ಮುಂಬೈ:ಕೇರಳದ ಕೋಳಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ಪೈಲಟ್​ ಕ್ಯಾಪ್ಟನ್​ ದೀಪಕ್​ ಸಾಠೆ ಅವರು ಭಾರತೀಯ ವಾಯುಪಡೆ ಯೋಧರಾಗಿದ್ದರು ಎಂಬುದು ಈಗಾಗಲೆ ತಿಳಿದಿರುವ ಸಂಗತಿ. ಆದರೆ, ಅವರು ಚಾಲನೆ ಮಾಡುತ್ತಿದ್ದ ವಾಯುಪಡೆ ವಿಮಾನ ಅಪಘಾತವಾಗಿ ಅವರ ತಲೆಬುರುಡೆ ಸೀಳುಬಿಟ್ಟಿತ್ತು. ಆದರೆ, ಸೋಲೊಪ್ಪಿಕೊಳ್ಳದ ಮನೋಭಾವದ ಅವರು, ಗಾಯಗಳೆಲ್ಲವೂ ಗುಣವಾದ ಬಳಿಕ ಎದ್ದುಬಂದು ತಮ್ಮ ಫಿಟ್​ನೆಸ್​ ಸಾಬೀತುಪಡಿಸಿ ಮತ್ತೆ ಕಾಕ್​ಪಿಟ್​ನಲ್ಲಿ ಕುಳಿತಿದ್ದರು.
ಇದು ದೀಪಕ್​ ಸಾಠೆ ಅವರ ಸಹೋದರ ಸಂಬಂಧಿ ನೀಲೇಶ್​ ಸಾಠೆ ಅವರು ತಿಳಿಸಿರುವ ವಿಷಯ. ನೀಲೇಶ್​ ಸಾಠೆ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಆರ್ಥಿಕ ಸಲಹೆಗಾರರಾಗಿದ್ದಾರೆ. ಕೋಳಿಕ್ಕೋಡ್​ ವಿಮಾನ ದುರಂತದಲ್ಲಿ ಮೃತಪಟ್ಟ ದೀಪಕ್​ ಸಾಠೆ ಅವರಿಗೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಾ ಈ ವಿಷಯ ತಿಳಿಸಿದ್ದಾರೆ.
90ರ ದಶಕದ ಆರಂಭದಲ್ಲಿ ದೀಪಕ್​ ಸಾಠೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿದ್ದ ವಿಮಾನ ಅಪಘಾತಕ್ಕೀಡಾಗಿ ಅವರ ತಲೆಬುರುಡೆ ಸೀಳುಬಿಟ್ಟಿತ್ತು. ಅವರ ಸ್ಥಿತಿಯನ್ನು ಕಂಡು ಅವರು ಮತ್ತೊಮ್ಮೆ ಕಾಕ್​ಪಿಟ್​ನಲ್ಲಿ ಕೂರುವ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಗಟ್ಟಿಯಾದ ಆತ್ಮಬಲ ಮತ್ತು ವಿಮಾನ ಚಾಲನೆ ಮಾಡುವ ಕೆಲಸದ ಮೇಲಿನ ಪ್ರೀತಿಯಿಂದಾಗಿ ಅವರು ಎದ್ದುಬಂದಿದ್ದರು. ತಮ್ಮ ಫಿಟ್​ನೆಸ್​ ಅನ್ನು ಸಾಬೀತುಪಡಿಸಿ ಮತ್ತೊಮ್ಮೆ ಕಾಕ್​ಪಿಟ್​ನಲ್ಲಿ ಕುಳಿತಿದ್ದರು. ಅದನ್ನು ಕಂಡವರು ಇದೊಂದು ಚಮತ್ಕಾವೇ ಸರಿ ಎಂದು ಉದ್ಗರಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅರೆಕ್ಷಣದಲ್ಲಿ ನಡೆದ ದುರಂತ ನರಕವನ್ನೇ ಸೃಷ್ಟಿಸಿತು..
ದೀಪಕ್​ ಸಾಠೆ, ನನ್ನ ಸಹೋದರ ಸಂಬಂಧಿ ಎನ್ನುವುದಕ್ಕಿಂತಲೂ ಹೆಚ್ಚಿನದಾಗಿ ನನಗೆ ಅವರು ಆಪ್ತಸ್ನೇಹಿತರಾಗಿದ್ದರು. ಇಂಥವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ವಂದೇ ಭಾರತ್​ ಮಿಷನ್​ನಡಿ ದುಬೈನಲ್ಲಿ ಸಿಲುಕಿದ್ದ ಭಾರತೀಯರನ್ನು ತವರಿಗೆ ಕರೆತರುವ ಕೆಲಸದಲ್ಲಿ ತೊಡಗಿದ್ದರು. ದುರದೃಷ್ಟವಶಾತ್​ ಅವರು ಚಾಲನೆ ಮಾಡುತ್ತಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ ಶುಕ್ರವಾರ ರಾತ್ರಿ ಕೋಳಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಜಾರಿ ಪ್ರಪಾತಕ್ಕೆ ಬಿದ್ದಿದೆ ಎಂದು ಹೇಳಿದ್ದಾರೆ.
ದೀಪಕ್​ ಅವರು ತುಂಬಾ ಅನುಭವಿ ಪೈಲಟ್​ ಆಗಿದ್ದರು. 36 ವರ್ಷಗಳ ವಿಮಾನ ಚಾಲನೆಯ ಅನುಭವ ಅವರಿಗಿತ್ತು. ಎನ್​ಡಿಎನ 58ನೇ ಕೋರ್ಸ್​ನ ಟಾಪರ್​ ಆಗಿ, ಸ್ವಾರ್ಡ್​ ಆಫ್​ ಹಾನರ್​ ಪಡೆದುಕೊಂಡಿದ್ದರು. 21 ವರ್ಷ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ, 2005ರಲ್ಲಿ ಕಮರ್ಷಿಯಲ್​ ಪೈಲಟ್​ ಆಗಿ ಏರ್​ ಇಂಡಿಯಾ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ತಾಯಿ ಸಿಂಹವು ತನ್ನ ಮರಿಗೆ ಏನು ಹೇಳ್ತಿದೆ ಗೆಸ್​ ಮಾಡಿ: ಇಲ್ಲಿದೆ ನೋಡಿ ಕುತೂಹಲಕಾರಿ ಉತ್ತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
