ನವದೆಹಲಿ:ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಭಾರತವನ್ನು ಮಿಲಿಟರಿ ಸರಕುಗಳ ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸುವ, ರಕ್ಷಣಾ ಸಾಧನಗಳ ಖರೀದಿಗೆ ವೇಗ ನೀಡುವ ಮತ್ತು ಬಂಡವಾಳದ ಮೂಲಕ ಮೂರು ಸೇನೆಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುವ ಹೊಸ ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು (ಡಿಎಪಿ) ಬಿಡುಗಡೆ ಮಾಡಿದೆ. ಹೊಸ ನೀತಿಯಡಿಯಲ್ಲಿ, ಭಾರತದಲ್ಲಿ ಉತ್ಪಾದನೆಗೆ ಒತ್ತು ನೀಡಲು ವಿದೇಶಿ ಖರೀದಿ ನೀತಿಯನ್ನು ಪರಿಷ್ಕರಿಸಿದೆ. ವಿದೇಶಿ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಂಡ ದೇಶೀಯ ಸಂಸ್ಥೆ (ಆಪ್​ಸೆಟ್ ಒಪ್ಪಂದ) ಅಂದರೆ ವಿದೇಶಿ ಕಂಪನಿಗಳು ತಂತ್ರಜ್ಞಾನ ಪೂರೈಕೆ ಮಾಡಬೇಕು. ಆದರೆ, ಅವು ಹಾಗೆ ಮಾಡುತ್ತಿಲ್ಲ ಹೀಗಾಗಿ ಈ ಅಂಶವನ್ನು ಕೈಬಿಡಲಾಗಿದೆ. ಜತೆಗೆ ಏಕ ಗವಾಕ್ಷಿ ಖರೀದಿಯನ್ನು ಕೈಬಿಟ್ಟು, ಮಿಲಿಟರಿ ಸಾಧನಗಳನ್ನು ಗುತ್ತಿಗೆಗೆ ಪಡೆಯುವುದನ್ನು ಸೇರಿಸಲಾಗಿದೆ ಎಂದು ಡಿಒಪಿ ಬಿಡುಗಡೆ ಮಾಡಿದ ಬಳಿಕ ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.ಇದನ್ನೂ ಓದಿ:ಅಧಿಕಾರಿಗಳಿಗೆ ನಿವೃತ್ತಿ ಬಳಿಕ ಸರ್ಕಾರಿ ನಿವಾಸದಲ್ಲಿ ಉಳಿಯಲು ಬಿಡಬೇಡಿ.. ಹೈಕೋರ್ಟ್​ ಸೂಚನೆ..
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು, ರಕ್ಷಣಾ ಸಂಶೋ ಧನೆ ಮತ್ತು ಅಭಿವೃದ್ಧಿ ಮತ್ತು ರಕ್ಷಣಾ ವಲಯದ ಸಾರ್ವಜನಿಕ ಸಂಸ್ಥೆಯಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ವ್ಯವಸ್ಥೆಗಳ ಕುರಿತು ಹೊಸ ನಿಯಮಗಳನ್ನು ಡಿಎಪಿ ಒಳಗೊಂಡಿದೆ.
ಪೂರ್ವ ಲಡಾಖ್​ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಮುಖಾಮುಖಿಯ ಮಧ್ಯೆ ಸೇನೆಗೆ ಅಮೆರಿಕದಿಂದ 72,000ಕ್ಕೂ ಹೆಚ್ಚು ಆಕ್ರಮಣಕಾರಿ ರೈಫಲ್​ಗಳು ಸೇರಿದಂತೆ 2,290 ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ಅಮೆರಿಕದ ಸಿಐಜಿ ಸೌಯರ್ ಸಂಸ್ಥೆಯಿಂದ 780 ಕೋಟಿ ರೂ. ವೆಚ್ಚದಲ್ಲಿ ರೈಫಲ್​ಗಳನ್ನು ಖರೀದಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಸಮಿತಿ (ಡಿಎಸಿ) ಅನುಮೋದನೆ ನೀಡಿದೆ. ಇದರ ಜತೆಗೆ 970 ಕೋಟಿ ರೂ.ನಲ್ಲಿ ಸ್ಮಾರ್ಟ್ ಏರ್​ಫೀಲ್ಡ್ ಶಸ್ತ್ರಾಸ್ತ್ರಗಳು ಹಾಗೂ 540 ಕೋಟಿ ರೂ.ನಲ್ಲಿ ಎಚ್​ಎಫ್ ಟ್ರಾನ್ಸ್ ರಿಸೀವರ್ ಸೆಟ್​ಗಳನ್ನು ಖರೀದಿಸಲಾಗುತ್ತಿದೆ. ಭಾರತದಲ್ಲಿ ರಷ್ಯಾದ ಎಕೆ-203 ರೈಫಲ್​ಗಳನ್ನು ಸ್ಥಳೀಯವಾಗಿ ತಯಾರಿಸುವ ಯೋಜನೆ ವಿಳಂಬ ವಾಗುತ್ತಿರುವುದ ರಿಂದ ಅವಶ್ಯಕತೆ ಇರುವ ರೈಫಲ್​ಗಳನ್ನು ಅಮೆರಿಕ ದಿಂದ ಖರೀದಿಸ ಲಾಗುತ್ತಿದೆ ಎಂದು ತಿಳಿದು ಬಂದಿದೆ.
ಭಾರತ-ಡೆನ್ಮಾರ್ಕ್​ ವರ್ಚ್ಯುವಲ್​ ಸಭೆ; ಚೀನಾಕ್ಕೆ ಮಾತಿನ ಮೂಲಕವೇ ತಿವಿದ ಪ್ರಧಾನಿ ಮೋದಿ;

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − four =
Remember me
