ನವದೆಹಲಿ:ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಉದ್ಯಮಿಯೊಬ್ಬರಿಂದ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ ಆರೋಪದಲ್ಲಿ ದೆಹಲಿ ಮೂಲದ ಮಹಿಳಾ ಯೂಟ್ಯೂಬರ್​ನನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.
ನಮ್ರಾ ಖಾದಿರ್​ (22) ಬಂಧಿತ ಆರೋಪಿ. 21 ಉದ್ಯಮಿ ದಿನೇಶ್​ ಯಾದವ್​​ ಎಂಬುವರನ್ನು ಹನಿಟ್ರ್ಯಾಪ್​ ಮಾಡಿ, ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದಳು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಹಾಜರುಪಡಿಸಿ, ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಖಾದಿರ್​, ಪತಿ ಮನೀಶ್​ ಅಲಿಯಾಸ್​ ವಿರಾಟ್​ ಬೆನಿವಾಲ್​ ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.
ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಹಣ ಸೇರಿದಂತೆ ಇತರೆ ವಸ್ತುಗಳನ್ನು ಆಕೆಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಆಕೆಯ ಪತಿಯನ್ನು ಬಂಧಿಸುವುದಾಗಿ ಸೆಕ್ಟರ್​ 50 ಪೊಲೀಸ್​ ಠಾಣೆಯ ಎಸ್​ಎಚ್​ಒ ರಾಜೇಶ್​ ಕುಮಾರ್​ ತಿಳಿಸಿದ್ದಾರೆ.
ಬಾದ್ಶಪುರ್​ ನಿವಾಸಿಯಾಗಿರುವ ಸಂತ್ರಸ್ತ ಉದ್ಯಮಿ ಯಾದವ್​ ಕಳೆದ ಆಗಸ್ಟ್​ ತಿಂಗಳಲ್ಲೇ ದೂರು ನೀಡಿದ್ದರು. ಆದರೆ, ಆರೋಪಿ ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಜಾಮೀನು ಅರ್ಜಿ ರದ್ದಗೊಂಡ ಬಳಿಕ ನವೆಂಬರ್​ 26ರಂದು ಸೆಕ್ಟರ್​ 50 ಠಾಣಾ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು.
ಖಾಸಗಿ ಜಾಹಿರಾತು ಸಂಸ್ಥೆ ನಡೆಸುವ ಯಾದವ್​ ಅವರು ನೀಡಿರುವ ದೂರಿನ ಪ್ರಕಾರ ಕೆಲವು ತಿಂಗಳುಗಳ ಹಿಂದೆ ಖಾದಿರ್​ ಮತ್ತು ಆಕೆಯ ಪತಿ ಮನೀಶ್​ ಪರಿಚಯವಾಯಿತಂತೆ. ಕಂಪನಿಯ ಜಾಹಿರಾತಿಗಾಗಿ ಖಾದಿರ್​ಗೆ ಯಾದವ್​ 2 ಲಕ್ಷ ರೂ. ಹಣ ನೀಡಿದ್ದರಂತೆ. ಇದಾದ ಬಳಿಕ ತನ್ನನ್ನು ಇಷ್ಟಪಡುತ್ತಿರುವುದಾಗಿ ಮತ್ತು ಮದುವೆ ಆಗಲು ಬಯಸಿರುವುದಾಗಿ ಖಾದಿರ್​, ಯಾದವ್​ ಬಳಿ ಹೇಳಿಕೊಂಡಳಂತೆ.
ಆಗಸ್ಟ್​ನಲ್ಲಿ ಖಾದಿರ್​ ಮತ್ತು ಮನೀಶ್​ ಜೊತೆ ಕ್ಲಬ್​ ಒಂದಕ್ಕೆ ತೆರಳಿದೆ. ಅಲ್ಲದೆ, ಒಂದು ರಾತ್ರಿಗೆ ರೂಮ್​ ಬುಕ್​ ಮಾಡಿದೆವು. ಆದರೆ, ಮಾರನೇ ದಿನ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿದಳು. ಬಳಿಕ ನನ್ನಿಂದ 80 ಲಕ್ಷ ರೂ. ಹಣ ಮತ್ತು ಇತರೆ ಉಡುಗೊರೆಗಳನ್ನು ಪಡೆದಳು. ಬಳಿಕ ಎಲ್ಲವನ್ನು ನನ್ನ ತಂದೆಯ ಬಳಿ ಹೇಳಿಕೊಂಡಾಗ ಅವರು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಯಾದವ್​ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾನೆ.(ಏಜೆನ್ಸೀಸ್​)
ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್​ ರವಿ ಉಕ್ಕುಂದ, ಪತ್ನಿ ದುರ್ಮರಣ

ಡ್ರಗ್ಸ್​ ವಿರುದ್ಧ ಹೋರಾಡ್ತಿದ್ದ ಯುವ ನಾಯಕನ ಕರಾಳ ಮುಖ ಬಯಲು: ಮೊಬೈಲ್​ನಲ್ಲಿತ್ತು 30 ಮಹಿಳೆಯರ ವಿಡಿಯೋ!

ಹೋದ ಸಂದರ್ಶನದಲ್ಲಿ ಏಟು ತಿಂದಿದ್ದ ಕೆನ್ನೆಗೆ ಈ ಬಾರಿ ಸಿಹಿ ಮುತ್ತು! ಆಶು ರೆಡ್ಡಿ ಪಾದಕ್ಕೆ ಆರ್​ಜಿವಿ ಕಿಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + 16 =
Remember me
