುರೋ ಮತ್ತು ಚೀನೀ ಯುವಾನ್ ಸೇರಿದಂತೆ ವಿವಿಧ ಕರೆನ್ಸಿಗಳನ್ನು ಬಳಸಿಕೊಂಡು ತೈಲ ಮಾರಾಟ ಮಾಡಲು ದೇಶವು ಮುಕ್ತವಾಗಿದೆ ಎಂದು ಸೌದಿ ಅರೇಬಿಯಾದ ಹಣಕಾಸು ಸಚಿವರು ಹೇಳಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಭಾರತದ ರೂಪಾಯಿಯನ್ನು ಬಳಸಿಕೊಂಡು ಭಾರತದೊಂದಿಗೆ ವಹಿವಾಟು ನಡೆಸುವುದಾಗಿ ಹೇಳಿದೆ. ಕಳೆದ ವರ್ಷ, ಈಜಿಪ್ತ ದೇಶವು ಚೀನೀ ಯುವಾನ್​ನಲ್ಲಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುವ ಬಾಂಡ್​ಗಳನ್ನು ವಿತರಿಸುವ ಯೋಜನೆಗಳನ್ನು ಘೊಷಿಸಿತು. ಇದು ಈಗಾಗಲೇ ಜಪಾನಿನ ಯೆನ್​ನಲ್ಲಿ ಬಾಂಡ್​ಗಳನ್ನು ನೀಡಿದೆ.
2021ರಿಂದ ಸ್ವಿಜರ್​ಲೆಂಡ್ ಮೂಲದ ಬ್ಯಾಂಕ್ ಫಾರ್ ಇಂಟರ್​ನ್ಯಾಷನಲ್ ಸೆಟಲ್​ವೆುಂಟ್ಸ್ ಡಾಲರ್ ಹೊರತುಪಡಿಸಿದ ಡಿಜಿಟಲ್ ಕರೆನ್ಸಿ ಮತ್ತು ಗಡಿಯಾಚೆಗಿನ ಪಾವತಿಗಳಿಗೆ ಸಂಬಂಧಿಸಿ ಪ್ರಾಯೋಗಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಇದು ಸೆಂಟ್ರಲ್ ಬ್ಯಾಂಕ್​ಗಳಿಗೆ ಒಂದು ರೀತಿಯ ಕೇಂದ್ರ ಬ್ಯಾಂಕ್ ಇದ್ದಂತಿದೆ. ಯುಎಇ, ಥೈಲ್ಯಾಂಡ್, ಹಾಂಗ್​ಕಾಂಗ್ ಮತ್ತು ಚೀನಾ ಇದರಲ್ಲಿ ಭಾಗಿಯಾಗಿವೆ.
ತೈಲ ಉತ್ಪಾದಿಸುವ ಗಲ್ಪ್ ದೇಶಗಳು 1970ರ ದಶಕದಿಂದಲೂ ಅಮೆರಿಕದೊಂದಿಗೆ ಪಾಲುದಾರಿಕೆ ಹೊಂದಿವೆ. ಸೌದಿ ಅರೇಬಿಯಾ ಮತ್ತು ಯುಎಇ ತೈಲ ರಫ್ತು ಮಾಡುವ ದೇಶಗಳಾಗಿದ್ದು, ಅಮೆರಿಕವು ಇವುಗಳಿಗೆ ಭದ್ರತೆ ಒದಗಿಸುತ್ತದೆ. ಅಲ್ಲದೆ, ಕುವೈತ್ ಹೊರತುಪಡಿಸಿ ಹೆಚ್ಚಿನ ಕೊಲ್ಲಿ ರಾಷ್ಟ್ರಗಳು ಸ್ವಂತ ಕರೆನ್ಸಿಗಳನ್ನು ಡಾಲರ್​ಗೆ ಜೋಡಿಸಿವೆ. ಹೀಗಾಗಿ, ಏಕಾಏಕಿಯಾಗಿ ಡಾಲರ್ ಮಹತ್ವವನ್ನು ಕಡಿಮೆಗೊಳಿಸಿ ಪರ್ಯಾಯ ಕರೆನ್ಸಿ ಬಳಕೆ ಮಾಡುವುದು ಸುಲಭವಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.
