ನವದೆಹಲಿ:ಭಾರತೀಯ ಸೇನೆ ಭವಿಷ್ಯದಲ್ಲಿ ಇನ್ನೂ ಪ್ರಳಯಾಂತಕ ಎನಿಸಿಕೊಳ್ಳಲಿದೆ. ಅರ್ಥಾತ್, ‘ಪ್ರಳಯ್’ ಯುದ್ಧ ಕ್ಷಿಪಣಿಗಳ ಖರೀದಿ ಕುರಿತ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿದೆ.
150ರಿಂದ 500 ಕಿ.ಮೀ. ನಡುವಿನ ಗುರಿಗಳನ್ನು ಹೊಡೆಯಬಲ್ಲ ಪ್ರಳಯ್​ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರೆಜಿಮೆಂಟ್ ತನ್ನದಾಗಿಸಿಕೊಳ್ಳುವ ಪ್ರಸ್ತಾವನೆಯನ್ನು ಇತ್ತೀಚೆಗೆ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ. ಇದು ಭಾರತೀಯ ಸೇನೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯು ಈ ಕ್ಷಿಪಣಿಗಳನ್ನು ಸಾಂಪ್ರದಾಯಿಕ ಯುದ್ಧತಂತ್ರಗಳ ಜೊತೆಗೇ ಬಳಸಿಕೊಳ್ಳಲಿದೆ. ಭಾರತೀಯ ವಾಯುಪಡೆಗೆ ಇದೇ ರೀತಿಯ ಪ್ರಸ್ತಾಪವನ್ನು ಸರ್ಕಾರ ಒಪ್ಪಿದ್ದ ಬೆನ್ನಲ್ಲೇ ಈ ಕ್ಷಿಪಣಿಗಳನ್ನು ಖರೀದಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಳಯ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರೆಜಿಮೆಂಟ್​ಅನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಗಳ ಎಲ್​ಒಸಿಗಳಲ್ಲಿ ನಿಯೋಜಿಸಲಾಗುವುದು ಎಂದೂ ಸೇನಾ ಮೂಲಗಳು ತಿಳಿಸಿವೆ. ಈ ಕ್ಷಿಪಣಿಗಳನ್ನು ಕಳೆದ ವರ್ಷದ ಡಿ. 21 ಮತ್ತು 22ರಂದು ಪರೀಕ್ಷಿಸಿದ್ದು, ಯಶಸ್ವಿ ಫಲಿತಾಂಶ ಲಭಿಸಿತ್ತು.
ಕ್ರಿಯೇಟಿವ್ ಆಗುತ್ತಿರುವ ಪೊಲೀಸರು; ಬೆಂಗಳೂರು, ಹುಬ್ಬಳ್ಳಿ ಬಳಿಕ ಇದೀಗ ದೆಹಲಿ ಪೊಲೀಸರ ಸರದಿ

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
