ನವದೆಹಲಿ:ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟ ಕಳೆದ ಮೂರು ದಿನಗಳಿಂದ ಈಶಾನ್ಯ ದೆಹಲಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಮೊನ್ನೆ ಹೋರಾಟಗಾರನೊಬ್ಬ ಪೊಲೀಸ್​ ಅಧಿಕಾರಿಗೆ ಪಿಸ್ತೂಲ್​ನಿಂದ ಗುಂಡಿಕ್ಕಿ ಸಾಯಿಸುವುದಾಗಿ ಹೆದರಿಸಿದ್ದು ಆ ಸಮಯದಲ್ಲಿ ತನಗೆ ಯಾವ ಭಾವನೆ ಮೂಡುತ್ತಿತ್ತು ಎನ್ನುವುದನ್ನು ಪೊಲೀಸ್​ ಅಧಿಕಾರಿ ಹಂಚಿಕೊಂಡಿದ್ದಾರೆ.
ದೀಪಕ್​ ದಹಿಯಾ ಹೆಸರಿನ ಪೊಲೀಸ್​ ಅಧಿಕಾರಿ ಹೋರಾಟದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಆ ಸಮಯಕ್ಕೆ ಅವರೆದುರಿಗೆ ಬಂದೂಕಿನೊಂದಿಗೆ ಬಂದ ಹೋರಾಟಗಾರರ, ನಿನ್ನನ್ನು ಶೂಟ್​ ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಅದಕ್ಕೆ ಹೆದರದ ದೀಪಕ್​ ಧೈರ್ಯವಾಗಿ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬೇರೆಯವರ ಮೇಲೆ ಗುಂಡನ್ನು ಹಾರಿಸಬೇಡ ಎಂದು ಕೇಳಿದ್ದಾರೆ. ಆ ಹೋರಾಟಗಾರ ಸಿಟ್ಟಿನಿಂದ ಎಂಟು ಬಾರಿ ಗುಂಡು ಹಾರಿಸಿದ್ದು ಅದೃಷ್ಟವಶಾತ್​ ಅದ್ಯಾವ ಗುಂಡೂ ಸಹ ದೀಪಕ್​ ಅವರ ದೇಹಕ್ಕೆ ತಗುಲಿಲ್ಲ.
ಹೋರಾಟಗಾರನ ಎದುರಿಗೆ ನಿಂತಿದ್ದ ಸನ್ನಿವೇಶವನ್ನು ಹೇಳಿಕೊಂಡಿರುವ ದೀಪಕ್​, ಆ ಹೋರಾಟಗಾರನ ಹಿಂದೆ ಕನಿಷ್ಠ 25 ಜನ ತಮ್ಮ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ತನ್ನ ಹಿಂದಿದ್ದ ಜನ ನಮ್ಮನ್ನು ಸಾಯಿಸಬೇಡವೆಂದು ಬಂದೂಕು ಹಿಡಿದಿದ್ದ ಹೋರಾಟಗಾರನಲ್ಲಿ ಕೇಳಿಕೊಳ್ಳುತ್ತಿದ್ದರು. ನನಗೆ ನನ್ನ ಪ್ರಾಣಕ್ಕಿಂತ ಜನರನ್ನು ರಕ್ಷಿಸಬೇಕೆಂಬ ನನ್ನ ಕರ್ತವ್ಯವೇ ಹೆಚ್ಚಾಗಿ ಕಂಡಿತು ಎಂದು ತಿಳಿಸಿದ್ದಾರೆ.
ದೆಹಲಿಯ ಈಶಾನ್ಯ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಮುಖ್ಯ ಪೇದೆ, ಗುಪ್ತಚರ ದಳದ ಅಧಿಕಾರಿ ಸೇರಿದಂತೆ ಒಟ್ಟು 21 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