ರಷ್ಯಾ-ಯೂಕ್ರೇನ್ ಯುದ್ಧ ಶುರುವಾದ ನಂತರದಲ್ಲಿ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿದ್ದು, ಇದಕ್ಕೆ ಬಹುತೇಕವಾಗಿ ಡಾಲರ್ ಹೊರತುಪಡಿಸಿದ ಕರೆನ್ಸಿಗಳಲ್ಲಿ ಪಾವತಿಸುತ್ತಿದೆ. ಯುಎಇ ಕರೆನ್ಸಿಯಾಗಿರುವ ದಿರ್ಹಾಮ್ ಮತ್ತು ರಷ್ಯಾದ ರೂಬಲ್​ಗಳಲ್ಲಿ ಪಾವತಿಗಳನ್ನು ಮಾಡಲಾಗುತ್ತಿದೆ. ದುಬೈ ಮೂಲದ ಕೆಲವು ವರ್ತಕರು ಹಾಗೂ ರಷ್ಯಾದ ತೈಲ ಮಾರಾಟ ಕಂಪನಿಗಳು ಡಾಲರ್ ಹೊರತುಪಡಿಸಿದ ಬೇರೆ ಕರೆನ್ಸಿಗಳಲ್ಲಿ ಹಣ ಪಾವತಿಸುವಂತೆ ಕೇಳಿಕೊಳ್ಳುತ್ತಿರುವುದು ವಿಶೇಷ ಬೆಳವಣಿಗೆಯಾಗಿದೆ. ಭಾರತ ಮಾತ್ರವಲ್ಲದೆ, ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಕೂಡ ರಷ್ಯಾದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಬೇರೆ ಕರೆನ್ಸಿಗಳನ್ನು ಬಳಕೆ ಮಾಡತೊಡಗಿರುವುದು ಡಾಲರ್ ಪ್ರಭಾವ ಒಂದಿಷ್ಟು ತಗ್ಗಲು ಕಾರಣವಾಗಿದೆ.
ಈಜಿಪ್ತ್, ಸೌದಿ ಅರೇಬಿಯಾ, ಯುಎಇ, ಅಲ್ಜೀರಿಯಾ ಮತ್ತು ಬಹ್ರೇನ್ ಮುಂತಾದ ಮಧ್ಯಪ್ರಾಚ್ಯ ರಾಷ್ಟ್ರಗಳು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡ (ಬ್ರಿಕ್ಸ್) ಭೌಗೋಳಿಕ ರಾಜಕೀಯ ಬಣ ಸೇರಲು ಬಯಸುವುದಾಗಿ ಹೇಳಿವೆ. ಜೂನ್​ನಲ್ಲಿ ನಡೆಯಲಿರುವ ಸಭೆಯಲ್ಲಿ ಸದಸ್ಯರ ನಡುವೆ ಗಡಿಯಾಚೆಗಿನ ವ್ಯಾಪಾರಕ್ಕಾಗಿ ಹೊಸ ರೀತಿಯ ಕರೆನ್ಸಿ ಸೃಜಿಸುವ ಬಗ್ಗೆ ರ್ಚಚಿಸಲಾಗುವುದು ಎಂದು ರಷ್ಯಾ ಹೇಳಿದೆ.
