ನವದೆಹಲಿ:ಇಲ್ಲ ನಿಮ್ಮ ಫೇಸ್​ಬುಕ್​ ಖಾತೆಯನ್ನು ಡಿಲೀಟ್​ ಮಾಡಿ. ಇಲ್ಲವೇ ಭಾರತೀಯ ಸೇನಾಪಡೆಯ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಭಾರತೀಯ ಸೇನಾಪಡೆಯ ಹಿರಿಯ ಅಧಿಕಾರಿಯೊಬ್ಬರಿಗೆ ದೆಹಲಿ ಹೈಕೋರ್ಟ್​ ತಾಕೀತು ಮಾಡಿದೆ.
ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದ ಎಲ್ಲ ಖಾತೆಗಳನ್ನು ಡಿಲೀಟ್​ ಮಾಡುವುದನ್ನು ಎಲ್ಲ ಅಧಿಕಾರಿಗಳು ಮತ್ತು ಯೋಧರಿಗೆ ಕಡ್ಡಾಯಗೊಳಿಸಿ ಭಾರತೀಯ ಸೇನಾಪಡೆ ಆದೇಶ ಹೊರಡಿಸಿದೆ. iದನ್ನು ಪ್ರಶ್ನಿಸಿ ಲೆಫ್ಟಿನೆಂಟ್​ ಕರ್ನಲ್​ ಪಿ.ಕೆ. ಚೌಧರಿ ಎಂಬುವರು ಸೇನಾಪಡೆಯ ಈ ನಿರ್ಧಾರದ ವಿರುದ್ಧ ಮಧ್ಯಂತರ ತಡೆಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ರದ್ದುಗೊಳಿಸುವುದರಿಂದ ತಾವು ಇದುವರೆಗೂ ಸಾಧಿಸಿರುವ ಸಂಪರ್ಕ ಮತ್ತು ಗಳಸಿರುವ ಗೆಳೆತನಗಳೆಲ್ಲವೂ ಕೈತಪ್ಪಿ ಹೋಗುತ್ತದೆ. ಮತ್ತೆ ಇವನ್ನು ಪಡೆದುಕೊಳ್ಳಬೇಕು ಎಂದರೆ ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಫೇಸ್​ಬುಕ್​ ಖಾತೆಯನ್ನು ಹೊಂದಿರಲು ಅವಕಾಶ ಮಾಡಿಕೊಡುವಂತೆ ಭಾರತೀಯ ಸೇನಾಪಡೆಗೆ ಸೂಚಿಸುವಂತೆ ಅರ್ಜಿಯಲ್ಲಿ ಅವರು ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ:ರಾಜ್ಯರಾಜಧಾನಿಯಲ್ಲಿ ಪೊಲೀಸರ ಜತೆ ಕೆಲಸ ಮಾಡುವಾಸೆಯೆ?- ಇಲ್ಲಿದೆ ಅವಕಾಶ!
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್​ ಸಹಾಯ್​ ಮತ್ತು ಆಶಾ ಮೆನನ್​ ಅವರಿದ್ದ ನ್ಯಾಯಪೀಠ, ರಾಷ್ಟ್ರದ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೇನೆಯ ಎಲ್ಲ ಸಿಬ್ಬಂದಿಗೂ ಅನ್ವಯವಾಗುವಂತೆ ಫೇಸ್​ಬುಕ್​ ಖಾತೆಗಳನ್ನು ರದ್ದುಗೊಳಿಸಬೇಕೆಂಬ ಕಡ್ಡಾಯ ನಿಯಮವನ್ನು ಭಾರತೀಯ ಸೇನಾಪಡೆ ಜಾರಿಗೊಳಿಸಿದೆ. ಆದ್ದರಿಂದ, ಫೇಸ್​ಬುಕ್​ ಖಾತೆಯನ್ನು ಹೊಂದಿರುವುದು ಇಲ್ಲವೇ ಸೇನಾಪಡೆಯ ಹುದ್ದೆಯಲ್ಲಿ ಮುಂದುವರಿಯವುದು, ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಲೆ.ಕ. ಪಿ.ಕೆ. ಚೌಧರಿ ಅವರಿಗೆ ಸೂಚನೆ ನೀಡಿತು.​
ಜೂನ್​ 6ರಂದು ಹೊಸ ಸಾಮಾಜಿಕ ಜಾಲತಾಣ ನೀತಿಯನ್ನು ಜಾರಿಗೊಳಿಸಿರುವ ಭಾರತೀಯ ಸೇನಾಪಡೆ, ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿ 87 ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳನ್ನು ರದ್ದುಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಅಧಿಕಾರಿಗಳು ಮತ್ತು ಯೋಧರು ಸೇರಿ ಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆ.
ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
