ನವದೆಹಲಿ: ದೆಹಲಿ, ಅಲಿಗಢ, ಸಿಎಎ ಹಿಂಸಾಚಾರಗಳಿಗೆ ಪರಸ್ಪರ ಸಂಬಂಧವಿದೆ. ಪಾಪ್ಯುಲರ್​ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಭೀಮ್ ಆರ್ಮಿ ಸಂಘಟನೆಗಳ ಕೈವಾಡ ಇದರಲ್ಲಿ ಇದೆ ಎಂದು ಶಂಕಿಸಲಾಗಿದೆ. ಇದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು ಗುಪ್ತಚರ ಸಂಸ್ಥೆ ಕಲೆಹಾಕಿದ್ದು, ಸರ್ಕಾರದ ಜತೆಗೆ ಹಂಚಿಕೊಂಡಿದೆ.
ಪಿಎಫ್​ಐಗೆ ಅನೇಕ ಇಸ್ಲಾಮಿಕ್ ತೀವ್ರವಾದಿ ಸಂಘಟನೆಗಳ ಜತೆಗೆ ಸಂಬಂಧಿವಿದೆ. ಅದೇ ರೀತಿ ಭೀಮ್ ಆರ್ಮಿ ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಅಂಬೇಡ್ಕರ್ ವಾದದ ಸಂಘಟನೆ. ಕಳೆದ ಎರಡು ದಿನಗಳಿಂದ ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲೂ ಇದೇ ಸಂಘಟನೆಗಳ ಕೈವಾಡವನ್ನು ಗುಪ್ತಚರ ಸಂಸ್ಥೆ ಅಧಿಕಾರಿಗಳು ಶಂಕಿಸಿದ್ದಾರೆ.
ಉತ್ತರ ಪ್ರದೇಶದ ಗುಪ್ತಚರ ದಳ ವಿಭಾಗದ ಮಾಹಿತಿ ಪ್ರಕಾರ, ಅಲಿಗಢದಲ್ಲಿನಲ್ಲಿ ಹಿಂಸಾಚಾರಕ್ಕೂ ಈಗ ಎರಡು ದಿನಗಳಿಂದ ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ ಸಂಬಂಧವಿದೆ. ಕೆಲವು ಪ್ರಮುಖ ಮೊಬೈಲ್ ನಂಬರ್​ಗಳ ಕಾಲ್​ ಡಿಟೇಲ್​ ರೆಕಾರ್ಡ್ಸ್​ ಪರಿಶೀಲಿಸಿದಾಗ ಈ ಅಂಶ ಬಹಿರಂಗವಾಗಿದೆ.ಅಲಿಗಢದ ಅಂಬೇಡ್ಕರ್ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದ ಭೀಮ್ ಆರ್ಮಿ ಸದಸ್ಯರು ಭಾನುವಾರ ಸಿಟಿ ಮ್ಯಾಜಿಸ್ಟ್ರೇಟ್ ಅವರಿಗೆ ಮೆಮೋರಂಡಂ ಸಲ್ಲಿಸುವಾಗ ಅಲ್ಲಿ ಪಿಎಫ್​ಐ ಪದಾಧಿಕಾರಿಗಳನ್ನು ಭೇಟಿ ಆಗಿದ್ದಾರೆ. ಇದೇ ವೇಳೆ, ಅಲಿಗಢ ಮುಸ್ಲಿಂ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಗುಂಪೊಂದು ಭೀಮ್ ಆರ್ಮಿ ಮತ್ತು ಪಿಎಫ್​ಐ ನೇತಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇದಾದ ಬಳಿಕ ಭೀಮ್ ಆರ್ಮಿ ನೇತೃತ್ವದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಹೃದಯ ಭಾಗಕ್ಕೆ ತಲುಪಿದಾಗ ಅಲ್ಲಿದ್ದ ಪೋಸ್ಟರ್​ಗಳನ್ನು ಕಿತ್ತು ಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದ್ದು, ಕೂಡಲೇ ಗುಂಪು ಕಲ್ಲು ತೂರಾಟ ಆರಂಭಿಸಿತು. ಇದಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತು ಎಂದು ಅಲಿಗಢ ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿ ಮತ್ತು ಅಲಿಗಢದ ಪ್ರತಿಭಟನೆ ಮತ್ತು ಹಿಂಸಾಚಾರದ ಸ್ವರೂಪಗಳನ್ನು, ಮಾದರಿಯನ್ನು ಗಮನಿಸಿದಾಗ ಏಕರೂಪತೆ ಕಂಡುಬರುತ್ತದೆ. ಎರಡೂ ಕಡೆ ಹಿಂಸಾಚಾರ ಆರಂಭವಾಗಿದ್ದು ಕಲ್ಲು ತೂರಾಟದ ಮೂಲಕ, ಗಲಭೆ, ದೊಂಬಿ, ಅಂಗಡಿ ಮುಂಗಟ್ಟು ದೋಚಿದ್ದು ಎಲ್ಲದರಲ್ಲೂ ಸಾಮ್ಯತೆ ಇದೆ ಎಂಬ ಅಂಶದತ್ತ ಗುಪ್ತಚರ ವಿಭಾಗದ ವರದಿ ಬೊಟ್ಟುಮಾಡಿದೆ.
ದೆಹಲಿಯ ಶಾಹೀನ್ ಬಾಘ್ ಪ್ರತಿಭಟನೆ ಹಿಂದೆಯೂ ಪಿಎಫ್​ಐ ಕೈವಾಡ ಇದೆ. ಅಲ್ಲಿಯೇ ಪಿಎಫ್​ಐನ ಕೇಂದ್ರ ಕಚೇರಿಯೂ ಇದೆ. ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಯ ಕಿಚ್ಚು ಹಚ್ಚಿದ್ದರಲ್ಲಿ ಅದರ ಕೈವಾಡವೇ ಪ್ರಮುಖವಾದುದು. ಪಿಎಫ್​ಐ ಮತ್ತು ಭೀಮ್ ಆರ್ಮಿ ನಡುವಿನ ಸಂಬಂಧವನ್ನೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಶಾಹೀನ್ ಬಾಘ್ ಪ್ರತಿಭಟನೆಯ ರೂಪುರೇಷೆ ರೂಪಿಸಿದ್ದು ಪಿಎಫ್​ಐನ ದೆಹಲಿ ಅಧ್ಯಕ್ಷ ಮೊಹಮ್ಮದ್ ಪರ್ವೇಜ್ ಅಹ್ಮದ್​. ಭೀಮ್ ಆರ್ಮಿಯ ಅನೇಕ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಪರ್ವೇಜ್ ಇರುವುದೂ ಈಗ ಗುಟ್ಟಾಗಿ ಉಳಿದಿಲ್ಲ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
