ನವದೆಹಲಿ:ಬರ್ತಡೇ ಪಾರ್ಟಿ ವಿಚಾರವಾಗಿ ನಡೆದ ಗಲಾಟೆಯಲ್ಲಿ 25 ವರ್ಷದ ಯುವಕನೊಬ್ಬ ತನ್ನ ನೆರೆಹೊರೆಯವರಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ದೆಹಲಿಯ ಮಂಗೊಲ್ಪುರಿಯಲ್ಲಿ ನಡೆದಿದೆ. ಮೃತ ಯುವಕನನ್ನು ರಿಂಕು ಶರ್ಮಾ ಎಂದು ಗುರುತಿಸಲಾಗಿದೆ.
ರಿಂಕು ಶರ್ಮಾ ಬಿಜೆಪಿ ಕಾರ್ಯಕರ್ತ ಎಂದು ತಿಳಿದುಬಂದಿದೆ. ಬಿಜೆಪಿ ಯುವ ಮೊರ್ಚಾ ಮತ್ತು ವಿಶ್ವ ಹಿಂದು ಪರಿಷದ್​ (ವಿಎಚ್​ಪಿ)ಯಲ್ಲಿ ಸಕ್ರಿಯನಾಗಿದ್ದ. ಚಾಕು ಇರಿತಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಸಂಬಂಧ ಮಂಗೊಲ್ಪುರಿ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನಾಸರುದ್ದೀನ್​, ಇಸ್ಲಾಂ, ಜಾಹಿದ್​ ಮತ್ತು ಮೆಹ್ತಾಬ್​ ಎಂದು ಗುರುತಿಸಲಾಗಿದ್ದು, ಎಲ್ಲರನ್ನು ಬಂಧಿಸಿರುವುದಾಗಿ ಹೆಚ್ಚುವರಿ ಡಿಸಿಪಿ ಎಸ್.​ ಧರ್ಮಾ ತಿಳಿಸಿದ್ದಾರೆ.
ಇದೀಗ ರಿಂಕು ಶರ್ಮಾ ಸಾವು ಕೋಮು ಬಣ್ಣಕ್ಕೆ ತಿರುಗಿದೆ. ಧಾರ್ಮಿಕ ವಿಚಾರವಾಗಿ ಕೆಲವು ದಿನಗಳಿಂದ ನೆರೆಯ ನಾಸರುದ್ದೀನ್​ ಮತ್ತು ರಿಂಕು ನಡುವೆ ವಾಗ್ವಾದ ನಡೆದಿತ್ತು ಎಂದು ಮೃತನ ತಾಯಿ ತಿಳಿಸಿದ್ದಾರೆ. ಬುಧವಾರ ರಾತ್ರಿ ನಾಸರುದ್ದೀನ್​ ಮತ್ತು ಇತರೆ ಮೂವರು ದಾರಿಯಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ ರಿಂಕುಗೆ ಚಾಕುವಿನಿಂದ ಇರಿದರು ಎಂದು ತಾಯಿ ಆರೋಪಿಸಿದ್ದಾರೆ.
ಇದನ್ನೂ ಓದಿರಿ:Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ
ಆದರೆ, ಪೊಲೀಸರು ಹೇಳುವ ಪ್ರಕಾರ ವಾಗ್ವಾದ ನಡೆದಿರುವುದು ಫುಡ್​ ಬಿಸಿನೆಸ್​ ವಿಚಾರವಾಗಿ ಎಂದಿದ್ದಾರೆ. ಆದರೆ, ರಾಮಮಂದಿರ ದೇಣಿಗೆ ಸಂಗ್ರಹ ಕಾರ್ಯ ನಡೆಸುತ್ತಿರುವ ವಿಎಚ್​ಪಿ ಹೇಳುವ ಪ್ರಕಾರ ದೇಣಿಗೆ ವಿಚಾರವಾಗಿ ರಿಂಕುನನ್ನು ಕೊಲ್ಲಲಾಗಿದೆ ಎಂದು ಹೇಳಿದೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ.
ಇದೀಗ ಪ್ರಕರಣ ಕೋಮು ತಿರುವು ಪಡೆದುಕೊಂಡಿದ್ದು, ಮಂಗೊಲ್ಪುರಿ ಪೊಲೀಸ್​ ಠಾಣೆಯ ಮುಂದೆ ಭಾರಿ ಜನಸಮೂಹ ಸೇರಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.(ಏಜೆನ್ಸೀಸ್​)
ರಾಮ ಮಂದಿರದ ಹೆಸರಲ್ಲಿ ವಂಚಿಸುತ್ತಿದ್ದ ದುಷ್ಕರ್ಮಿಗಳ ಬಂಧನ

ರಾಜ್ಯಸಭಾ ಪ್ರತಿಪಕ್ಷ ನಾಯಕನ ಸ್ಥಾನ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ

ಹಿಟ್​ ಆ್ಯಂಡ್​​ ರನ್​ ಕೇಸ್​: ಕಾರು ಮಾಹಿತಿ ಬೆನ್ನತ್ತಿದ್ದ ಬೆಂಗ್ಳೂರ್​ ಪೊಲೀಸ್ರಿಗೆ ಸಿಕ್ಕಿದ್ದು ಶಿಲ್ಪಾ ಶೆಟ್ಟಿ ದಂಪತಿ ಪರಿಚಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
