ನವದೆಹಲಿ:ಇಂದು ಪ್ರೇಮಿಗಳ ದಿನ. ಜಗತ್ತಿನಾದ್ಯಂತ ಪ್ರೇಮಿಗಳು ಒಬ್ಬರಿಗೊಬ್ಬರು ಶುಭ ಹಾರೈಸಿಕೊಂಡು, ಉಡುಗೊರೆಗಳನ್ನು ಕೊಟ್ಟುಕೊಂಡು ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸುದಿನದಂದು ನಾಲ್ಕೈದು ಪ್ರೇಮಿಗಳನ್ನು ಹೊಂದಿರುವ ದೆಹಲಿ ವಿಮಾನ ನಿಲ್ದಾಣವು ತನ್ನ ಟ್ವಿಟ್ಟರ್​ ಖಾತೆಯಲ್ಲಿ ತನ್ನೆಲ್ಲ ಪ್ರೇಮಿಗಳಿಗೆ ವಿಶೇಷವಾಗಿ ಶುಭ ಹಾರೈಸಿದೆ.
ಟ್ವಿಟ್ಟರ್​ನಲ್ಲಿ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿದ ದೆಹಲಿ ಏರ್​ಪೋರ್ಟ್​ ತನ್ನ ಪ್ರೇಮಿಗಳಾದ ಸ್ಪೈಸ್​ ಜೆಟ್​, ಇಂಡಿಗೋ, ಏರ್​ ಇಂಡಿಯಾ ಮತ್ತು ವಿಸ್ತಾರ ಏರ್​ಲೈನ್​ ಸಂಸ್ಥೆಗಳಿಗೆ ಶುಭ ಹಾರೈಸಿದೆ. ನನ್ನ ಜತೆ ಎಂದಿಗೂ ಹೀಗೇ ಇರುವೆಯಾ? ನನ್ನೊಂದಿಗೆ ಹಾರಾಟ ಮುಂದುವರಿಸುವೆಯಾ ಎನ್ನುವಂತಹ ಪ್ರಶ್ನೆಗಳನ್ನು ಏರ್​ಲೈನ್​ಗಳಿಗೆ ಕೇಳಿದೆ.
ಇಂಡಿಗೋ ಏರ್​ಇಂಡಿಯಾಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿರುವ ದೆಹಲಿ ಏರ್​ಪೋರ್ಟ್​, “ನೀನು ಎಂದೆಂದಿಗೂ ನನ್ನ ಮೊದಲ ಪ್ರೀತಿ. ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಏರ್​ಇಂಡಿಯಾ, “ನಿನ್ನಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವುದಕ್ಕೆ ಹೆಮ್ಮೆಯೆನಿಸುತ್ತದೆ” ಎಂದು ಮರುಟ್ವೀಟ್​ ಮಾಡಿದೆ.
ಇಂಡಿಗೋಗೆ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಿರುವ ದೆಹಲಿ ಏರ್​ಪೋರ್ಟ್​, “ನೀನು ನನ್ನ ರನ್​ವೇ ಬಿಟ್ಟು ಎಂದೂ ಓಡಿ ಹೋಗುವುದಿಲ್ಲ ಎಂದು ಪ್ರಮಾಣ ಮಾಡು” ಎಂದು ಕೇಳಿಕೊಂಡಿದೆ.
“ಪ್ರೇಮಿಗಳ ದಿನದ ಶುಭಾಷಯಗಳು. ನಮ್ಮ ಜತೆ ಇನ್ನೂ ಎತ್ತರಕ್ಕೆ ಹಾರುತ್ತೀಯಲ್ಲವೇ?” ಎಂದು ದೆಹಲಿ ಏರ್​ಪೋರ್ಟ್​ ವಿಸ್ತಾರ್​ ಏರ್​ಲೈನ್​ನನ್ನು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಏರ್​ಲೈನ್​, “ನನ್ನೆಲ್ಲ ವಿಮಾನಗಳು ನಿನಗೆ ಧನ್ಯವಾದ ಹೇಳುತ್ತವೆ” ಎಂದು ಟ್ವೀಟ್​ ಮಾಡಿದೆ. ಇಲ್ಲಿಗೆ ಈ ಪ್ರೇಮ ಸಂಭಾಷಣೆ ಮುಗಿಯದೆ, ದೆಹಲಿ ಏರ್​ಪೋರ್ಟ್​ “ಧನ್ಯವಾದಗಳು ಏಕೆ? ನಾವು ನಿನ್ನೊಂದಿಗೆ ಹೊಸ ಭಾವನೆಯನ್ನು ಹೊಂದುತ್ತಿದ್ದೇವೆ. ಈ ಭಾವನೆ ಎಂದಿಗೂ ಹಳೆಯದಾಗುವುದಿಲ್ಲ. ನಮ್ಮ ಜತೆ ಹಾರಿ ಬರುವೆಯಲ್ಲವೇ?” ಎಂದು ಕೇಳಿದೆ. ದೆಹಲಿ ಏರ್​ಪೋರ್ಟ್​ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿರುವ ವಿಸ್ತಾರ ಏರ್​ಲೈನ್​, ಇದೊಂದು ಪ್ಲ್ಯಾನ್​ ರೂಪದಲ್ಲಿ ಕಾಣುತ್ತಿದೆ. ನಾನು ನೇರಳೆ ಬಣ್ಣದ ಬಟ್ಟೆ ಧರಿಸಿ ಬರುವೆ ಎಂದು ತಿಳಿಸಿದೆ.
ಕೊನೆಯಲ್ಲಿ ಸ್ಪೈಸ್​ ಜೆಟ್​ ಏರ್​ಲೈನ್​ನೊಂದಿಗೆ ಪ್ರೀತಿ ಹಂಚಿಕೊಂಡಿರುವ ಏರ್​ಪೋರ್ಟ್​, “ನೀನು ನನ್ನನ್ನು ಕೆಂಪಗಾಗಿಸಿದ ಬಗೆ ನನಗೆ ಇಷ್ಟವಾಯಿತು. ಹಾಟ್​ ಎಂಡ್​ ಸ್ಪೈಸಿ!” ಎಂದು ಟ್ವೀಟ್​ ಮಾಡಿದೆ.
ಏರ್​ಲೈನ್​ಗಳ ಜತೆಯಲ್ಲಿ ವಿಮಾನ ನಿಲ್ದಾಣದಲ್ಲಿರುವ ಅಂಗಡಿಯಾದ ದೆಹಲಿ ಡ್ಯೂಟಿ ಫ್ರೀನೊಂದಿಗೂ ಸಹ ದೆಹಲಿ ಏರ್​ಪೋರ್ಟ್​ ತನ್ನ ಪ್ರೀತಿಯನ್ನು ಹಂಚಿಕೊಂಡಿದೆ.(ಏಜೆನ್ಸೀಸ್​)
.@DelhiDutyFreeLove the way how everyone mingles with you so well, while they shop smiles and collect happiness.#DELlovesYou#ValentinesDay2020
— Delhi Airport (@DelhiAirport)February 14, 2020

Hey@flyspicejet, love how you turn my hub red, hot and spicy!#DELlovesYou#ValentinesDay2020
— Delhi Airport (@DelhiAirport)February 14, 2020

Hey@airvistara, its valentines day, want to continue flying higher with us?#DELlovesYou#ValentinesDay2020
— Delhi Airport (@DelhiAirport)February 14, 2020

Hey@airindiain, you’ll always be my love at first flight!#DELlovesYou#ValentinesDay2020
— Delhi Airport (@DelhiAirport)February 14, 2020

Hey@IndiGo6E, promise me you’ll never run away from my runway!#DELlovesYou#ValentinesDay2020
— Delhi Airport (@DelhiAirport)February 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
