ನವದೆಹಲಿ:ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಮೇಲೆ ಭಾರತ ಮುಂದಿನ 10 ದಿನಗಳ ವರೆಗೆ ತೀವ್ರ ಇಗಾ ಇಡಲು ನಿರ್ಧರಿಸಿದೆ. ಕಮಾಂಡರ್ ಹಂತದ ಮಾತುಕತೆ ಅನ್ವಯ ಚೀನಾ ಸೇನೆಯನ್ನು ಹಿಂಪಡೆಯುತ್ತಿದೆಯೇ ಎಂದು ದೃಢಪಡಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ. ಒಪ್ಪಂದ ಪ್ರಕಾರ ಚೀನಾ ಸೇನೆ ಗಡಿಯಿಂದ ಹಿಂದೆ ಸರಿದರೆ ಮಾತ್ರ ಭಾರತವೂ ಗಡಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಮುಂದಿನ ಹಂತದ ಕಮಾಂಡರ್ ಸಭೆಯಲ್ಲಿ ಈ ಕುರಿತು ಭಾರತ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
ಪ್ರಸ್ತುತ ಪ್ಯಾಂಗೊಂಗ್ ತ್ಸೊ ಸರೋವರ ಹಾಗೂ ಗೋಗ್ರಾ ಪ್ರದೇಶದಲ್ಲಿ ಕಮಾಂಡರ್ ಹಂತದ ಮಾತುಕತೆ ಪೂರ್ಣಗೊಳ್ಳುವ ವೇಳೆಗೆ ಸೇನೆ ಸಂಪೂರ್ಣ ಹಿಂಪಡೆಯುವ ಕಾರ್ಯವೂ ಮುಕ್ತಾಯವಾಗುವ ನಿರೀಕ್ಷೆ ಇದೆ. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಪ್ರದೇಶದಿಂದ ಈಗ ಸೇನೆಯನ್ನು ಸಂಪೂರ್ಣ ಹಿಂಪಡೆಯಲಾಗಿದೆ.
ಉತ್ತರ ನೀಡುವ ಸಮಯ ಬಂದಿದೆ:ಚೀನಾದ ಕಮ್ಯುನಿಸ್ಟ್ ಪಕ್ಷ ಒಡ್ಡುತ್ತಿರುವ ಸವಾಲುಗಳಿಗೆ ಜಗತ್ತು ತಕ್ಕ ಉತ್ತರ ನೀಡುವ ಸಮಯ ಬಂದಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ. ದಕ್ಷಿಣ ಏಷ್ಯಾ ಮಾತ್ರವಲ್ಲ, ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಿಗೂ ಚೀನಾದಿಂದ ಅಪಾಯ ಇದೆ. ಎಲ್ಲರೂ ಒಗ್ಗಟ್ಟಾಗಿ ಚೀನಾಕ್ಕೆ ಉತ್ತರ ನೀಡಬೇಕಾಗಿದೆ ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.
ಸಮರಾಭ್ಯಾಸ ವೀಕ್ಷಣೆ
ಲಡಾಖ್​ನಲ್ಲಿ ಭೂಸೇನೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸುತ್ತಿರುವ ಸಮರಾಭ್ಯಾಸವನ್ನು ಸಚಿವ ರಾಜನಾಥ ಸಿಂಗ್ ವೀಕ್ಷಿಸಿದರು. ಯುದ್ಧ ಹೆಲಿಕಾಪ್ಟರ್​ಗಳು, ಟ್ಯಾಂಕ್​ಗಳು, ಸೇನಾ ವಾಹನಗಳು ಹಾಗೂ ಕಮಾಂಡೊ ಪಡೆ ಇದರಲ್ಲಿ ಭಾಗಿಯಾಗಿತ್ತು. ವಾಯುಪಡೆ ಸಿಬ್ಬಂದಿ ಪ್ಯಾರಾ ಡ್ರಾಪಿಂಗ್ ಸಹಿತ ಹಲವು ಕವಾಯತುಗಳನ್ನು ನಡೆಸಿದರು. ಭೂ ಸೇನಾ ಮುಖ್ಯಸ್ಥ ನರವಾಣೆ, ಸೇನೆಯ ಮೂರೂ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಇದ್ದರು.
ಒಂದು ಇಂಚು ಭೂಮಿಯನ್ನೂ ಕಿತ್ತುಕೊಳ್ಳಲಾಗದು
ರಕ್ಷಣಾ ಸಚಿವ ರಾಜನಾಥ ಸಿಂಗ್ ಲಡಾಖ್​ನ ಲುಕುಂಗ್ ಮಂಚೂಣಿ ಸೇನಾ ನೆಲೆಗೆ ಶುಕ್ರವಾರ ಭೇಟಿ ನೀಡಿ ಸೈನಿಕರ ಜತೆ ಮಾತುಕತೆ ನಡೆಸಿದರು. ವಿಶ್ವದ ಯಾವುದೇ ಶಕ್ತಿ ನಮ್ಮಿಂದ ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲಾರದು ಎನ್ನುವ ಮೂಲಕ ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು. ಗಡಿ ವಿಚಾರವಾಗಿ ಪ್ರಸ್ತುತ ಚೀನಾ ಜತೆಗೆ ಮಾತುಕತೆ ನಡೆಯುತ್ತಿದೆ. ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳುವುದು ಅತ್ಯಂತ ಸೂಕ್ತ. ಆದರೆ, ಇದರಿಂದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಭಾರತ ದುರ್ಬಲ ರಾಷ್ಟ್ರವಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ. ಭಾರತವನ್ನು ಕೆಣಕಿದರೆ ಅದಕ್ಕೆ ತಕ್ಕ ಉತ್ತರ ನೀಡಲಾಗುತ್ತದೆ. ಸೈನಿಕರ ಬಗ್ಗೆ ಹೆಮ್ಮೆ ಇದೆ. ಅವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
