ಮುಂಬೈ:ಎಂ.ಎಸ್.ಧೋನಿ ದಿ ಅನ್​ಟೋಲ್ಡ್ ಸ್ಟೋರಿ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ಮುಂಬೈ ನ ಅವರ ಬಾಂದ್ರಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಈಗಷ್ಟೇ ಹೊರಬಿದ್ದಿದೆ.ಸುದ್ದಿ ಕೇಳಿದ ಬಾಲಿವುಡ್ ಮಂದಿ, ಅವರ ಅಭಿಮಾನಿ ಬಳಗ ತೀವ್ರ ಆಘಾತಕ್ಕೊಳಗಾಗಿ ಕಂಬನಿ ಮಿಡಿದಿದ್ದಾರೆ.ಸ್ಟಾರ್ ಪ್ಲಸ್ ಟಿವಿ ಕಾರ್ಯಕ್ರಮ ‘ಕಿಸ್ ದೇಶ್ ಮೇ ಹೈ ಮೇರಾ ದಿಲ್ (2008)’ ಮೂಲಕ ನಟನೆ ಆರಂಭಿಸಿದ ಸುಶಾಂತ್ ಸಿಂಗ್ ರಜಪೂತ್ ಝೀ ಟಿವಿಯ ಜನಪ್ರಿಯ ಧಾರಾವಾಹಿ ಪವಿತ್ರ ರಿಷ್ತಾದಲ್ಲಿ ‘ಮಾನವ್’ ಆಗಿ ಖ್ಯಾತಿ ಗಳಿಸಿದ ನಂತರ ಕಾಯ್ ಪೊ ಚೆ (2013) ಚಿತ್ರದ ಮೂಲಕ ಸುಶಾಂತ್ ಬಾಲಿವುಡ್‌ನತ್ತ ತಿರುಗಿದರು. ಒಂದು ದಶಕದ ವೃತ್ತಿಜೀವನದಲ್ಲಿ, ಸುಶಾಂತ್ ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಕೇದಾರನಾಥ್, ಸೋಂಚಿರಿಯಾ ಮತ್ತು ಚಿಚೊರೆ
ಇದನ್ನೂ ಓದಿ:ಅಣ್ಣನಿಲ್ಲದ ಮೇಲೆ …; ಚಿರು ನೆನೆದು ಧ್ರುವ ಭಾವುಕ ಪೋಸ್ಟ್!
ನಂತಹ ಹಲವಾರು ಹಿಟ್ ಚಿತ್ರಗಳ ಭಾಗವಾದರು. ಅವರ ಮುಂಬರುವ ಚಿತ್ರ, ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಹಾಲಿವುಡ್ ನ ಹಿಂದಿ ರಿಮೇಕ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸುಶಾಂತ್ ನಿಧನದ ಸುದ್ದಿ ಕೇಳಿ ಬಾಲಿವುಡ್ ಮಂದಿ ತೀವ್ರ ಆಘಾತಕ್ಕೊಳಗಾಗಿ ಕಂಬನಿ ಮಿಡಿದಿದ್ದಾರೆ.ನಟ ಅಕ್ಷಯ್ ಕುಮಾರ್ ಈ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದು, ಮಾತುಗಳೇ ಬರುತ್ತಿಲ್ಲ ಎಂದಿದ್ದಾರೆ. ಎಂಥ ಅದ್ಭುತ ನಟ.! ಚಿಚ್ಚೋರ್ ಚಿತ್ರದಲ್ಲಿ ಆತನ ನಟನೆಯನ್ನು ನೆನಪಿಸಿಕೊಂಡೆ. ಈ ಸಿನೆಮಾ ನೀಡಿದ ಖುಷಿಯನ್ನು ನಿರ್ಮಾಪಕ ಸಾಜೀದ್ ಅವರೊಂದಿಗೆ ಹಂಚಿಕೊಂಡಿದ್ದೆ. ಅವರೊಬ್ಬ ಪ್ರತಿಭಾವಂತ ನಟ, ಅವರ ಅಗಲಿಕೆ ನನ್ನನ್ನು ಘಾಸಿಗೊಳಿಸಿದೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಆತನ ಕುಟುಂಬಕ್ಕೆ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ನಟ ಸುಶಾಂತ್​ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ಮೋದಿ
ಝೀ ಟಿವಿ ಶೋ ಅವರಿಗೆ ಒಂದು ಉತ್ತಮ ನೆಲೆಯೊದಗಿಸಿತ್ತು ಎಂಬ ಖುಷಿಯನ್ನು ಏಕ್ತಾ ಕಪೂರ್ ಅವರೊಂದಿಗೆ ಟ್ವೀಟರ್​​ನಲ್ಲಿ ಹಂಚಿಕೊಂಡದ್ದನ್ನು ನೆನೆದು ಏಕ್ತಾ ಕಪೂರ್ ಕಂಬನಿ ಮಿಡಿದಿದ್ದಾರೆ.ಸುಶಾಂತ್ ನಟನೆ, ಕಾರ್ಯದಲ್ಲಿ ಅವರ ಬದ್ಧತೆ ನನಗೆ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಸಿನೆಮಾ ಕ್ಷೇತ್ರದಲ್ಲಿ ಅವರೊಂದಿಗೆ ಕಾಲ ಕಳೆದ ನೆನಪುಗಳು ನನ್ನಲ್ಲಿನ್ನೂ ಅಚ್ಚ ಹಸಿರಾಗಿವೆ. ನನಗೆ ಅವರೇ ಪ್ರೇರಣೆ. ಅವರಿಲ್ಲದ ಈ ಕ್ಷಣ ಚೇತನವೇ ಕಳೆದುಹೋದಂತಾಗಿದೆ ಎಂದು ನೆನೆದಿದ್ದಾರೆ ವರುಣ್ ಧವನ್.
ಬಾಲಿವುಡ್ `ಧೋನಿ’ ಸುಶಾಂತ್ ಸಿಂಗ್ ಆ ದಿನಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
