ಉತ್ತರಾಖಂಡ:ವ್ಯಕ್ತಿಯೋರ್ವ ತನ್ನ ಕುಟುಂಬದ ಮೂವರು ಹೆಣ್ಣು ಮಕ್ಕಳು, ಪತ್ನಿ ಹಾಗೂ ತಾಯಿಯನ್ನು ಹತ್ಯೆಗೈದಿರುವ ಘಟನೆ ನಡೆದಿದೆ. ಆರೋಪಿಯನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಮಹೇಶ್ ತಿವಾರಿ​ ಎಂಬಾತನಿಗೆ ತಾಯಿ, ಪತ್ನಿ ಹಾಗು ನಾಲ್ವರು ಮಕ್ಕಳಿದ್ದಾರೆ. ಕುಟುಂಬದೊಂದಿಗೆ ರಾಣಿಪೋಖಾರಿಯ ಶಾಂತಿನಗರದಲ್ಲಿ ವಾಸವಾಗಿದ್ದಾನೆ. ಇಂದು ಬೆಳಗ್ಗೆ ಮಹೇಶ್ ತಿವಾರಿ ಮನೆಯಲ್ಲಿ ಏಕಾಏಕಿ ತಿಂಡಿ ವಿಚಾರವಾಗಿ ಜಗಳ ಮಾಡಿದ್ದಾನೆ.
ಜಗಳ ವಿಕೋಪಕ್ಕೆ ತಿರುಗಿದ್ದು, ಮಕ್ಕಳಾದ ಅನ್ನಪೂರ್ಣ(9), ಅಪರ್ಣಾ(15), ಸುವರ್ಣಾ (11), ಪತ್ನಿ ನೀತು (38) ಹಾಗೂ ತಾಯಿ ಬೀಟಲ್ ದೇವಿ (70) ಯನ್ನು ಆರೋಪಿ ಹತ್ಯೆ ಮಾಡಿದ್ದಾನೆ. ಮಕ್ಕಳೆಲ್ಲರೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದು, ಓರ್ವ ಮಗಳು ಮಾತ್ರ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ನೆರೆಹೊರೆಯವರು ಮಾಹಿತಿ ನೀಡಿರುವ ಪ್ರಕಾರ, ಬಾಲಕಿ ಕಾಪಾಡಿ ಕಾಪಾಡಿ ಎಂದು ಕಿರುಚಾಡುತ್ತಿದ್ದಳು. ಅಲ್ಲಿಗೆ ನಾವು ತೆರಳಿದಾಗ ಮನೆಯ ಬಾಗಿಲು ಹಾಕಲಾಗಿತ್ತು. ಹೀಗಾಗಿ, ಒಳಹೋಗಲು ಸಾಧ್ಯವಾಗಲಿಲ್ಲ. ಕಿಟಕಿಯಿಂದ ಇಣುಕಿ ನೋಡಿದಾಗ ಮಕ್ಕಳ ಮೇಲೆ ಚಾಕುವಿನಿಂದ ಇರಿಯುತ್ತಿರುವುದು ಕಂಡು ಬಂದಿದೆ ಎಂದಿದ್ದಾರೆ.
ತಿಂಡಿ ವಿಷಯವಾಗಿ ಜಗಳ:ಬೆಳಗ್ಗೆ ಮಕ್ಕಳೆಲ್ಲರೂ ಶಾಲೆಗೆ ಹೋಗಲು ತಯಾರಿ ನಡೆಸಿದ್ದರು. ಮಹೇಶ್​ ಹಾಗೂ ಆತನ ಪತ್ನಿ ನೀತು ಬೆಳಗಿನ ಉಪಹಾರ ವಿಷಯವಾಗಿ ಜಗಳವಾಡ್ತಿದ್ದರು. ಇದು ತಾರಕ್ಕೇರಿದಾಗ ಮೊದಲು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಬೆನ್ನಲ್ಲೇ ಹಿರಿಯ ಮಗಳು ಅಪರ್ಣಾ, ಎರಡನೇ ಮಗಳು ಸುವರ್ಣಾ ಹಾಗೂ ಅನ್ನಪೂರ್ಣಳನ್ನು ಕೊಲೆ ಮಾಡಿದ್ದಾನೆ. ಕೊನೆಯದಾಗಿ ಬಟ್ಟೆ ಮಡಚಿಡುತ್ತಿದ್ದಂತೆ ತಾಯಿ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ. ಮಹೇಶ್ ತಿವಾರಿ ಮಾನಸಿನ ಅಸ್ವಸ್ಥ ಎಂದು ಹೇಳಲಾಗ್ತಿದೆ.
ರಾಜ್ಯದಲ್ಲಿ 4 ದಿನ ಸುರಿಯಲಿದೆ ಧಾರಾಕಾರ ಮಳೆ: ನಾಳೆ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
