ಬೆಂಗಳೂರು:ದೆಹಲಿಯ ವೈದ್ಯರೊಬ್ಬರು ಪತ್ನಿಗೆ ತಲಾಖ್ ಹೇಳಿ ಲಂಡನ್​ಗೆ ಹೊರಡಲು ಮುಂದಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿದ್ದಾರೆ. ಆರೋಪಿ ವೈದ್ಯರನ್ನು ದೆಹಲಿ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
40 ವರ್ಷದ ಈ ವೈದ್ಯರು ತನ್ನ 36 ವರ್ಷದ ಪತ್ನಿಗೆ ಅ.13ರಂದು ಮೂರು ಸಲ ತಲಾಖ್​ ಹೇಳುವ ಮೂಲಕ ಕಾನೂನುಬಾಹಿರವಾಗಿ ವಿಚ್ಛೇದನ ನೀಡಿದ್ದರು. ಈ ಕುರಿತು ಪತ್ನಿ ಫೆ. 1ರಂದು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದರಿಂದ ವಿಷಯ ಬಹಿರಂಗಗೊಂಡಿದೆ.
ತಾನು ಈತನನ್ನು 2018ರಲ್ಲಿ ಭೇಟಿಯಾಗಿದ್ದು, ನಾವು 2020ರಲ್ಲಿ ಮದುವೆ ಆದೆವು. ತಾನು ವೈದ್ಯನಾಗಿದ್ದು, ವಿದೇಶದ ವೈದ್ಯಕೀಯ ಪರೀಕ್ಷೆಗೆ ತಯಾರಾಗುತ್ತಿರುವುದಾಗಿಯೂ ಹೇಳಿದ್ದ. ಮದುವೆಯಾದ ಕೆಲವು ತಿಂಗಳ ಬಳಿಕ ಅಧ್ಯಯನದ ಸಲುವಾಗಿ ದೆಹಲಿಯ ಇನ್ನೊಂದು ಪ್ರದೇಶದಲ್ಲಿ ಮನೆ ಮಾಡಿದ್ದ. ಆದರೆ ಕಳೆದ ಅ. 13ರಂದು ಈತ ಅಲ್ಲಿ ವೈದ್ಯೆಯೊಬ್ಬಳ ಜತೆ ವಾಸಿಸುತ್ತಿರುವುದು ನನಗೆ ಗೊತ್ತಾಯಿತು. ಆಕೆಯ ಬಗ್ಗೆ ಕೇಳಿದಾಗೆಲ್ಲ ನನಗೆ ಹೊಡೆದು ಹಿಂಸಿಸುತ್ತಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.
ಮುಸ್ಲಿಮರಲ್ಲಿ ಇರುವ ತ್ರಿಪಲ್ ತಲಾಖ್ ಪದ್ಧತಿ ಕಾನೂನು ಬಾಹಿರ ಎಂಬ ಕಾನೂನನ್ನು 2019ರಲ್ಲಿ ತರಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಜಾಡು ಪತ್ತೆ ಹಚ್ಚಿ ಫೆ. 9ರಂದು ಬೆಂಗಳೂರು ವಿಮಾನನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eighteen =
Remember me