ಅಮೆರಿಕ ಡಾಲರ್​ಗೆ ಪರ್ಯಾಯಗಳು ಸೃಷ್ಟಿಯಾಗುತ್ತಿರುವ ಬಗೆಗೆ ಇತ್ತೀಚಿಗೆ ಮಾಧ್ಯಮಗಳು ವರದಿಗಳನ್ನು ಮಾಡಿವೆ. ‘ಡಾಲರ್ ಪ್ರಾಬಲ್ಯಕ್ಕೆ ಬೆದರಿಕೆ ಇದೆಯೇ?’ ಎಂದು ‘ನ್ಯೂಯಾರ್ಕ್ ಟೈಮ್ಸ್’ ಬರೆದಿದೆ. ಮಲ್ಟಿಪೋಲಾರ್ (ಬಹುಧ್ರುವಿಯ) ಕರೆನ್ಸಿಯ ಜಗತ್ತಿಗೆ ಸಿದ್ಧರಾಗಿ ಎಂದು ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆ ಮಾರ್ಚ್​ನಲ್ಲಿ ಎಚ್ಚರಿಸಿದೆ. ಡಾಲರ್​ಗೆ ಪರ್ಯಾಯವು ಬೆರಗುಗೊಳಿಸುವ ವೇಗದಲ್ಲಿ ನಡೆಯುತ್ತಿದೆ ಎಂದು ಬ್ಲೂಮ್​ಗ್ ಮಾಧ್ಯಮ ಬರೆದಿದೆ. ಅಮೆರಿಕ ಡಾಲರ್​ಗಳು ಈಗ ಜಾಗತಿಕವಾಗಿ ಅಧಿಕೃತ ವಿದೇಶಿ ಮೀಸಲುಗಳಲ್ಲಿ ಶೇಕಡಾ 58ರಷ್ಟಿದೆ ಎಂದು ಬ್ಲೂಮ್​ಗ್ ವರದಿ ಮಾಡಿದೆ. ಇದು 2001ರಲ್ಲಿ ಶೇಕಡಾ 73ರಷ್ಟಿತ್ತು. 1970ರ ದಶಕದ ಅಂತ್ಯದಲ್ಲಿ ಶೇಕಡಾ 85ರಷ್ಟಿತ್ತು. ಇದು ಡಾಲರ್ ಮಹತ್ವ ಕಡಿಮೆಯಾಗುತ್ತಿರುವ ಸೂಚಕವಾಗಿದೆ.
ಎರಡನೇ ವಿಶ್ವ ಯುದ್ಧ ಕೊನೆಗೊಂಡ ನಂತರ 1944ರಲ್ಲಿ ವಿಶ್ವ ಆರ್ಥಿಕತೆಯನ್ನು ಸರಿಪಡಿಸಲು 44 ರಾಷ್ಟ್ರಗಳ ಪ್ರತಿನಿಧಿಗಳು ನ್ಯೂ ಹ್ಯಾಂಪ್​ಶೈರ್​ನ ಬ್ರೆಟನ್ ವುಡ್ಸ್​ನಲ್ಲಿ ಸಭೆ ಸೇರಿದರು. ಜಾಗತಿಕವಾಗಿ ಬೃಹತ್ ಆರ್ಥಿಕತೆಯಾಗಿರುವ ಅಮೆರಿಕವು ಡಾಲರ್​ನ ಮೌಲ್ಯವನ್ನು ಚಿನ್ನಕ್ಕೆ ನಿಗದಿಪಡಿಸಲು ಹಾಗೂ ಇತರ ದೇಶಗಳು ತಮ್ಮಕರೆನ್ಸಿಗಳನ್ನು ಡಾಲರ್​ಗೆ ಹೊಂದಿಸಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ಯಾವುದೇ ರಾಷ್ಟ್ರವು ತನ್ನ ವಿದೇಶಿ ವಿನಿಮಯ ದರ ಕಾಪಾಡಿಕೊಳ್ಳಲು ಡಾಲರ್​ಗಳನ್ನು ಮೀಸಲು ಇಡುವ ವ್ಯವಸ್ಥೆ ರೂಪುಗೊಂಡಿತು. ಹೀಗೆ ಡಾಲರ್ ಪ್ರಬಲ ಜಾಗತಿಕ ಕರೆನ್ಸಿಯಾಯಿತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
