ನವದೆಹಲಿ:ಬೆಳಕಿನ ಹಬ್ಬ ದೀಪಾವಳಿ.ದೀಪಾವಳಿಯನ್ನು ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ.  ಬೆಳಕಿನ ಹಬ್ಬ ದೀಪಾವಳಿಯು ಭಾರತೀಯ ಮಾರುಕಟ್ಟೆಗೆ ಪುಷ್ಟಿ ನೀಡಿದೆ. ಗ್ರಾಹಕರಿಂದ ಸ್ವದೇಶಿ ಉತ್ಪನ್ನಗಳಿಗೆ ಈ ಸಲ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಸ್ಥಳೀಯ ಉದ್ಯಮಿಗಳು, ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಿದೆ.
ದೀಪಾವಳಿಯ ಸಂದರ್ಭ ಚಿಲ್ಲರೆ ಮಾರುಕಟ್ಟೆಯಲ್ಲಿ ಇದುವರೆಗೆ 3.75 ಲಕ್ಷ ಕೋಟಿ ರೂ. ವ್ಯಾಪಾರ ದಾಖಲಾಗಿದೆ ಎಂದು ವ್ಯಾಪಾರಿಗಳ ಸಂಘಟನೆ ಕಾನ್ವೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್‌ (ಸಿಎಐಟಿ) ಸೋಮವಾರ ತಿಳಿಸಿದೆ.
ಗೋವರ್ಧನ ಪೂಜೆ, ಭೈಯಾ ದೂಜ್, ಚಾತ್ ಪೂಜೆ ಹಾಗೂ ತುಳಸಿ ವಿವಾಹದಂತಹ ಹಬ್ಬಗಳು ಇನ್ನಷ್ಟೇ ನಡೆಯಬೇಕಿದೆ. ಈ ಹಬ್ಬಗಳಲ್ಲಿ 50,000 ಕೋಟಿ ರೂ. ಹೆಚ್ಚುವರಿ ವ್ಯಾಪಾರವಾಗಲಿದೆ ಎಂದು ಸಿಎಐಟಿ ತಿಳಿಸಿದೆ.
ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ದೀಪಾವಳಿ ಸಂದರ್ಭ ಹೆಚ್ಚಾಗಿ ಭಾರತೀಯ ಉತ್ಪನ್ನಗಳು ಮಾತ್ರವೇ ಮಾರಾಟವಾಗಿವೆ ಹಾಗೂ ಖರೀದಿಸಲಾಗಿವೆ. ಇದು ಗಮನಾರ್ಹ ಎಂದು ಅದು ಹೇಳಿದೆ. ಈ ದೀಪಾವಳಿಯ ಸಂದರ್ಭ ಚೀನಾ ಉತ್ಪನ್ನಗಳು 1 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ವ್ಯಾಪಾರವನ್ನು ಕಳೆದುಕೊಂಡಿವೆ. ಹಿಂದಿನ ವರ್ಷ ದೀಪಾವಳಿ ಸಂದರ್ಭ ಚೀನಾ ಉತ್ಪನ್ನಗಳು ಸುಮಾರು ಶೇ. 70 ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
Gold, Silver Price; ದೀಪಾವಳಿ ಹಬ್ಬದ ಸಂಭ್ರಮ; ಚಿನ್ನ, ಬೆಳ್ಳಿ ಖರೀದಿಸಲು ಸೂಕ್ತ ದಿನ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
