ಬೆಂಗಳೂರು:ಕಳೆದ ಕೆಲವು ದಿನಗಳಿಂದ ಡ್ರಗ್ಸ್​ ಜಾಲದ ಪ್ರಕರಣದಲ್ಲಿ ಹೆಸರು ಕೇಳಿಬಂದು ಭಾರಿ ಸುದ್ದಿಯಲ್ಲಿದ್ದ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಇದೀಗ ಶಾಂತಿಪ್ರಿಯರಾಗಿದ್ದಾರೆ. ಹಾಗಂತ ಡ್ರಗ್ಸ್​ ಪ್ರಕರಣದ ಕಾರಣಕ್ಕೆ ಅವರೇನಾದರೂ ಮೌನ-ಧ್ಯಾನಕ್ಕೆ ಶರಣಾದರಾ? ಎಂದು ಯಾರಾದರೂ ಅಂದುಕೊಂಡರೆ ಅದು ನಿಜವಲ್ಲ.

ದೀಪಿಕಾ ತಮ್ಮ ಟ್ವಿಟರ್ ಹ್ಯಾಂಡಲ್​ನ ಪ್ರೊಫೈಲ್​ ನೇಮ್​ ಕೂಡ ಬದಲಿಸಿಕೊಂಡಿದ್ದಾರೆ. ಅಲ್ಲಿಯೂ ‘ಶಾಂತಿಪ್ರಿಯ’ ಎಂದು ಅವರು ಹಾಕಿಕೊಂಡಿದ್ದಾರೆ. ಅಷ್ಟಕ್ಕೂ ದೀಪಿಕಾ ಪಡುಕೋಣೆ ‘ಶಾಂತಿಪ್ರಿಯ’ ಆಗಿದ್ದಕ್ಕೆ ಕಾರಣ ಬಾಲಿವುಡ್​. ಅರ್ಥಾತ್, ಅವರು ಬಾಲಿವುಡ್​ಗೆ ಪ್ರವೇಶಿಸಿ ಈಗ 13 ವರ್ಷ ಭರ್ತಿಯಾಗಿದೆ.
2017ರಲ್ಲಿ ತೆರೆಕಂಡಿದ್ದ ಫರ್ಹಾ ಖಾನ್​ ಕುಂದರ್ ನಿರ್ದೇಶನದ ‘ಓಂ ಶಾಂತಿ ಓಂ’ ಸಿನಿಮಾ ಮೂಲಕ ದೀಪಿಕಾ ಬಾಲಿವುಡ್​ಗೆ ಪ್ರವೇಶಿಸಿದ್ದರು. ಶಾರುಖ್​ ಖಾನ್​-ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನಿಮಾ 2007ರ ನ. 9ರಂದು ಬಿಡುಗಡೆ ಆಗಿತ್ತು.
ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ದ್ವಿಪಾತ್ರಾಭಿನಯ ಮಾಡಿದ್ದರು. ಶಾಂತಿಪ್ರಿಯ ಮೆಹ್ರ (ಶಾಂತಿ) ಹಾಗೂ ಸಂಧ್ಯಾ ಬನ್ಸಾಲ್​ (ಸ್ಯಾಂಡಿ) ಎಂಬ ಎರಡು ಪಾತ್ರಗಳಲ್ಲಿ ದೀಪಿಕಾ ಅಭಿನಯಿಸಿದ್ದರು. ಇದೀಗ ಈ ಚಿತ್ರದ ಮೂಲಕ ತಾವು ಬಾಲಿವುಡ್​ಗೆ ಪ್ರವೇಶಿಸಿ 13 ವರ್ಷ ಪೂರೈಸಿದ ಖುಷಿಯಲ್ಲಿ ಅವರು ತಮ್ಮ ಟ್ವಿಟರ್​ ಹ್ಯಾಂಡಲ್ ಹೆಸರನ್ನು ‘ಶಾಂತಿಪ್ರಿಯ’ ಎಂದು ಬದಲಿಸಿಕೊಂಡು ಪ್ರೊಫೈಲ್​ಗೂ ‘ಓಂ ಶಾಂತಿ ಓಂ’ ಸಿನಿಮಾದ ಸ್ಟಿಲ್ ಹಾಕಿಕೊಂಡಿದ್ದಾರೆ. ಆ ಮೂಲಕ ಅವರು ಬಾಲಿವುಡ್​ನಲ್ಲಿನ ತಮ್ಮ ಸುದೀರ್ಘ ಪ್ರಯಾಣದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
