ನವದೆಹಲಿ: ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹೊರಟಿರುವ ಕೇಂದ್ರ ಸರ್ಕಾರ ಸೇನೆಗೆ ಪಿನಾಕಾ ರಾಕೆಟ್ ಲಾಂಚರ್​ ಖರೀದಿಸಲು ಮುಂದಾಗಿದೆ. ಈ ಸಂಬಂಧ 2,580 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ ಹಾಕಿದೆ. ಆರು ಸೇನಾ ರೆಜಿಮೆಂಟ್​ಗಳಿಗೆ ಪಿನಾಕಾ ರಾಕೆಟ್ ಲಾಂಚರ್​ಗಳು ಇದರಿಂದ ಲಭ್ಯವಾಗಲಿವೆ. ಮೇಕ್​ ಇನ್​ ಇಂಡಿಯಾ ಯೋಜನೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯದ ಮಹತ್ವದ ಹೆಜ್ಜೆ ಇದಾಗಿದೆ.
ಪಿನಾಕಾ ರಾಕೆಟ್ ಲಾಂಚರ್​ಗಾಗಿ ಇರುವ ಒಪ್ಪಂದವು ರಕ್ಷಣಾ ಸಚಿವಾಲಯದ ಅಕ್ವಿಸಿಷನ್ ವಿಂಗ್ ಮತ್ತು ಭಾರತ್ ಅರ್ಥ್​ ಮೂವರ್ಸ್ ಲಿಮಿಟೆಡ್​ (ಬಿಇಎಂಎಲ್​), ಟಾಟಾ ಪವರ್ ಕಂಪನಿ ಲಿಮಿಟೆಡ್​ (ಟಿಪಿಸಿಎಲ್​) ಮತ್ತು ಲಾರ್ಸೆನ್ ಆ್ಯಂಡ್ ಟೂಬ್ರೋ (ಎಲ್​ ಆ್ಯಂಡ್ ಟಿ) ಜತೆಗೆ ಆಗಸ್ಟ್ 31ರಂದು ಏರ್ಪಟ್ಟಿದೆ.
ಇದನ್ನೂ ಓದಿ:ಇಂದಿನಿಂದ ಬಾರ್, ಕ್ಲಬ್ ಅನ್​ಲಾಕ್; 21ರ ಬಳಿಕ ಶಾಲೆಗಳಿಗೆ ಸಣ್ಣ ವಿನಾಯ್ತಿ; ಶುಭಸಮಾರಂಭಕ್ಕೆ ಕೊಂಚ ರಿಯಾಯ್ತಿ
ಆರು ಸೇನಾ ರೆಜಿಮೆಂಟ್​ಗೆ ಒಟ್ಟು 114 ಪಿನಾಕಾ ರಾಕೆಟ್ ಲಾಂಚರ್​ಗಳು ಈ ಒಪ್ಪಂದದ ಮೂಲಕ ಲಭ್ಯವಾಗಲಿವೆ. ಇದರಲ್ಲಿ ಆಟೋಮೇಟೆಡ್​ ಗನ್​ ಆ್ಯಂಡ್ ಪೊಸಿಷನಿಂಗ್ ಸಿಸ್ಟಂ(ಎಜಿಎಪಿಎಸ್​) ಮತ್ತು 45 ಕಮಾಂಡ್ ಪೋಸ್ಟ್​ಗಳು ಟಿಪಿಸಿಎಲ್​ ಮತ್ತು ಎಲ್​ಆ್ಯಂಡ್​ ಟಿಯಿಂದ ಮತ್ತು 330 ವೆಹಿಕಲ್ಸ್ ಬಿಇಎಂಎಲ್​ನಿಂದ ಪೂರೈಕೆಯಾಗಲಿದೆ.
ಇದನ್ನೂ ಓದಿ:ಪಾಕ್ ಸೇನೆಗೆ ಚೀನಾ ಉಪಗ್ರಹದ ನೆರವು?
ಇದರು 2024ಕ್ಕೆ ಪೂರ್ಣಗೊಂಡು ಉತ್ತರ, ಪೂರ್ವ ಗಡಿಭಾಗದಲ್ಲಿ ಸೇನೆಯ ಸೇವೆಗೆ ಲಭ್ಯವಾಗಬೇಕು ಎಂಬುದು ಒಪ್ಪಂದದ ಮಹತ್ವದ ಅಂಶ. ಈ ಯೋಜನೆಯ ಪ್ರಸ್ತಾವನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಅನುಮೋದಿಸಿದ್ದಾರೆ. ಪಿನಾಕಾ ಮಲ್ಟಿಪಲ್ ಲಾಂಚ್​ ರಾಕೆಟ್ ಸಿಸ್ಟಮ್ ಡಿಆರ್​ಡಿಒ ವಿನ್ಯಾಸಗೊಳಿಸಿದ್ದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾಗಿರಲಿದೆ. (ಏಜೆನ್ಸೀಸ್)
ಯೋಗ ಶಿಕ್ಷಕರ ಆನ್​ಲೈನ್ ತರಬೇತಿ ಶಿಬಿರಕ್ಕೆ ಡಾ.ವಿಜಯಸಂಕೇಶ್ವರರಿಂದ ಚಾಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
