ವಿಜಯವಾಡ:ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಒಂದರ ಹಿಂದೆ ಒಂದು ವಿಚಿತ್ರ ಘಟನೆಗಳು ನಡೆಯುತ್ತಿರುವುದ ಜನರನ್ನು ಚಿಂತೆಗೆ ದೂಡಿದೆ. ಕೆಲ ದಿನಗಳ ಹಿಂದೆ ಮೌಢ್ಯಕ್ಕೆ ಬಿದ್ದೋ? ಅಥವಾ ಭ್ರಮೆಗೆ ಓಳಗಾಗಿಯೋ? ಮರಳಿ ಬರುತ್ತಾರೆಂಬ ನಂಬಿಕೆಯಿಂದ ಸುಶಿಕ್ಷಿತ ದಂಪತಿ ಬೆತ್ತಲೆ ಪೂಜೆ ಮಾಡಿ ತಮ್ಮ ಹೆಣ್ಣುಮಕ್ಕಳನ್ನು ಕೊಂದಿದ್ದರು. ಇದೀಗ ದೇವರ ಬಳಿ ಹೋಗುತ್ತಿದ್ದೇನೆಂದು ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದು ಆತಂಕಕ್ಕೆ ದೂಡಿದೆ.
ಗಂಗಾವರಂ ವಲಯದ ಮಾರ್ಚೆಪಲ್ಲಿ ಗ್ರಾಮದ ಗಣೇಶ್​​ ಅಂತಿಮ ವರ್ಷದ ಪದವಿ ವಿದ್ಯಾರ್ಥಿ. ಜನವರಿ 21ರಿಂದ ಈ ಕಾಣೆಯಾಗಿದ್ದಾನೆ. ದೇವರ ಬಳಿ ಹೋಗುತ್ತಿದ್ದೇನೆಂದು ಪತ್ರ ಬರೆದಿಟ್ಟು ಗಣೇಶ್​ ನಾಪತ್ತೆಯಾಗಿದ್ದಾನೆ. ಇದೀಗ ಮನೆ ಬಿಟ್ಟು ಹೋಗಿರುವ ಮಗ ಬರುತ್ತಾನೋ? ಇಲ್ಲವೋ? ಎಂಬ ಚಿಂತೆಯಲ್ಲಿ ತಂದೆ-ತಾಯಿ ದಿನದೂಡುತ್ತಿದ್ದಾರೆ.
ಇದನ್ನೂ ಓದಿರಿ:ಸೋದರತ್ತೆಯನ್ನೇ ರೇಪ್​ ಮಾಡಲು ಪ್ರಯತ್ನಿಸಿದ ಯುವಕ! ಕುತ್ತಿಗೆ ಕೊಯ್ದು ಕೊಂದೇ ಬಿಟ್ಟ
ಗಣೇಶ್​ ಬರೆದಿರುವ ಪತ್ರದ ಸಂಪೂರ್ಣ ಮಾಹಿತಿಗೆ ಬರುವುದಾದರೆ, ನಾನು ದೇವರ ಬಳಿಗೆ ಹೋಗುತ್ತಿದ್ದೇನೆ. ನಾನು ಕಾಣಲಿಲ್ಲ ಎಂದು ಯಾರು ಭಯ ಪಡಬೇಡಿ. ಚಿಂತಿಸಲು ಬೇಡಿ. ನನ್ನ ತಮ್ಮನಿಗೆ ಮಗನಾಗಿ ಮತ್ತೆ ಹುಟ್ಟಿ ಬರುತ್ತೇನೆಂದು ಬರೆದಿದ್ದಾನೆ. ಇದನ್ನು ನೋಡಿದ ತಂದೆ-ತಾಯಿ ಗಾಬರಿಗೊಂಡಿದ್ದು, ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಗಣೇಶ್​ಗೆ ದೇವರ ಮೇಲೆ ತುಂಬಾ ಭಕ್ತಿ ಇತ್ತಂತೆ. ಅಲ್ಲದೆ, ಮದವಪಲ್ಲಿಯಲ್ಲಿ ನಡೆದ ಘಟನೆಯ ಬಗ್ಗೆ ಆತ ತುಂಬಾ ಕಳವಳ ವ್ಯಕ್ತಪಡಿಸಿದ್ದನಂತೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟದಲ್ಲಿದ್ದಾರೆ.(ಏಜೆನ್ಸೀಸ್​)
ದೇವಸ್ಥಾನಕ್ಕೆಂದು ಬೆಳ್ಳಂಬೆಳಗ್ಗೆಯೇ ಮನೆಬಿಟ್ಟ ಮಹಿಳೆ ಕೇವಲ 2 ಗಂಟೆಯಲ್ಲಿ ಕುಟುಂಬಕ್ಕೆ ಕೊಟ್ಟಳು ಶಾಕ್​!

ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?

ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
