ನವದೆಹಲಿ: ಕರೊನಾ ವೈರಸ್ ಭಾರತದಲ್ಲಿ ಗಂಭೀರ ಸ್ವರೂಪ ತಾಳುತ್ತಿದೆ. ಸದ್ಯಕ್ಕೆ ಯಾವ ಲಸಿಕೆ, ಔಷಧಿಗಳೂ ಇಲ್ಲದ ಕಾರಣ ಸಾಮಾಜಿಕ ಅಂತರವೊಂದೇ ನಮ್ಮ ಎದುರು ಇರುವ ನಿಯಂತ್ರಣಾ ಮಾರ್ಗ.
ಇಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲ ಮಾರ್ಗದ ಪ್ರಯಾಣಗಳೂ ಬಂದ್ ಆಗಿವೆ. ಅನಿವಾರ್ಯ ಇದ್ದ ಹೊರತು ಜನರು ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಇಂದಿನಿಂದ ಅಂತಾರಾಷ್ಟ್ರೀಯ ವಿಮಾನಗಳು ಭಾರತವನ್ನು ಪ್ರವೇಶಿಸುವಂತಿಲ್ಲ. ಹಾಗೇ ದೇಶೀಯ ವಿಮಾನಗಳ ಸಂಚಾರ ಸಮಯಗಳಲ್ಲೂ ಏರುಪೇರಾಗುತ್ತಿದೆ.
ಹೀಗಿರವಾಗ ಬೇರೆಬೇರೆ ದೇಶಗಳಿಂದ, ದೇಶದೊಳಗಿನ ಸ್ಥಳಗಳಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ತಾವು ಹೋಗಬೇಕಾದ ಕಡೆಗೆ ತೆರಳಲು ವಿಮಾನ ಇಲ್ಲದೆ ಕಾಯುತ್ತ ಕುಳಿತಿದ್ದ ಪ್ರಯಾಣಿಕರಿಗೆ ದೆಹಲಿ ಏರ್​​ಪೋರ್ಟ್​ ಸಿಬ್ಬಂದಿ ಆಹಾರ ಮತ್ತು ಮಾಸ್ಕ್​ಗಳನ್ನು ನೀಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಆಹಾರ, ಮಾಸ್ಕ್ ಸೇರಿ ಇನ್ನುಳಿದಂತೆ ಅಗತ್ಯ ಇರುವ ಎಲ್ಲ ವಸ್ತುಗಳನ್ನೂ ವಿಮಾನ ನಿಲ್ದಾಣದ ಸಿಬ್ಬಂದಿ ಒದಗಿಸಿದ್ದಾರೆ. ಏರ್ಪೋರ್ಟ್ ಸಿಬ್ಬಂದಿಯ ಈ ಸಹಾಯಕ್ಕೆ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಪ್ರಯಾಣಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿರುವ ಫೋಟೋಗಳನ್ನು ಹಾಗೂ ಅದಕ್ಕೆ ಪ್ರತಿಯಾಗಿ ಪ್ರಯಾಣಿಕರು ಸಂತೋಷದಿಂದ ಚಪ್ಪಾಳೆ ತಟ್ಟುವ ವಿಡಿಯೋವನ್ನು ದೆಹಲಿ ಏರ್ಪೋರ್ಟ್ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. ಹಾಗೇ ನಾವು ಪ್ರಯಾಣಿಕರು ಆರಾಮವಾಗಿ ಇರಲು ಎಲ್ಲ ರೀತಿಯ ಸಹಕಾರವನ್ನೂ ನೀಡುತ್ತೇವೆ ಎಂದು ಹೇಳಿದ್ದಾರೆ.
ಏರ್​ಪೋರ್ಟ್​ ಸಿಬ್ಬಂದಿ ಯಾಂತ್ರಿಕವಾಗಿ ಕೆಲಸ ಮಾಡದೆ, ಹೀಗೆ ವೈಯಕ್ತಿಕವಾಗಿ ಪ್ರಯಾಣಿಕರಿಗೆ ಸ್ಪಂದಿಸುತ್ತಿರುವುದು ತುಂಬ ಖುಷಿಯ ಸಂಗತಿ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಕರೊನಾ ಭೀತಿಯಿದ್ದರೂ ನಗುಮೊಗದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳುತ್ತಿದ್ದಾರೆ.(ಏಜೆನ್ಸೀಸ್​)
In these testing times, your appreciation is what keeps us going. We continue to try our best to assist passengers and extend all possible support.#JantaCurfew#CoronaUpdatesInIndia#Covid19India#IndiaFightCorona@narendramodi@PMOIndia@MoHFW_INDIA@MoCA_GoI@HardeepSPuripic.twitter.com/HVoeWjZQNu
— Delhi Airport (@DelhiAirport)March 22, 2020

#DelhiAirportstaff providing food & masks to the passengers at T3 arrivals.#JantaCurfew#CoronaUpdatesInIndia#Covid19India#IndiaFightCorona@narendramodi@PMOIndia@MoHFW_INDIA@MoCA_GoI@HardeepSPuripic.twitter.com/W9gDKCpLL2
— Delhi Airport (@DelhiAirport)March 22, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
