ಉತ್ತರಪ್ರದೇಶ:ಭಾರತೀಯ ಮಹಿಳಾ ಕ್ರಿಕೆಟ್​ ತಂಡದಲ್ಲಿ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿರುವ ದೀಪ್ತಿ ಶರ್ಮಾ ಸಾಧನೆಯನ್ನು ಗುರುತಿಸಿದ ಉತ್ತರಪ್ರದೇಶ ಸರ್ಕಾರ, ಅವರಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ನೀಡಿ ಗೌರವಿಸಿದೆ.
ಇದನ್ನೂ ಓದಿ:ಮೊದಲ ಪಂದ್ಯ ಸೋಲಿನ ನಡುವೆ ಟೀಮ್​ ಇಂಡಿಯಾಗೆ ಬರೆ: ಎರಡನೇ ಟೆಸ್ಟ್​ನಿಂದ ಹೊರಬಿದ್ದ ಸ್ಟಾರ್​ ಆಟಗಾರರು
ಆಗ್ರಾದ ಆಲ್‌ರೌಂಡರ್ ಕ್ರಿಕೆಟಿಗರಾದ ದೀಪ್ತಿ ಶರ್ಮಾ ಅವರಿಗೆ ಉತ್ತರ ಪ್ರದೇಶ ಸರ್ಕಾರವು ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಹುದ್ದೆಯನ್ನು ನೀಡುವುದರ ಜತೆಗೆ ಮೂರು ಕೋಟಿ ರೂ. ನಗದು ಹಣವನ್ನು ಬಹುಮಾನವಾಗಿ ಕೊಟ್ಟು ಗೌರವಿಸಿದೆ. ರಾಷ್ಟ್ರೀಯ ಮಹಿಳಾ ತಂಡಕ್ಕೆ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ 26 ವರ್ಷದ ದೀಪ್ತಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವೇದಿಕೆಯಲ್ಲಿ ಸನ್ಮಾನಿಸಿದರು.
ದೀಪ್ತಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ಯೋಗಿ ಆದಿತ್ಯನಾಥ್, ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಗಳಿಸಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಆಗ್ರಾ ಮೂಲದ ಅನೇಕ ಕ್ರೀಡಾಪಟುಗಳು ಕ್ರೀಡೆಗೆ ನೀಡಿದ ಕೊಡುಗೆಗಳನ್ನು ಗೌರವಿಸಿ, ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ:ನಿತ್ಯಭವಿಷ್ಯ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಾರೋಗ್ಯದ ಭಯ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಕ್ರೀಡಾಪಟುಗಳಿಗೆ ಶುಭದಿನವಾಗಲಿದೆ
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಪ್ಯಾರಾ ಅಥ್ಲೀಟ್‌ಗಳಾದ ಜತಿನ್ ಕುಶ್ವಾಹಾ ಮತ್ತು ಯಶ್ ಕುಮಾರ್​ಗೆ ತಲಾ 5 ಲಕ್ಷ ರೂ.ಗಳನ್ನು ನೀಡಿದರೆ, ಸ್ನೂಕರ್ ಚಾಂಪಿಯನ್ ಆದ ಪರಾಸ್ ಗುಪ್ತಾ ಮತ್ತು ರೈಫಲ್ ಶೂಟರ್ ಆಯುಷಿ ಗುಪ್ತಾ ಅವರಿಗೆ ಗೌರವಿಸಲಾಯಿತು,(ಏಜೆನ್ಸೀಸ್).
ನಿತ್ಯಭವಿಷ್ಯ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಾರೋಗ್ಯದ ಭಯ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಕ್ರೀಡಾಪಟುಗಳಿಗೆ ಶುಭದಿನವಾಗಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
