ಚೀನಾ ಸೈನಿಕರು ಪೂರ್ವ ಲಡಾಖ್​​ನಲ್ಲಿ ಭಾರತದ ಭೂಪ್ರದೇಶವ ಒಳಗೆ ಮೇ ತಿಂಗಳಲ್ಲೇ ಒಳನುಸುಳಿ ಅತಿಕ್ರಮಣ ಮಾಡಿದ್ದರು ಎಂದು ರಕ್ಷಣಾ ಸಚಿವಾಲಯ ವೆಬ್​ಸೈಟ್​ಗೆ ಕೆಲವು ದಾಖಲೆಗಳ ಸಮೇತ ಅಪ್ಲೋಡ್​ ಮಾಡಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಕೂಡ ಮಾಡಿ, ಚೀನಾ ಸೈನಿಕರು ಒಳನುಗ್ಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರೇಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.
ಆದರೆ ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ರಕ್ಷಣಾ ಸಚಿವಾಲಯ ವೆಬ್​ಸೈಟ್​ನಲ್ಲಿ ಈ ಮಾಹಿತಿಯನ್ನು ಡಿಲೀಟ್​ ಮಾಡಿದೆ. ಮೇ ತಿಂಗಳಲ್ಲಿ ಚೀನಾ ಸೈನಿಕರು ಭಾರತದ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿದ್ದರು ಎಂದು ಅಪ್ಲೋಡ್​ ಮಾಡಿದ್ದ ವಿವರಗಳನ್ನು ಅಲ್ಲಿಂದ ತೆಗೆಯಲಾಗಿದೆ.ಇದನ್ನೂ ಓದಿ:ಶಿಲಾನ್ಯಾಸದ ನಂತರ ಪ್ರಧಾನಿ ಮೋದಿ ಜೈ ಶ್ರೀರಾಮ್​ ಹೇಳದೆ, ಜೈ ಸಿಯಾ ರಾಮ್​ ಎಂದೇ ಹೇಳಿದ್ದೇಕೆ? ಕಾರಣ ಇಲ್ಲಿದೆ ನೋಡಿ…
ಚೀನಾದ ಒಳನುಸುಳುವಿಕೆಯನ್ನು ಅತಿಕ್ರಮಣ ಎಂದು ಉಲ್ಲೇಖಿಸಿದ್ದ ರಕ್ಷಣಾ ಸಚಿವಾಲಯ, ಪ್ಯಾಂಗೋಂಗ್ ಸರೋವರದಿಂದ ಭಾರತ ಹಿಂದೆ ಸರಿಯಬೇಕು ಎಂದು ಚೀನಾ ಬೇಡಿಕೆ ಇಡುತ್ತಿರುವ ಮಧ್ಯೆ ಈ ಸಂಘರ್ಷದ ನಿಲುವು ದೀರ್ಘವಾಗಿ ಇರಬಹುದು ಎಂದು ಹೇಳಿತ್ತು. ಭಾರತ ಮತ್ತು ಚೀನಾ ಸೈನಿಕರ ನಡುವಿನ ಹೊಡೆದಾಟದ ನಂತರ ಮೊದಲ ಬಾರಿಗೆ ರಕ್ಷಣಾ ಸಚಿವಾಲಯ ಚೀನಾ ವಿರುದ್ಧ ಅತಿಕ್ರಮಣ ಎಂಬ ಪದ ಪ್ರಯೋಗ ಮಾಡಿ ವೆಬ್​ಸೈಟ್​ನಲ್ಲಿ ಸಂಪೂರ್ಣ ಮಾಹಿತಿ ಹಾಕಿತ್ತು. ಆದರೆ ಇದು ರಾಜಕೀಯ ವಿವಾದಕ್ಕೆ ಕಾರಣವಾದ ನಂತರ ಅಲ್ಲಿಂದ ಡಿಲಿಟ್​ ಮಾಡಲಾಗಿದೆ.ಇದನ್ನೂ ಓದಿ:ಚೀನಾ ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಯಾಕೆ ಹೇಳಿದರು?-ರಾಹುಲ್ ಗಾಂಧಿ
ಚೀನಾದ ಸೈನಿಕರು ಮೇ 17,18ರಂದು ಉತ್ತರ ಹಾಟ್​ಸ್ಪ್ರಿಂಗ್ಸ್​​ನ ಪೆಟ್ರೋಲಿಂಗ್​ ಪಾಯಿಂಟ್​ 15ರ ಬಳಿ ಇರುವ ಕುಗ್ರಾಂಗ್ ನಾಲಾ, ಗೋಗ್ರಾ (ಪಿಪಿ 17ಎ) ಮತ್ತು ಪ್ಯಾಂಗೋಂಗ್ ತ್ಸೋದ ಉತ್ತರ ದಡದ ಬಳಿ ಗಡಿ ನಿಯಮ ಉಲ್ಲಂಘಿಸಿ, ಅತಿಕ್ರಮಣ ಮಾಡಿದ್ದರು ಎಂದು ವೆಬ್​ಸೈಟ್​ನಲ್ಲಿ ದಾಖಲಾಗಿತ್ತು. (ಏಜೆನ್ಸೀಸ್​)
ಕರೊನಾ ಭರಾಟೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ನಕಲಿ ಸ್ಯಾನಿಟೈಸರ್ ಮಾರಾಟಕ್ಕೆ ಬ್ರೇಕ್…..! ಬೆಚ್ಚಿಬೀಳಿಸುವಂತಿದೆ ‘ನಕಲಿ’ ಎಫೆಕ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
