ನವದೆಹಲಿ:ಫೇಸ್​ಬುಕ್ ಖಾತೆ ತೊರೆಯಿರಿ, ಇಲ್ಲವೇ ಕೆಲಸ ಬಿಡಿ. ಆಯ್ಕೆ ನಿಮ್ಮದು ಎಂದು ದೆಹಲಿ ಹೈಕೋರ್ಟ್ ಬುಧವಾರ ಸೇನಾಧಿಕಾರಿ ಒಬ್ಬರಿಗೆ ಖಡಕ್ ಸೂಚನೆ ನೀಡಿದೆ.
ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂನಂಥ ಸಾಮಾಜಿಕ ಮಾಧ್ಯಮ ಜಾಲ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಿ ರಕ್ಷಣಾ ಸಚಿವಾಲಯ ಇತ್ತೀಚೆಗೆ ರೂಪಿಸಿದ್ದ ನಿಯಮವನ್ನು ಪ್ರಶ್ನಿಸಿದ್ದ ಲೆಫ್ಟಿನೆಂಟ್ ಕರ್ನಲ್ ಪಿ.ಕೆ. ಚೌಧರಿ ನ್ಯಾಯಾಲಯದ ಕೆಂಗಣ್ಣಗೆ ಗುರಿಯಾಗಿದ್ದಾರೆ. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸೇನಾ ಸಿಬ್ಬಂದಿ ಸಾಮಾಜಿಕ ತಾಣಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಹೀಗಾಗಿ ಈ ನಿಯಮವನ್ನು ಪಾಲಿಸಬೇಕು ಅಥವಾ ರಾಜೀನಾಮೆ ನಿಡಬೇಕು ಎಂದು ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಮತ್ತು ಆಶಾ ಮೆನನ್ ಇದ್ದ ಪೀಠ ಸೂಚಿಸಿದೆ. ಮತ್ತು ಜುಲೈ 21ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ.
ರಿಲಾಯನ್ಸ್​ ಪ್ರತಿಷ್ಠಾನ ಮುನ್ನಡೆಸ್ತಾರಾ ಮಗಳು ಇಶಾ ಅಂಬಾನಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
