ನವದೆಹಲಿ:ಸಣ್ಣ ಠೇವಣಿದಾರರ ಹಿತರಕ್ಷಿಸುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್​ಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ನಿಯಂತ್ರಣ ಹೆಚ್ಚಿಸುವ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದೆ.
ದೆಹಲಿ ಗಲಭೆ ಸಂಬಂಧ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಾಗ ಉಂಟಾದ ಗದ್ದಲದ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ- 2020 ಅನ್ನು ಮಂಡಿಸಿದರು. ಪಂಜಾಬ್ ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್​ನಂಥ ಬಿಕ್ಕಟ್ಟು ಭವಿಷ್ಯದಲ್ಲಿ ಸಂಭವಿಸಬಾರದೆಂಬುದೇ ಇದರ ಉದ್ದೇಶ ಎಂದು ನಿರ್ಮಲಾ ಹೇಳಿದರು.
ಬ್ಯಾಂಕ್​ಗಳ ನಿಯಂತ್ರಣಕ್ಕೆ ಸಂಬಂಧಿಸಿದ ಆರ್​ಬಿಐ ಮಾರ್ಗಸೂಚಿಗಳನ್ನು ಸಹಕಾರಿ ಬ್ಯಾಂಕ್​ಗಳಿಗೂ ಕಟ್ಟುನಿಟ್ಟಾಗಿ ಅನ್ವಯಿಸಬೇಕೆನ್ನುವುದು ಪ್ರಸ್ತಾಪಿತ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ. ಆದರೆ, ಆಡಳಿತಾತ್ಮಕ ವಿಚಾರಗಳ ಮೇಲೆ ಸಹಕಾರಿ ರಿಜಿಸ್ಟ್ರಾರ್​ರ ಮಾರ್ಗಸೂಚಿಗಳೇ ನಿಯಂತ್ರಣ ಹೊಂದಿರುತ್ತವೆ.
ಪ್ರಲ್ಹಾದ್ ಜೋಶಿ ಮನವಿ
ದೆಹಲಿ ಗಲಭೆ ವಿಚಾರವನ್ನು ಶೂನ್ಯ ವೇಳೆಯಲ್ಲಿ ರ್ಚಚಿಸಲು ಸರ್ಕಾರ ಸಿದ್ಧವಿದೆಯೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರೂ ವಿಪಕ್ಷದವರು ಅದಕ್ಕೂ ಕಿವಿಗೊಡಲಿಲ್ಲ.
ಸಕ್ಕರೆ ಉತ್ಪಾದನೆ ಕುಸಿತ
ದೇಶದ ಸಕ್ಕರೆ ಉತ್ಪಾದನೆ ಪ್ರಸಕ್ತ 2019-20ನೇ ಸಾಲಿನಲ್ಲಿ ಶೇ. 18ರಷ್ಟು ಕುಸಿಯಲಿದೆ. 2.73 ಟನ್ ಉತ್ಪಾದನೆ ಆಗಬಹುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಡಿ.ಆರ್. ದಾದಾರಾವ್ ಲೋಕಸಭೆಗೆ ತಿಳಿಸಿದರು. ಮಹಾರಾಷ್ಟ್ರ, ಕರ್ನಾಟಕ ಸೇರಿ ಪ್ರಮುಖ ರಾಜ್ಯಗಳಲ್ಲಿ ಕಬ್ಬು ಇಳುವರಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದರು.
ಮೇಲ್ಮನೆಯಲ್ಲೂ ಗದ್ದಲ
ರಾಜ್ಯಸಭೆಯಲ್ಲೂ ಮಂಗಳವಾರ ಗದ್ದಲದ ಕಾರಣ ಕಲಾಪವನ್ನು ಮುಂದೂಡಲಾಯಿತು. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ಸದಸ್ಯರ ಮಾತಿನ ಚಕಮಕಿ, ಗದ್ದಲದಿಂದಾಗಿ ಕಲಾಪ ನಡೆಸಲು ಸಾಧ್ಯವಾಗದು ಎಂದ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಹೇಳಿದರು.
