ಖರೋಗ್ನೆ:ಮಧ್ಯಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ (ನರೇಗಾ) ಯ ಜಾಬ್​ ಕಾರ್ಡ್ ಪಡೆದುಕೊಂಡ ‘ದೀಪಿಕಾ ಪಡುಕೋಣೆ’, ‘ಜಾಕ್ವೆಲಿನ್ ಫೆರ್ನಾಂಡೆಸ್’ ಜೂನ್ ಮತ್ತು ಜುಲೈ ತಿಂಗಳ ಕೂಲಿಯನ್ನೂ ಪಡ್ಕೊಂಡಿದ್ದಾರೆ!. ಮಧ್ಯಪ್ರದೇಶದ ಸರ್ಕಾರದ ನರೇಗಾ ದಾಖಲೆಗಳಲ್ಲಿ ಈ ಅಂಶ ದಾಖಲಾಗಿರುವುದು ಅಚ್ಚರಿ ಮೂಡಿಸಿದೆ.
ಈ ನಟಿಯರ ಫೋಟೋಗಳು ಕೆಲವು ಕುಟುಂಬಗಳ ಜಾಬ್​ ಕಾರ್ಡ್​ಗಳಲ್ಲಿ ಕಂಡುಬಂದಿರುವುದೇ ಇದಕ್ಕೆ ಕಾರಣ. ಝಿರ್ನಿಯಾ ಪಂಚಾಯತಿನ ಪೀಪರ್​ಖೇಡಾ ನಾಕಾ ಗ್ರಾಮದ ಕನಿಷ್ಠ 11 ಫಲಾನುಭವಿಗಳ ಹೆಸರು ಮತ್ತು ಫೋಟೊಗಳು ಹೋಲಿಕೆಯಾಗುತ್ತಿಲ್ಲ. ಕೆಲವು ಕಾರ್ಡ್​ಗಳಲ್ಲಿ ಪುರುಷರ ಹೆಸರಿದ್ದರೂ, ಫೊಟೋ ಮಹಿಳೆಯರದ್ದು, ನಟಿಯರದ್ದೋ ಆಗಿರುವ ಕಾರಣ ಗೊಂದಲಕ್ಕೆ ಎಡೆಮಾಡಿಕೊಟ್ಟಂತಾಗಿದೆ.
ಇದನ್ನೂ ಓದಿ:ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್​ ಚಿತ್ರಕ್ಕೆ ಬ್ಯಾನ್​ ಬಿಸಿ; ಲಕ್ಷ್ಮೀ ದೇವಿಗೆ ಅವಹೇಳನ ಆರೋಪ
ಕೆಲವು ಗ್ರಾಮಸ್ಥರಿಗೆ ಜಾಬ್ ಕಾರ್ಡ್​ ಫೋಟೋಗಳು ಇಂಟರ್​ನೆಟ್​ನಲ್ಲಿ ಹರಿದಾಡುತ್ತಿರುವುದು ಕಾಣಿಸಿ ಅಚ್ಚರಿಗೊಳಗಾಗಿದ್ದರು. ಸುನಿಲ್ ಸಿಂಗ್ ಎಂಬ ಗ್ರಾಮಸ್ಥ ತನ್ನ ಕುಟುಂಬದ ಜಾಬ್​ ಕಾರ್ಡ್​ ದೀಪಿಕಾ ಪಡುಕೋಣೆ ಪೋಟೋ ನೋಡಿ ಅಚ್ಚರಿಗೊಳಗಾಗಿದ್ದಾಗಿ ಹೇಳಿದ್ದಾರೆ. ಮನೋಜ್​ ಶಿವಶಂಕರ್​ ಅವರ ಜಾಬ್​ಕಾರ್ಡ್​ನಲ್ಲೂ ದೀಪಿಕಾ ಪಡುಕೋಣೆ ಫೋಟೋ ಕಂಡುಬಂದಿದ್ದು, ನಾನೆಂದೂ ನರೇಗಾ ಕೆಲಸಕ್ಕೆ ಹೋಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಪದಮ್​, ಉಮ್ರಾವೋ ಎಂಬುವವರ ಕುಟುಂಬದವ ಜಾಬ್​ಕಾರ್ಡ್​ನಲ್ಲಿ ಜಾಕ್ವೆಲಿನ್ ಫೋಟೋ ಪತ್ತೆಯಾಗಿದೆ. (ಏಜೆನ್ಸೀಸ್)
ಬಿಹಾರ ಚುನಾವಣೆ: ಮಹಾಮೈತ್ರಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ರು ತೇಜಸ್ವಿ ಯಾದವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + seven =
Remember me
