ನ್ಯೂಯಾರ್ಕ್​:ವಿಶ್ವವನ್ನೇ ಬಾಧಿಸುತ್ತಿರುವ ಕರೊನಾ ಸೋಂಕು ಕೆಲದಿನಗಳಿಂದ ಇಳಿಮುಖವಾಗುತ್ತಿದೆ. ಇದೇ ರೀತಿ ಅದು ಕಡಿಮೆಯಾಗುವುದು ಮುಂದುವರಿದರೆ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ತೊಡಕಾಗುತ್ತದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರ್ದಿಷ್ಟವಾದ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ, ಸಂಶೋಧನೆ ನಡೆಯುತ್ತಿರುವ ಹೆಚ್ಚಿನ ಸಂಖ್ಯೆಯ ಸೋಂಕಿತರು ಸಿಗದೆ, ಚುಚ್ಚುಮದ್ದಿನ ಪರೀಕ್ಷೆಗೆ ತೊಡಕು ಉಂಟಾಗಲಿದೆ ಎಂದು ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರಿಗೆ ಸಹಕರಿಸುತ್ತಿರುವ ಔಷಧ ಕಂಪನಿ ಅಸ್ಟ್ರಾಜೆಂಕಾದ ಸಿಇಒ ಪ್ಯಾಸ್ಕಲ್​ ಸೋರಿಯಾಟ್​ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯ ಆರೋಗ್ಯವಂತ ಜನರಲ್ಲಿ ಕರೊನಾ ಸೋಂಕು ಉಂಟು ಮಾಡಿ, ಪರೀಕ್ಷೆ ಮುಂದುವರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದ ಏರ್​ ಇಂಡಿಯಾ ಸಿಬ್ಬಂದಿ ಸಮಯ ಪ್ರಜ್ಞೆ
ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ. ಯುರೋಪ್​ನಲ್ಲಿ ಈಗಾಗಲೆ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಅಮೆರಿಕ ಮತ್ತು ಬ್ರಿಟನ್​ನಲ್ಲಿ ಹೆಚ್ಚಾಗಿದೆ. ಆದರೆ ಅಲ್ಲಿ ಕೂಡ ಸದ್ಯದಲ್ಲೇ ಸೋಂಕಿತರ ಸಂಖ್ಯೆ ಕಡಿಮೆಯಾಗುವುದು ನಿಶ್ಚಿತ. ಹಾಗಾಗಿ, ಸಂಶೋಧನೆಗೆ ತೊಡಕಾಗುವ ಸಾಧ್ಯತೆ ಇರುವುದರಿಂದ, ಸಂಶೋಧನೆಗಳನ್ನು ತ್ವರಿತವಾಗಿ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಿವರಿಸಿದ್ದಾರೆ.
ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರ ಜತೆಗೆ ಸ್ಯಾನೋಫಿ, ಜಾನ್ಸನ್​ ಆ್ಯಂಡ್​ ಜಾನ್ಸನ್​, ಗ್ಲಾಕ್ಸೋಸ್ಮಿತ್​ಕ್ಲೈನ್​ ಮತ್ತು ಫೈಜರ್​ ಜತೆ ಅಸ್ಟ್ರಾಜೆನೆಕಾ ಕೂಡ ಶ್ರಮಿಸುತ್ತಿದೆ.
ವಿಶ್ವದ ಹಲವು ರಾಷ್ಟ್ರಗಳು ಲಾಕ್​ಡೌನ್​ ಮೂಲಕ ಕರೊನಾ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಾರಾದರೂ, ಈ ಸೋಂಕುರಹಿತ ವಾತಾವರಣದಲ್ಲಿ ಎಂದಿನಂತೆ ಮುಕ್ತವಾಗಿ ಜನಜೀವನ ನಡೆಯುವಂತೆ ಮಾಡಲು ಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ಎಲ್ಲ ರಾಷ್ಟ್ರಗಳು ಒತ್ತು ನೀಡುತ್ತಿವೆ.
ಕೊವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸೋತಿದೆ; ರಾಜ್ಯಪಾಲರ ತೀವ್ರ ಅಸಮಾಧಾನ, ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
