ನವದೆಹಲಿ:ತನ್ನ ಮೇಲೆ ಪ್ರತಿನಿತ್ಯ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಿಕ್ಷಕನನ್ನು ಅಪ್ರಾಪ್ತ ವಯಸ್ಕನೋರ್ವ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಜಾಮಿಯಾನಗರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು 14 ವರ್ಷದ ಬಾಲಕನನ್ನು ಬಂಧಿಸಿದ್ದಾರೆ.
ಜಾಮಿಯಾ ನಗರದಲ್ಲಿ ಟುಟೋರಿಯಲ್ಸ್​​ ನಡೆಸುತ್ತಿದ್ದ ವಸೀಂ(28) ಕೊಲೆಯಾದವರು ಎಂದು ತಿಳಿದು ಬಂದಿದೆ. ಇದಲ್ಲದೇ ವಸೀಂ ವಿಡಿಯೋವನ್ನು ಚಿತ್ರೀಕರಿಸಿ ವೈರಲ್​ ಮಾಡುವುದಾಗಿ ಬಾಲಕನಿಗೆ ಬೆದರಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸೌತ್​ ಡಿಸಿಪಿ ರಾಜೇಶ್​ ಡಿಯೋ ಆಗಸ್ಟ್​ 30ರಂದು ಮಧ್ಯಾಹ್ನ 2:15ರ ಸುಮಾರಿಗೆ ಕಂಟ್ರೋಲ್​ ರೂಂಗೆ ವ್ಯಕ್ತಿಯೊಬ್ಬರ ಕೊಲೆಯಾಗಿರುವ ಬಗ್ಗೆ ಕರೆ ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಸಹೋದರಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ ದುರುಳರು; ಬಿಜೆಪಿ ನಾಯಕನ ಪುತ್ರ ಸೇರಿದಂತೆ 10 ಮಂದಿ ಅರೆಸ್ಟ್​
ಪ್ರಾಥಮಿಕ ತನಿಖೆ ವೇಳೆ ಆತ ಸಲಿಂಗಕಾಮಿ ಎಂಬ ವಿಚಾರ ಬೆಳಕಿಗೆ ಬಂದಿತ್ತು. ತನ್ನ ಟುಟೋರಿಯಲ್ಸ್​​ಗೆ ಬರುತ್ತಿದ್ದ ಬಾಲಕನ ಮೇಲೆ ವಸೀಂ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿ ಕೃತ್ಯವನ್ನು ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ. ಘಟನೆ ನಡೆದ ದಿನವೂ ವಸೀಂ ಬಾಲಕನಿಗೆ ಕರೆ ಮಾಡಿ ತಾನಿದ್ದ ಮನೆಗೆ ಕರೆಸಿಕೊಂಡಿದ್ದು, ವಿಡಿಯೋ ತೋರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಬಾಲಕ ಪಕ್ಕದಲ್ಲಿದ್ದ ಪೇಪರ್​ ಕಟರ್​ನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ವಸೀಂ ಬಳಸುತ್ತಿದ್ದ ಮೊಬೈಲ್​ ಫೋನ್​, ಬಟ್ಟೆ ಹಾಗೂ ಶೂಗಳನ್ನು ದೋಚಿ ಬಾಲಕ ಪರಾರಿಯಾಗಿದ್ದಾನೆ. ಆರೋಪಿಯ ಹೇಳಿಕೆ ಪಡೆಯಲಾಗಿದ್ದು, ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಸೌತ್​ ಡಿಸಿಪಿ ರಾಜೇಶ್​ ಡಿಯೋ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − one =
Remember me
