ನವದೆಹಲಿ:ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಹೊಸ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್-ಹರಿಯಾಣ ಹಾಗೂ ಸುತ್ತಮುತ್ತಲ ರಾಜ್ಯಗಳ ರೈತರ ‘ದೆಹಲಿ ಚಲೋ’ ಆಂದೋಲನವನ್ನು ಹರಿಯಾಣದಲ್ಲಿ ತಡೆಯಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಸಾವಿರಾರು ರೈತರು ಪಾದಯಾತ್ರೆ ಮತ್ತು ಟ್ರ್ಯಾಕ್ಟರ್​ಗಳ ಮೂಲಕ ದೆಹಲಿಗೆ ತೆರಳಿ, ನ. 26ರಿಂದ 28ರವರೆಗೆ ದೆಹಲಿಯಲ್ಲಿ ಆಂದೋಲನ ನಡೆಸಲು ನಿರ್ಧರಿಸಿದ್ದರು. 30ಕ್ಕೂ ಹೆಚ್ಚು ರೈತ ಸಂಘಟನೆಗಳು ಆಂದೋಲನದಲ್ಲಿ ಭಾಗಿಯಾಗಿದ್ದವು. ರೈತರು ದೆಹಲಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಗಡಿಗಳನ್ನು ಮುಚ್ಚಿದ್ದರು. ಇದರಿಂದ ಕುಪಿತರಾದ ರೈತರು ದೆಹಲಿಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿ ಘರ್ಷಣೆಗೆ ಇಳಿದರು. ಬ್ಯಾರಿಕೇಡ್​ಗಳನ್ನು ನದಿಗೆ ಬಿಸಾಡಿ, ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಜಲಫಿರಂಗಿ, ಆಶ್ರುವಾಯು ಪ್ರಯೋಗಿಸಿದರು. ನೂರಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ವಿರೋಧ ಪಕ್ಷಗಳು ಪೋಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿವೆ.
ಬಿಗಿ ಬಂದೋಬಸ್ತ್:ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಪ್ರತಿಯೊಂದು ವಾಹನಗಳ ಮೇಲೂ ನಿಗಾ ಇಡಲಾಗುತ್ತಿದೆ. ಸುಮಾರು 8 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
2 ಲಕ್ಷ ರೈತರು ಭಾಗಿ ಸಾಧ್ಯತೆ:ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನಾ ರ್ಯಾಲಿಯಲ್ಲಿ 2 ಲಕ್ಷಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ-ಉಗ್ರಾಹಾನ್) ಹೇಳಿದೆ. ಅನಿರ್ಧಿಷ್ಟಾವಧಿ ಧರಣಿಗೂ ರೈತರು ಸಿದ್ಧರಾಗಿದ್ದಾರೆ ಎಂದು ಹೇಳಿದೆ.
ರೈತರಿಗೆ ಕಾಂಗ್ರೆಸ್ ಕುಮ್ಮಕ್ಕು?:ನೂತನ ಕಾಯ್ದೆಗಳನ್ನು ವಿರೋಧಿಸುತ್ತಿ ರುವವರು ನಿಜವಾದ ರೈತರಲ್ಲ. ಇವರೆಲ್ಲ ಕಾಂಗ್ರೆಸ್ ಕುಮ್ಮಕ್ಕಿನಿಂದ ಪ್ರತಿಭಟನೆಗಿಳಿದಿದ್ದಾರೆ ಎಂದು ಜಾಲತಾಣಗಳಲ್ಲಿ ಕೆಲವರು ಆರೋಪಿಸಿದ್ದಾರೆ. ಪಂಜಾಬ್ ಸರ್ಕಾರ ಇವರನ್ನು ದೆಹಲಿಗೆ ಕಳುಹಿಸುವ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ಬಳಸಿದ ಮೊದಲ ರೈತ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರದ ಜೀತೇಂದ್ರ ಭೋಯ್ ಪಾತ್ರರಾಗಿದ್ದಾರೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ ಅನ್ವಯ ಖರೀದಿದಾರರು ರೈತರಿಗೆ ವಹಿವಾಟಿನ ಮೂರು ದಿನಗಳಲ್ಲಿ ಹಣ ಪಾವತಿಸುವುದು ಕಡ್ಡಾಯವಾಗಿದೆ. ಆದರೆ ತಮಗೆ ನೀಡಬೇಕಿದ್ದ ಹಣವನ್ನು ಖರೀದಿದಾರ ನೀಡಿಲ್ಲ ಎಂದು ನೂತನ ಕಾಯ್ದೆಯಡಿ ಜೀತೇಂದ್ರ ದಾವೆ ಹೂಡಿದ್ದರು. ಇದಾದ ಬಳಿಕ ಖರೀದಿದಾರರು ಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿಸಿದ್ದಾರೆ.
ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರು ಶಾಂತಿಯುತವಾಗಿ ನಡೆಸಲು ಬಯಸುತ್ತಿರುವ ಪ್ರತಿಭಟನೆಗೆ ತಡೆಯೊಡ್ಡುವುದು ತಪು್ಪ.
|ಅರವಿಂದ ಕೇಜ್ರಿವಾಲ್ದೆಹಲಿ ಮುಖ್ಯಮಂತ್ರಿ
ರೈತರನ್ನು ತಡೆಯಬೇಡಿ, ಅವರಿಗೆ ದೆಹಲಿ ಯಲ್ಲಿ ತಮ್ಮ ಧ್ವನಿಯನ್ನು ಹೊರಹಾಕಲು ಬಿಡಿ. ದೇಶವನ್ನು ಪೋಷಿಸುವ ಕೈಗಳನ್ನು ಸರ್ಕಾರ ಹಿಡಿಯಬೇಕೆ ಹೊರತು, ದೂರ ತಳ್ಳಬಾರದು.
|ಅಮರಿಂದರ್ ಸಿಂಗ್ಪಂಜಾಬ್ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 11 =
Remember me