ಸಂಸತ್ ಕಲಾಪಕ್ಕೆ 2ನೇ ದಿನವೂ ಅಡ್ಡಿ
ದೆಹಲಿಯಲ್ಲಿ ನಡೆದ ವ್ಯಾಪಕ ಗಲಭೆಗಳ ಬಗ್ಗೆ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ಕೋಲಾಹಲ ಉಂಟಾಗಿ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಬುಧವಾರಕ್ಕೆ ಮುಂದೂಡಲಾಯಿತು. ಬಜೆಟ್ ಅಧಿವೇಶನದ ಮುಂದುವರಿದ ಭಾಗ ಆರಂಭವಾದ ಸೋಮವಾರವೂ ಸಂಸತ್ ಕಲಾಪ ಸಿಎಎ ಗದ್ದಲಕ್ಕೆ ಆಹುತಿಯಾಗಿತ್ತು.
ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಲೇ, ತಕ್ಷಣವೇ ಚರ್ಚೆ ಆರಂಭಿಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ಬಿಜೆಪಿ ಮತ್ತು ವಿಪಕ್ಷ ಸದಸ್ಯರ ನಡುವೆ ಬಿಸಿಬಿಸಿ ವಾಗ್ವಾದ ನಡೆಯಿತು. ಹೋಳಿ ಹಬ್ಬದ ನಂತರ ಮಾರ್ಚ್ 11ರಂದು ಚರ್ಚೆ ಕೈಗೆತ್ತಿಕೊಳ್ಳಲಾಗುವುದೆಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಆದರೆ, ಕುಪಿತಗೊಂಡ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಮುಂಭಾಗ ಧಾವಿಸಿ ಪ್ರತಿಭಟಿಸತೊಡಗಿದರು.
ಸದನದಲ್ಲಿ ಗದ್ದಲ ಹೆಚ್ಚಾದ ಕಾರಣ ಸದಸ್ಯರನ್ನು ಅಮಾನತು ಮಾಡುವುದಾಗಿ ಓಂ ಬಿರ್ಲಾ ಎಚ್ಚರಿಸಿದರು. ಅದಕ್ಕೆ ಸೊಪು್ಪ ಹಾಕದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಬಿಜೆಪಿ ಸದಸ್ಯರತ್ತ ನುಗ್ಗಿದಾಗ ಕೋಲಾಹಲ ತಾರಕಕ್ಕೇರಿತು. ವಿಪಕ್ಷಗಳ ಇತರ ಸದಸ್ಯರೂ ಚೌಧರಿಗೆ ಸಾಥ್ ನೀಡಿದಾಗ ಅವರನ್ನು ತಡೆಯಲು ಬಿಜೆಪಿ ಸದಸ್ಯರು ಮುಂದಾದರು. ಇದರಿಂದ ಪರಿಸ್ಥಿತಿ ಬಿಗಡಾಯಿಸಿತು. ಸ್ಪೀಕರ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.
ವಿಪಕ್ಷ ಸದಸ್ಯರು ಸದನದಲ್ಲಿ ಘೋಷಣೆಗಳ ಫಲಕಗಳ್ನು ಪ್ರದರ್ಶಿಸಿದ್ದು ಕೂಡ ಸ್ಪೀಕರ್ ಕೋಪಕ್ಕೆ ತುತ್ತಾಯಿತು. ಎರಡು ಬಾರಿ ಮುಂದೂಡಿದ ನಂತರ ಮಧ್ಯಾಹ್ನ ಎರಡು ಗಂಟೆಗೆ ಸದನ ಮತ್ತೆ ಸೇರಿದಾಗ, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಜನರ ಕಲ್ಯಾಣದ ಬಗ್ಗೆ ಚರ್ಚೆ ನಡೆಯಬೇಕಿರುವುದರಿಂದ ವಿಪಕ್ಷ ಸದಸ್ಯರು ತಮ್ಮ ಆಸನಗಳಿಗೆ ಮರಳಬೇಕೆಂದು ಸ್ಪೀಕರ ಸೂಚಿಸಿದರು. ವಿಪಕ್ಷ ಸದಸ್ಯರು ‘ಬಿಜೆಪಿಗೆ ಧಿಕ್ಕಾರ’, ‘ಭಾರತ ಉಳಿಸಿ’ ಘೋಷಣೆಗಳನ್ನು ಕೂಗಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
