ನವದೆಹಲಿ:ಲಡಾಖ್​ನಲ್ಲಿ ಪ್ರಚಂಡ ಚಳಿಗೆ ಸೆಡ್ಡುಹೊಡೆದು ಗಡಿ ಕಾಯುತ್ತಿರುವ ಭಾರತೀಯ ಯೋಧರಿಗೆ ಬೆಚ್ಚನೆಯ ಡೇರೆಗಳನ್ನು ನಿರ್ವಿುಸಿದ್ದ ಭಾರತ, ಈಗ ಗಡಿ ಒತ್ತುವರಿಗೆ ಚೀನಾ ನಡೆಸುವ ಸಂಭಾವ್ಯ ಕುತಂತ್ರ ತಡೆಯುವ ನಿಟ್ಟಿನಲ್ಲಿ ರಕ್ಷಣಾತ್ಮಕ ಸುರಂಗಗಳಿಗೆ ಮೊರೆ ಹೋಗಿದೆ.
ಆರರಿಂದ ಎಂಟು ಅಡಿ ವ್ಯಾಸದ ಕಾಂಕ್ರೀಟ್ ಹ್ಯೂಮ್ ಪೈಪ್​ಗಳನ್ನು ಜೋಡಿಸಲಾಗಿರುವ ರಕ್ಷಣಾತ್ಮಕ ಸುರಂಗ ಮಾರ್ಗ ನಿರ್ವಣಗೊಳ್ಳುತ್ತಿದ್ದು ಇದು ಶತ್ರುವಿನ ದಾಳಿಯಿಂದ ತುಕಡಿಗಳಿಗೆ ರಕ್ಷಣೆ ನೀಡಲಿದೆ. ಜತೆಗೆ ಗಡಿಒತ್ತುವರಿ ಪ್ರಯತ್ನವನ್ನು ತಡೆಯಲು ಸಾಧ್ಯವಾಗಲಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ನಿರ್ವಣವಾಗಲಿರುವ ಈ ಕೊಳವೆ ಮಾರ್ಗ ಬಳಸಿ ತುಕಡಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಶತ್ರುಗಳ ಕಣ್ಣಿಗೆ ಬೀಳದೆ ಮುನ್ನಡೆಯಬಹುದಾಗಿದೆ. ಈ ಸುರಂಗಗಳಲ್ಲಿ ಬಿಸಿಗಾಳಿ ಹರಿಸುವುದರ ಮೂಲಕ ಮರಗಟ್ಟುವ ಚಳಿ, ಹಿಮಪಾತದಿಂದಲೂ ಯೋಧರಿಗೆ ರಕ್ಷಣೆ ಸಿಗುತ್ತದೆ.
ಚೀನಾದಿಂದಲೂ ತಯಾರಿ: ಪೂರ್ವ ಲಡಾಖ್ ಮಾತ್ರವಲ್ಲದೆ ಎಲ್​ಒಸಿಯ ಸೆಂಟ್ರಲ್ ಮತ್ತು ಸಿಕ್ಕಿಂ ವಲಯದಲ್ಲಿನ ಟಿಬೆಟ್ ಗಡಿಯಲ್ಲಿ ಚೀನಾ ಕೂಡ ಸೇನಾ ಮೂಲಸೌಕರ್ಯ ಹೆಚ್ಚಿಸುತ್ತಿದೆ. ಇದನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಳೆದ ಆಗಸ್ಟ್ 29ರ ಮಧ್ಯರಾತ್ರಿ ವೇಳೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿು (ಪಿಎಲ್​ಎ) ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯ ಕೈಲಾಶ್ ಶ್ರೇಣಿಯನ್ನು ಆಕ್ರಮಿಸಲು ಪ್ರಯತ್ನಿಸಿತ್ತು. ಆದರೆ, ಭಾರತೀಯ ಸೇನೆ ಅಲ್ಲಿನ ಎತ್ತರದ ದಿಣ್ಣೆಗಳಲ್ಲಿ ಮೊದಲೇ ಬೀಡುಬಿಟ್ಟಿದ್ದರಿಂದ ಪಿಎಲ್​ಎ ಚಲನವಲನದ ಮೇಲೆ ನಿಗಾ ಇರಿಸಿ, ಅದರ ಪ್ರಯತ್ನವನ್ನು ವಿಫಲಗೊಳಿಸಿತು. ಭವಿಷ್ಯದಲ್ಲಿ ಇಂಥ ಸನ್ನಿವೇಶ ಉಂಟಾಗಬಾರದು ಎಂಬ ಕಾರಣಕ್ಕೆ ತುಕಡಿಗಳನ್ನು ಇರಿಸಬಹುದಾದ ಮತ್ತು ರಕ್ಷಣಾತ್ಮಕವಾಗಿಯೂ ಇರುವ ಸುರಂಗದ ಕಾಮಗಾರಿ ಕೈಗೊಂಡಿದೆ.
