ಮುಂಬೈ:ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಜನಸಾಮಾನ್ಯರ ಜತೆಗೆ ಹಲವು ಗಣ್ಯರು ಮತದಾನದ ಹಕ್ಕನ್ನು ಚಲಾಯಿಸಿದರು. ಬಾಲಿವುಡ್ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಮುಂಬೈನ ಮತದಾನ ಕೇಂದ್ರಕ್ಕೆ ಬಂದಿದ್ದರು.
ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ, ದೀಪಿಕಾ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡರು. ಈ ವಿಡಿಯೋಗಳು ಸಖತ್​ ವೈರಲ್​ ಆಗಿವೆ. ಪ್ರೆಗ್ನೆಂಟ್​​ ಎಂದು ದಂಪತಿ ಘೋಷಿಸಿದ ನಂತರ ದೀಪಿಕಾ ಸಿನಿಮಾ ಶೂಟಿಂಗ್​, ಕಾರ್ಯಕ್ರಮ ಎಂದು ಭಾಗಿಯಾಗುತ್ತಿದ್ದರು. ಹೀಗಾಗಿ ದೀಪಿಕಾ ನಿಜ್ವಾಗಲೂ ಗರ್ಭಿಣಿನಾ ಎಂದು ಫ್ಯಾನ್ಸ್​​ ಪ್ರಶ್ನೆ ಮಾಡುತ್ತಿದ್ದರು. ಇದೆ ಮೊದಲ ಬಾರಿಗೆ ದೀಪಿಕಾ ಅವರ ಬೇಬಿ ಬಂಪ್​​ ನೊಂದಿಗೆ ಕಾಣಿಸಿಕೊಂಡಿದ್ದಾರೆ.
#WATCH| Maharashtra: Actors Ranveer Singh and Deepika Padukone arrive at a polling station in Mumbai to cast their vote for the fifth phase of#LokSabhaElections2024pic.twitter.com/IHH6h8NESg
— ANI (@ANI)May 20, 2024

ನಟ ರಣವೀರ್ ಸಿಂಗ್, ದೀಪಿಕಾ ಅವರು ಕಾರಿನಿಂದ ಇಳಿದು ಮತ ಚಲಾಯಿಸಲು ಮತಗಟ್ಟೆಗೆ ಹೋಗುತ್ತಿದ್ದಂತೆ ಆಕೆಯ ಕೈ ಹಿಡಿದು ಎಚ್ಚರಿಕೆಯಿಂದ ಕರೆದೊಯ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018 ರಲ್ಲಿ ವಿವಾಹವಾದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ.
ಪ್ರತಿಷ್ಠಿತ ಚಿತ್ರ ಕಲ್ಕಿ 2898ಎಡಿಯಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಪ್ರಭಾಸ್ ನಾಯಕನಾಗಿದ್ದು, ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಚಿತ್ರವು ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಚಟುವಟಿಕೆಗಳನ್ನು ನಡೆಸುತ್ತಿದೆ. 2024 ಜೂನ್ 27ರಂದು ಸಿನಿಮಾ ತೆರೆಗೆ ಬರಲಿದೆ.
ಗಂಡು ಮಗುವಿಗೆ ಜನ್ಮ ಕೊಟ್ಟ ‘ಉಲ್ಲಾಸ ಉತ್ಸಾಹ’ ನಟಿ ಯಾಮಿ ಗೌತಮ್; ಕಂದಮ್ಮನಿಗೆ ಇಟ್ಟ ಹೆಸರೇನು ಗೊತ್ತಾ?

ದೇಶದಲ್ಲಿ ಎಲ್ಲೇ ವಿಶ್ವಕಪ್ ನಡೆದ್ರೂ ಗಾನ ಕೋಗಿಲೆಗೆ ಸಿಗ್ತಿತ್ತು ಉಚಿತ ಟಿಕೆಟ್! BCCI ಈ ನಿರ್ಧಾರದ ಹಿಂದೆ ಇದೆ ಕಾರಣ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 2 =
Remember me
