ತಿರುಪತಿ:ತಮ್ಮ ತಂದೆಯ ಹುಟ್ಟುಹಬ್ಬದ ಅಂಗವಾಗಿ ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ ಕುಟುಂಬದೊಂದಿಗೆ ತಿರುಪತಿಗೆ ಭೇಟಿ ನೀಡಿದ್ದಾರೆ.
ಪ್ರಕಾಶ್​​ ಪಡುಕೋಣೆ ಅವರ 67ನೇ ಹುಟ್ಟುಹಬ್ಬದ ಅಂಗವಾಗಿ ತಂದೆಯ ಜತೆ ಶುಕ್ರವಾರ ದೀಪಿಕಾ ಪಡುಕೋಣೆ ತಿಮ್ಮಪ್ಪನ ದರ್ಶನ ಮಾಡಿದ್ದು, ತಂದೆ ಜತೆಗಿನ  ಫೋಟೋವನ್ನು ದೀಪಿಕಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷ ದೀಪಿಕಾ ಪಡುಕೋಣೆ ತಿರುಪತಿ ಭೇಟಿ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಎಷ್ಟೇ ಕೆಲಸಗಳಿದ್ದರೂ ವರ್ಷಕ್ಕೊಮ್ಮೆಯಾದರೂ ತಿಮ್ಮಪ್ಪನ ದರ್ಶನ ಪಡೆದೇ ತೀರುತ್ತಾರೆ. ಇತ್ತೀಚೆಗೆ ತಮ್ಮ ವಿವಾಹ ವರ್ಷಾಚರಣೆ ಸಂದರ್ಭದಲ್ಲಿ ಪತಿ ರಣವೀರ್​ ಸಿಂಗ್​ ಜತೆಗೆ ದೀಪಿಕಾ ತಿರುಪತಿಗೆ ಭೇಟಿ ನೀಡಿದ್ದರು. ಇದೇ ವರ್ಷದಲ್ಲಿ ಎರಡನೇ ಭೇಟಿ ಇದಾಗಿದೆ.
ತಮ್ಮ ತಂದೆ ಪ್ರಕಾಶ್​ ಪಡುಕೋಣೆ, ತಾಯಿ ಉಜ್ಜಲ ಪಡುಕೋಣೆ ಹಾಗೂ ಸಹೋದರಿ ಆನಿಶಾ ಕೂಡ ತಿರುಪತಿಗೆ ಭೇಟಿ ನೀಡಿದ್ದಾರೆ.
ಸದಾ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವ ದೀಪಿಕಾ  ಇಂದು ತಿರುಪತಿ ದರ್ಶನದ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಸಾಲು ಸಾಲು ಚಿತ್ರಗಳಲ್ಲಿ ದೀಪಿಕಾ ಬ್ಯುಸಿಯಾಗಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + five =
Remember me
