ನವದೆಹಲಿ:ನಟಿ ದೀಪಿಕಾ ಪಡುಕೋಣೆ ಮಂಗಳವಾರ ಸಂಜೆ ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.
ದೀಪಿಕಾ ಅಲ್ಲಿ ಏನು ಮಾತನಾಡಿಲ್ಲ. ಬದಲಿಗೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಮತ್ತು ವಿದ್ಯಾರ್ಥಿ ಹಳೆಯ ಮುಖಂಡ ಕನ್ಹಯ್ಯ ಕುಮಾರ್​ ಅವರ ಜತೆ ನಿಂತಿದ್ದರು. ಮೂಲಗಳ ಪ್ರಕಾರ ಅವರು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಜೆ 7.30ಕ್ಕೆ ವಿವಿ ಆವರಣಕ್ಕೆ ಬಂದ ದೀಪಿಕಾ, ಅಲ್ಲಿನ ಸಭೆಯಲ್ಲಿ 15 ನಿಮಿಷಗಳ ಕಾಲ ಭಾಗವಹಿಸಿದ್ದರು. ಕೆಲ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಲ್ಲಿಂದ ತೆರಳಿದರು.
ದೀಪಿಕಾ ಅವರ ಈ ಭೇಟಿಯಿಂದ ಕೆರಳಿರುವ ಬಿಜೆಪಿ, ಅವರ ಸಿನಿಮಾಗಳನ್ನು ಬಂದ್​ ಮಾಡಿಸಬೇಕು ಎಂದು ಕಿಡಿ ಕಾರಿದೆ.
ಸೋಮವಾರ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ್ದ ದೀಪಿಕಾ, “ಜೆಎನ್​ಯು ಹಿಂಸಾಚಾರಕ್ಕೆ ಭಯ ಬಿದ್ದಿಲ್ಲ ಎಂಬ ವಿದ್ಯಾರ್ಥಿಗಳ ಹೇಳಿಕೆಗೆ ಹೆಮ್ಮೆ ಎನಿಸುತ್ತದೆ. ಜನ ಬೀದಿಗಿಳಿದು ತಮ್ಮ ಧ್ವನಿ ಎತ್ತುತ್ತಿದ್ದಾರೆ. ಏಕೆಂದರೆ ಬದಲಾವಣೆಗೆ ಇದು ಅಗತ್ಯ” ಎಂದಿದ್ದರು.(ಏಜೆನ್ಸೀಸ್​)
#WATCHDelhi: Deepika Padukone outside Jawaharlal Nehru University, to support students protesting against#JNUViolence.pic.twitter.com/vS5RNajf1O
— ANI (@ANI)January 7, 2020

RT if you will Boycott Movies of@deepikapadukonefor her Support to#TukdeTukdeGangand Afzal Gangpic.twitter.com/LN5rpwjDmT
— Tajinder Pal Singh Bagga (@TajinderBagga)January 7, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twenty =
Remember me