ಈ ಮಧ್ಯೆ, ಗಡಿಯಲ್ಲಿನ ಪ್ರಕ್ಷುಬ್ಧತೆಯನ್ನು ತಗ್ಗಿಸಲು ಉಭಯ ದೇಶಗಳ ಮಧ್ಯೆಯ 9ನೇ ಸುತ್ತಿನ ಮಾತುಕತೆ ಸದ್ಯದಲ್ಲೇ ಆರಂಭವಾಗಲಿದೆ. 8ನೇ ಸುತ್ತಿನ ಮಾತುಕತೆಯಲ್ಲಿ ಒಪ್ಪಿಕೊಂಡಂತೆ ಮೂರು ಹಂತದಲ್ಲಿ ಸೇನೆಯನ್ನು ಉಭಯ ದೇಶಗಳು ಹಿಂಪಡೆಯಬೇಕಿದೆ. ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯಲ್ಲಿನ ವಿವಾದಾತ್ಮಕ ನಿರ್ವಣಗಳನ್ನು ಚೀನಾ ತೆರವುಗೊಳಿಸಬೇಕಿದೆ.
ಸುರಂಗ ಬಳಕೆ ಹೊಸತಲ್ಲ
ಚೀನಾ ಕೂಡ ಸುರಂಗ ತಂತ್ರವನ್ನು ಜಪಾನ್ ವಿರುದ್ಧದ 2ನೇ ಯುದ್ಧದ ವೇಳೆ ಯಶಸ್ವಿಯಾಗಿ ಪ್ರಯೋಗಿಸಿತ್ತು. ದಕ್ಷಿಣ ಚೀನಾ ಸಮುದ್ರದ ಹೈನಾನ್ ದ್ವೀಪದಲ್ಲಿ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ, ಲಾಸಾ ವಾಯುನೆಲೆಯನ್ನು ಚೀನಾ ಸುರಂಗದಲ್ಲೇ ಸ್ಥಾಪಿಸಿದೆ. ಅಮೆರಿಕದ ವಿರುದ್ಧದ ಗೆರಿಲ್ಲಾ ಯುದ್ಧದಲ್ಲಿ ವಿಯೆಟ್ನಾಂ ಸುರಂಗದ ಮಾದರಿಯನ್ನೇ ಅನುಸರಿಸಿತ್ತು. 1960ರ ಕೊರಿಯಾ ಯುದ್ಧದಲ್ಲೂ ಉತ್ತರ ಕೊರಿಯಾ ಸುರಂಗದ ಆಶ್ರಯವನ್ನು ಬಳಕೆ ಮಾಡಿತ್ತು.
ಬಳಕೆ ಹೊಸತಲ್ಲ
ಚೀನಾ ಕೂಡ ಸುರಂಗ ತಂತ್ರವನ್ನು ಜಪಾನ್ ವಿರುದ್ಧದ 2ನೇ ಯುದ್ಧದ ವೇಳೆ ಯಶಸ್ವಿಯಾಗಿ ಪ್ರಯೋಗಿಸಿತ್ತು. ದಕ್ಷಿಣ ಚೀನಾ ಸಮುದ್ರದ ಹೈನಾನ್ ದ್ವೀಪದಲ್ಲಿ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ, ಲಾಸಾ ವಾಯುನೆಲೆಯನ್ನು ಚೀನಾ ಸುರಂಗದಲ್ಲೇ ಸ್ಥಾಪಿಸಿದೆ. ಅಮೆರಿಕದ ವಿರುದ್ಧದ ಗೆರಿಲ್ಲಾ ಯುದ್ಧದಲ್ಲಿ ವಿಯೆಟ್ನಾಂ ಸುರಂಗದ ಮಾದರಿಯನ್ನೇ ಅನುಸರಿಸಿತ್ತು. 1960ರ ಕೊರಿಯಾ ಯುದ್ಧದಲ್ಲೂ ಉತ್ತರ ಕೊರಿಯಾ ಸುರಂಗದ ಆಶ್ರಯವನ್ನು ಬಳಕೆ ಮಾಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + six =
Remember me
