ಉತ್ತರಾಖಂಡ:ಕೊಳೆತು ದುರ್ವಾಸನೆ ಬರುತ್ತಿದ್ದ ಹೆತ್ತವರ ಶವಗಳ ನಡುವೆ 4 ದಿನಗಳ ಕಂದಮ್ಮ ಜೀವಂತವಾಗಿ ಬದುಕಿರುವ ಘಟನೆ ಡೆಹ್ರಾಡೂನ್‌ನಲ್ಲಿ ನಡೆದಿದೆ.
ಮೃತರನ್ನು 25 ವರ್ಷದ ಕಾಶಿಫ್ ಮತ್ತು ಅವರ ಪತ್ನಿ ಅನಮ್ (22) ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವಗಳು ಸುಮಾರು ಮೂರು ದಿನಗಳಿಂದ ಯಾರೂ ಗಮನಿಸದೆ ಇರುವುದರಿಂದ ಕೊಳೆತು ದುರ್ವಾಸನೆ ಬರುತ್ತಿತ್ತು.
ದಂಪತಿ ಉತ್ತರ ಪ್ರದೇಶದ ಸಹರಾನ್​ಪುರದ ನಿವಾಸಿಗಳಾಗಿದ್ದಾರೆ. ಈ ಜೋಡಿ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಒಂದು ತಿಂಗಳ ಹಿಂದಷ್ಟೇ ಡೆಹ್ರಾಡೂನ್​ಗೆ ಬಂದಿದ್ದರು. ಖಾಸಿಪ್ ಕ್ರೇನ್ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ. ಅಮನ್ ಜೂನ್ 8ರಂದು ಮಗುವಿಗೆ ಜನ್ಮ ನೀಡಿದ್ದಳು. ಅದೇನಾಯಿತೋ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಶವಗಳ ಪಕ್ಕ ಮಗು ಹಾಲಿಲ್ಲದೇ ನಿತ್ರಾಣವಾಗಿತ್ತು.
ಮಗು ಆರೋಗ್ಯವಾಗಿದೆ. ಯಾವುದೇ ತೊಂದರೆ ಇಲ್ಲ. ಪ್ರಕರಣದ ಪ್ರಾಥಮಿಕ ತನಿಖೆಯಿಂದ ಪತಿ ಸಾಲ ಮಾಡಿ ಆರ್ಥಿಕ ಹೊರೆ ಹೊಂದಿದ್ದರಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೆ ನೋಡುವ ನೆಪದಲ್ಲಿ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ; ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 1 =
Remember me
