ನವದೆಹಲಿ:ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಯುದ್ಧ ಚತುರ ರಫೇಲ್​ ರಣಬೇಟೆಗಾರ ಗುರುವಾರ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು.
ಹರಿಯಾಣ ಅಂಬಾಲಾ ವಾಯುನೆಲೆಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಭಾಗಿಯಾದರು. ರಫೇಲ್​ ಸೇರ್ಪಡೆಗೂ ಮುನ್ನ ಯುದ್ಧ ವಿಮಾನಗಳಿಗೆ ಸಾಂಪ್ರದಾಯಿಕ ಸರ್ವಧರ್ಮ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ರಫೇಲ್​ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನವನ್ನು ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು ಕಣ್ತುಂಬಿಕೊಂಡರು.
#WATCHRafale fighter aircraft flying at low-speed during an air display at Indian Air Force base in Ambalapic.twitter.com/8UhgbROzRN
— ANI (@ANI)September 10, 2020

ರಾಜನಾಥ್​ ಸಿಂಗ್​ ಅವರು ರಫೇಲ್​ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್​ ಗೋಲ್ಡನ್​ ಆ್ಯರೋಸ್​ಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಫ್ರಾನ್ಸ್​ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಸಾಕ್ಷಿಯಾದರು.
Haryana: Water cannon salute given to the five Rafale fighter aircraft at Ambala airbasepic.twitter.com/EeOO3rSbNf
— ANI (@ANI)September 10, 2020

59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಸಮರ ವಿಮಾನಗಳನ್ನು ಫ್ರಾನ್ಸ್​ನಿಂದ ಭಾರತ ಖರೀದಿಸುತ್ತಿದೆ. ಈ ಪೈಕಿ ಈ ಐದು ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಫ್ರಾನ್ಸ್​ನ ಡಸ್ಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳನ್ನು ನಿರ್ವಿುಸಿದೆ. 2021ರೊಳಗೆ 36 ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿದೆ.(ಏಜೆನ್ಸೀಸ್​)
VIDEO| ರಫೇಲ್​ ವಾಯುಪಡೆ ಸೇರ್ಪಡೆಗೆ ಕ್ಷಣಗಣನೆ: ಯುದ್ಧ ವಿಮಾನಗಳಿಗೆ ಸರ್ವಧರ್ಮ ಪೂಜಾರ್ಪಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
