ನವದೆಹಲಿ :ಕರೊನಾ ಮಹಾಮಾರಿಯಿಂದ ಸಂರಕ್ಷಣೆ ಒದಗಿಸುವ ಲಸಿಕೆಗಳನ್ನು ಆದಷ್ಟು ಬೇಗ ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ದೇಶಾದ್ಯಂತ ನಡೆಯುತ್ತಿದೆ. ಈ ಅಭಿಯಾನಕ್ಕೆ ಬೆಂಬಲ ಒದಗಿಸಲು ದೆಹಲಿಯ ವಸಂತ ವಿಹಾರದ ಆಮ್​ ಆದ್ಮಿ ಪಾರ್ಟಿಯ ಕಾರ್ಯಕರ್ತ ಅಭಿಷೇಕ್​ ಜೈನ್​ ಹೊಸ ಉಪಾಯ ಹುಡುಕಿದ್ದಾರೆ. ಹಲವಾರು ಜನವಸತಿ ಶಿಬಿರಗಳ ಬಡಜನರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಹೋಗಿಬರುವ ಅನುಕೂಲಕ್ಕಾಗಿ ಅವರು ಬಸ್​ ಸೇವೆ ಒದಗಿಸುತ್ತಿದ್ದಾರೆ.
ಈಗಾಗಲೇ 500 ಜನರು ಈ ಬಸ್​ನ ಉಚಿತ ಪಿಕ್​ಅಪ್​ ಮತ್ತು ಡ್ರಾಪ್​ ಸೇವೆಯ ಪ್ರಯೋಜನ ಪಡೆದಿದ್ದು, ಬಡ ನಿವಾಸಿಗಳು ಈ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ. ವಸಂತ ವಿಹಾರದ ಕೂಲಿ ಕ್ಯಾಂಪ್​, ಶಿವ ಕ್ಯಾಂಪ್, ಸೇವಾ ಕ್ಯಾಂಪ್, ಶ್ರೀ ರಾಮ್​ ಜೆಜೆ ಶಾಸ್ತ್ರಿ ಮಾರ್ಕೆಟ್ ಕ್ಯಾಂಪ್, ನೇಪಾಳಿ ಕ್ಯಾಂಪ್, ವಸಂತ್ ಗಾವ್ ಮುಂತಾದೆಡೆಯಿಂದ ಜನರನ್ನು ಈ ಬಸ್​ ಲಸಿಕಾ ಕೇಂದ್ರಕ್ಕೆ ಒಯ್ಯುತ್ತಾ ಇದೆ ಎನ್ನಲಾಗಿದೆ.(ಏಜೆನ್ಸೀಸ್)
ಜುಲೈನಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಬಾಕಿ ಪಾವತಿ

ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್​ಐ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
